ಕಣ್ಣಿನ ಆರೋಗ್ಯಕ್ಕಾಗಿ ಈ ವ್ಯಾಯಾಮಗಳನ್ನು ಫಾಲೋ ಮಾಡಿ,

ಣ್ಣುಗಳ ಒತ್ತಡ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಹೆಚ್ಚಿಸಲು ಕೆಲವು ಕಣ್ಣಿನ ಸ್ನಾಯು ವ್ಯಾಯಾಮಗಳು ಇಲ್ಲಿವೆ. ಇವುಗಳನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಪ್ರಯತ್ನಿಸಬಹುದು.ಹೆಚ್ಚಿನ ಜನರು ಸಾಮಾನ್ಯವಾಗಿ ಉತ್ತಮ ಮತ್ತು ಆರೋಗ್ಯಕರಜೀವನಶೈಲಿಗಾಗಿ ವ್ಯಾಯಾಮದ ಮೂಲಕ ದೇಹವನ್ನು ದಂಡಿಸಲು ಮುಂದಾಗುತ್ತಾರೆ.

ಆದರೆ ಉತ್ತಮ ಕಣ್ಣಿನ ದೃಷ್ಟಿಗಾಗಿ ಕಣ್ಣಿನಇದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಕಣ್ಣುಗಳನ್ನು ಆರೋಗ್ಯಗೊಳಿಸಲು ಈ ಕೆಳಗಿನ ವ್ಯಾಯಾಮಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಿ. ಕಣ್ಣುಗಳ ಒತ್ತಡ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಹೆಚ್ಚಿಸಲು ಕೆಲವು ಕಣ್ಣಿನ ಸ್ನಾಯು ವ್ಯಾಯಾಮಗಳು ಇಲ್ಲಿವೆ. ಇವುಗಳನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಪ್ರಯತ್ನಿಸಬಹುದು.

ತ್ರಾಟಕ ಕರ್ಮ ಅಥವಾ ಫೋಕಸಿಂಗ್:ತ್ರಾಟಕ ಕರ್ಮವು ಧ್ಯಾನದಂತಹ ಪ್ರಕ್ರಿಯೆಯಾಗಿದ್ದು, ಕೆಲವು ನಿಮಿಷಗಳ ವರೆಗೆ ನಿಮ್ಮ ಕಣ್ಣುಗಳಲ್ಲಿ ನೀರು ಬರುವವರೆಗೆ ಹಾಗೆಯೇ ಒಂದೇ ಕಡೆ ಗುರಿಯಾಗಿಸಿ. ಒಂದೇ ಕಡೆ ಕಣ್ಣು ಮಿಟುಕಿಸದೆ ಒಂದೇ ಕಡೆ ನೋಡುವುದರಿಂದ ಕಣ್ಣಿನಲ್ಲಿ ನೀರು ಬರಲು ಪ್ರಾರಂಭವಾಗುತ್ತದೆ. ಇದು ನಿಮ್ಮ ಕಣ್ಣುಗಳ ಸ್ನಾಯುಗಳಿಗೆ ಉತ್ತಮ ವ್ಯಾಯಾಮವಾಗಿದೆ.

ಪೆನ್ಸಿಲ್ ಪುಷ್-ಅಪ್‌ಗಳು: ಆರೋಗ್ಯಕ್ಕಾಗಿ ಪೆನ್ಸಿಲ್ ಪುಷ್‌ಅಪ್ಗಳನ್ನು ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಇದು ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಈ ಮೂಲಕ ಪ್ರೆಸ್ಬಿಯೋಪಿಯಾವನ್ನು ತಡೆಯಬಹುದು. ಇದಕ್ಕಾಗಿ, ನಿಮ್ಮ ಕಣ್ಣುಗಳ ಮುಂದೆ ತೋಳಿನ ದೂರದಲ್ಲಿ ಪೆನ್ ಅಥವಾ ಪೆನ್ಸಿಲ್ ಹಿಡಿದುಕೊಳ್ಳಿ. ನಂತರ ಎರಡು ಕಣ್ಣುಗಳಿಂದ ಪೆನ್ಸಿಲ್ ತುದಿಯನ್ನು ನೋಡಿ. ನಿಧಾನವಾಗಿ ಅದನ್ನು ನಿಮ್ಮ ಕಣ್ಣುಗಳ ಕಡೆಗೆ ತನ್ನಿ. ಪೆನ್ ಅಥವಾ ಪೆನ್ಸಿಲ್ ನಿಬ್ ಎರಡೆರಡು ಕಾಣುವ ತನ ನೀವು ಅದರ ತುದಿಯ ಮೇಲೆ ಗಮನ ಕೇಂದ್ರೀಕರಿಸಿ. ತುದಿ ವಿಭಜನೆಯಾದ ತಕ್ಷಣ, ಅದನ್ನು ಮತ್ತೆ ನಿಮ್ಮ ಕಣ್ಣಿನ ಮುಂದೆ ತನ್ನಿ. ಈ ರೀತಿಯ ಅನುಕ್ರಮವನ್ನು ಪುನರಾವರ್ತಿಸಿ. ಈ ಅನುಕ್ರಮವನ್ನು ಒಂದು ಸಮಯದಲ್ಲಿ 10 ರಿಂದ 15 ಬಾರಿ ಪುನರಾವರ್ತಿಸಿ.

ಬ್ರಾಕ್ ಸ್ಟ್ರಿಂಗ್:ಬ್ರಾಕ್ ಸ್ಟ್ರಿಂಗ್ ಒಂದು ಜನಪ್ರಿಯ ದೃಷ್ಟಿ ಚಿಕಿತ್ಸೆಯಾಗಿದ್ದು ಇದನ್ನು ದೃಶ್ಯ ವ್ಯವಸ್ಥೆಯನ್ನು ತರಬೇತಿ ಮಾಡಲು ಬಳಸಬಹುದು. ಒಂದು ಕಿಟಿಕಿಗೆ ಹಗ್ಗವನ್ನು ಕಟ್ಟಿ ನಂತರ ಹಗ್ಗಕ್ಕೆ ಮೂರು ಮಣಿಗಳನ್ನು ಪೋಣಿಸಿ. ಒಂದೊಂದು ಮಣಿಯನ್ನು 2-5 ಅಡಿ ದೂರದಲ್ಲಿರಿಸಿ. ನಂತರ ಹಗ್ಗವನ್ನು ಮೂಗಿನಿಂದ 6 ಇಂಚು ದೂರದಲ್ಲಿರಿಸಿ. ನಂತರ ಮೂರು ಮಣಿಗಳನ್ನೇ ದೃಷ್ಟಿಸಿ ನೋಡಿ. ಇದನ್ನೇ ಹಲವು ಬಾರಿ ಪುನಾರಾವರ್ತಿಸಿ.

 

ಕಣ್ಣು ಗುಡ್ಡೆಗಳನ್ನು ತಿರುಗಿಸುವುದು:ನೀವು ಮನೆಯಲ್ಲಿ ಸುಮ್ಮನೆ ಕುಳಿತಿರುವಾಗ, ತಲೆಯನ್ನು ಸ್ಥಿರವಾಗಿ ಇಟ್ಟುಕೊಂಡು ಕಣ್ಣ ಗುಡ್ಡೆಗಳನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ತಿರುಗಿಸುತ್ತಾ ಇರಿ. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ಆರಾಮವನ್ನು ನೀಡುತ್ತದೆ.ಡಿಸ್ಲೆಕ್ಸಿಯಾ, ಹೆಚ್ಚು ಮಿಟುಕಿಸುವುದು, ಕಣ್ಣುಜ್ಜುವುದು, ಕಣ್ಣಿನ ಸೆಳೆತ ಅಥವಾ ಪಾರ್ಶ್ವವಾಯು ಕಣ್ಣಿನ ಸ್ನಾಯುಗಳು, ಇತ್ಯಾದಿಗಳಂತಹ ಕೆಲವು ಕಣ್ಣಿನ ಸಮಸ್ಯೆಯನ್ನು ಹೊಂದಿರುವವರು ಈ ಮೇಲಿನ ವ್ಯಾಯಾಮವನ್ನು ಮಾಡುವ ಮುನ್ನ ನಿಮ್ಮ ಹತ್ತಿರದ ನೇತ್ರ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹಸಿರು ಕಾಫಿ ಮತ್ತು ಅದರ ಆರೋಗ್ಯ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

Wed Mar 1 , 2023
Broccoli Coffee :ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ದೇಹದಲ್ಲಿ ಅಧಿಕ ಕೊಬ್ಬಿನಿಂದಾಗಿ ಬಾಡಿ ಶೇಪ್ ಬಿಗಡಾಯಿಸಲು ಪ್ರಾರಂಭವಾಗುತ್ತದೆ. ಇದಲ್ಲದೆ ಇದರಿಂದ ಹಲವು ರೀತಿಯ ಕಾಯಿಲೆಗಳು ಬರುವ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೈನಂದಿನ ವ್ಯಾಯಾಮದ ಜೊತೆಗೆ, ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರವನ್ನು ಆಯ್ದುಕೊಳ್ಳಲು ಸಲಹೆ ನೀಡಲಾಗುತ್ತದೆ. ನೀವೂ ಕೂಡ ನಿಮ್ಮ ತೂಕವನ್ನು ಬಯಸುತ್ತಿದ್ದರೆ, ಹಸಿರು ಚಹಾದ ಜೊತೆಗೆ ನೀವು […]

Advertisement

Wordpress Social Share Plugin powered by Ultimatelysocial