ಹಸಿರು ಕಾಫಿ ಮತ್ತು ಅದರ ಆರೋಗ್ಯ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

Broccoli Coffee :ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ದೇಹದಲ್ಲಿ ಅಧಿಕ ಕೊಬ್ಬಿನಿಂದಾಗಿ ಬಾಡಿ ಶೇಪ್ ಬಿಗಡಾಯಿಸಲು ಪ್ರಾರಂಭವಾಗುತ್ತದೆ. ಇದಲ್ಲದೆ ಇದರಿಂದ ಹಲವು ರೀತಿಯ ಕಾಯಿಲೆಗಳು ಬರುವ ಅಪಾಯವೂ ಹೆಚ್ಚಾಗುತ್ತದೆ.

ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೈನಂದಿನ ವ್ಯಾಯಾಮದ ಜೊತೆಗೆ, ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರವನ್ನು ಆಯ್ದುಕೊಳ್ಳಲು ಸಲಹೆ ನೀಡಲಾಗುತ್ತದೆ. ನೀವೂ ಕೂಡ ನಿಮ್ಮ ತೂಕವನ್ನು ಬಯಸುತ್ತಿದ್ದರೆ, ಹಸಿರು ಚಹಾದ ಜೊತೆಗೆ ನೀವು ಹಸಿರು ಕಾಫಿ ಕೂಡ ಸೇವಿಸಬಹುದು. ಹೌದು, ಈ ಹಸಿರು ಬಣ್ಣದ ಕಾಫಿಯನ್ನು ವಿಶೇಷ ರೀತಿಯ ತರಕಾರಿಯಿಂದ ತಯಾರಿಸಲಾಗುತ್ತದೆ. ಬನ್ನಿ ತಿಳಿದುಕೊಳ್ಳೋಣ,

ತೂಕ ಇಳಿಕೆಗೆ ಬ್ರೊಕೊಲಿ ಕಾಫಿ ಕುಡಿಯಿರಿ
ತೂಕವನ್ನು ಇಳಿಕೆ ಮಾಡಿಕೊಳ್ಳಲು, ನೀವು ಬ್ರೊಕೊಲಿ ಕಾಫಿಯನ್ನು ಸೇವಿಸಬಹುದು. ಇದು ದೇಹಕ್ಕೆ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ನಿಮ್ಮಿಂದ ಸಾಕಷ್ಟು ತರಕಾರಿಗಳನ್ನು ತಿನ್ನಲು ಸಾಧ್ಯವಾಗದಿದ್ದರೆ, ಬ್ರೊಕೊಲಿ ಕಾಫಿಯನ್ನು ತೆಗೆದುಕೊಳ್ಳಿ. ಬ್ರೊಕೊಲಿ ಕಾಫಿ ದೇಹದ ತೂಕವನ್ನು ಇಳಿಕೆ ಮಾಡಲು ಪರಿಣಾಮಕಾರಿಯಾಗಿದೆ. ಅದರಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಅಲ್ಲದೆನಿಂದ ಸಮೃದ್ಧವಾಗಿದೆ, ಇದು ತೂಕ ಇಳಿಕೆಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. ಬ್ರೊಕೊಲಿ ಕಾಫಿಯಲ್ಲಿ ಸೂಕ್ಷ್ಮ ಪೋಷಕಾಂಶಗಳಿವೆ, ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಬ್ರೊಕೊಲಿ ಕಾಫಿ ತಯಾರಿಸುವುದು ಹೇಗೆ?
>> ಬ್ರೊಕೊಲಿ ಕಾಫಿಯನ್ನು ತಯಾರಿಸಲು, ಮೊದಲು ಬ್ರೊಕೊಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ.
>> ನಂತರ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಡಬ್ಬಿಯೊಂದರಲ್ಲಿ ಸಂಗ್ರಹಿಸಿ. ಇದಲ್ಲದೆ, ನೀವು ಮಾರುಕಟ್ಟೆಯಿಂದ ಬ್ರೊಕೊಲಿ ಪುಡಿಯನ್ನು ಸಹ ಖರೀದಿಸಬಹುದು.
>> ಕಾಫಿ ತಯಾರಿಸಲು, ಗ್ಯಾಸ್ ಮೇಲೆ 1 ಕಪ್ ಹಾಲನ್ನು ಬಿಸಿ ಮಾಡಿ.
>> ಇದಕ್ಕೆ ಬ್ರೊಕೊಲಿ ಪೌಡರ್ ಹಾಕಿ ಚೆನ್ನಾಗಿ ಕುದಿಸಿ. ಈ ಕಾಫಿ ಕುಡಿಯುವುದರಿಂದ ತೂಕ ಬೇಗ ಇಳಿಕೆಯಾಗುತ್ತದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್ಚರ.! ಅನ್ನವನ್ನು ಹೆಚ್ಚಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ.

Wed Mar 1 , 2023
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ನಮ್ಮ ದೇಶದಲ್ಲಿ ಅತ್ಯಧಿಕವಾಗಿ ಸೇವಿಸುವ ಆಹಾರ ಅಕ್ಕಿ ಅಥವಾ ಅನ್ನ . ಬಹಳ ಮಂದಿ ಅನ್ನ ಇಲ್ಲದ ಊಟ ಮಾಡುತ್ತಾರೆ. ನಿತ್ಯ ಅನ್ನ ತಿನ್ನುವುದರಿಂದ ಒಳ್ಳೆಯದೇ , ಕೆಟ್ಟದೇ ಅನ್ನೋದರ ಬಗ್ಗೆ ಹೆಚ್ಚಿನ ಜನರು ಚರ್ಚೆ ನಡೆಸುತ್ತಿರುತ್ತಾರೆ. ಅನ್ನ ತಿಂದರೆ ತೂಕ ಹೆಚ್ಚುತ್ತದೆ ಎಂಬ ಭಯವನ್ನು ಹೊಂದಿದ್ದಾರೆ, ಇನ್ನೂ ಮಧುಮೇಹ ಬರುತ್ತದೆ ಎಂದುಕೆಲವರ ಅಭಿಪ್ರಾಯವೂ ಆಗಿದೆ. ಅದರಲ್ಲೂ ಬಿಳಿ ಅಕ್ಕಿಯಲ್ಲಿ ಜೀವಸತ್ವಗಳು ಮತ್ತು ಖನಿಜಗಳು […]

Advertisement

Wordpress Social Share Plugin powered by Ultimatelysocial