ಕೆನಡಾದಲ್ಲಿನ್ನು ವಿದೇಶಿಯರು ಮನೆ ಕೊಳ್ಳುವಂತಿಲ್ಲ!

ಟ್ಟಾವ: ಕೆನಡಾದಲ್ಲಿ ವಿದೇಶೀಯರು ಮನೆ ಕೊಳ್ಳುವುದಕ್ಕೆ ಅಲ್ಲಿನ ಸರ್ಕಾರ ವಿಧಿಸಿರುವ ನಿಷೇಧ ಜ.1ರಿಂದಲೇ ಜಾರಿಯಾಗಿದೆ. ವಿದೇಶೀಯರಿಗೆ ಮನೆಗಳನ್ನು ಕೊಳ್ಳುವುದಕ್ಕೆ ಅವಕಾಶ ನೀಡಿರುವ ಪರಿಣಾಮ, ಸ್ವದೇಶೀಯರಿಗೆ ಮನೆಗಳು ಸಿಗದ ಮಟ್ಟಕ್ಕೆ ಬೆಲೆಗಳು ಏರಿವೆ!

ಇದನ್ನು ಮನಗಂಡು ಸರ್ಕಾರ ಈ ನಿರ್ಧಾರ ಮಾಡಿದೆ.

ನಿಷೇಧವಿರುವುದು ನಗರದಲ್ಲಿರುವ ಮನೆಗಳನ್ನು ಕೊಳ್ಳುವುದಕ್ಕೆ ಮಾತ್ರ. ಆದರೆ ಬೇಸಿಗೆ ಕಾಲದ ಮನರಂಜನಾ ನಿವಾಸಗಳನ್ನು ಕೊಳ್ಳುವುದಕ್ಕೆ ಈಗಲೂ ಅವಕಾಶ ನೀಡಲಾಗಿದೆ. ಆದರೆ ನಿರಾಶ್ರಿತರು, ಕೆನಡಾ ಪ್ರಜೆಗಳಲ್ಲದಿದ್ದರೂ ಇಲ್ಲೇ ಶಾಶ್ವತವಾಗಿ ವಾಸಿಸುವ ವ್ಯಕ್ತಿಗಳಿಗೆ ಮನೆ ಕೊಳ್ಳಲು ಅವಕಾಶ ನೀಡಲಾಗಿದೆ.

ಕೆನಡಾದಲ್ಲಿ ಮನೆಗಳನ್ನು ಕೊಳ್ಳುವುದಕ್ಕೆ ಬಹಳ ಬೇಡಿಕೆಯಿರುವುದನ್ನು ಲಾಭಕೋರರು, ಶ್ರೀಮಂತ ಕಂಪನಿಗಳು, ವಿದೇಶಿ ಹೂಡಿಕೆದಾರರು ಬಳಸಿಕೊಳ್ಳುತ್ತಿದ್ದಾರೆ. ಅದರ ಪರಿಣಾಮ ಕಡಿಮೆ ಬಳಕೆಯಾಗುತ್ತಿರುವ, ಖಾಲಿಖಾಲಿಯಾಗಿರುವ ಮನೆಗಳು ಹುಟ್ಟಿಕೊಂಡಿವೆ. ಬೇಕಾಬಿಟ್ಟಿ ಊಹೆಗಳು ಶುರುವಾಗಿವೆ. ಬೆಲೆಗಳು ಗಗನಕ್ಕೇರಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮುಲ್, ಕೆಎಂಎಫ್ ವಹಿವಾಟು ಹೇಗಿದೆ?

Tue Jan 3 , 2023
    ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ವಿಲೀನವಾಗುವ ಬಗ್ಗೆ ಸಾಕಷ್ಟು ಚರ್ಚೆಗಳು ಸದ್ಯ ನಡೆಯುತ್ತಿದೆ. ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಈ ಬಗ್ಗೆ ಸ್ಪಷ್ಟಣೆ ನೀಡಿದ್ದರೂ ಕೂಡಾ ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆ ಇಂದಿಗೂ ವಿವಾದವಾಗಿಯೇ ಉಳಿದಿದೆ.ಈಗಾಗಲೇ ಹಲವಾರು ಸಂಸ್ಥೆಗಳನ್ನು ವಿಲೀನಗೊಳಿಸಲಾಗಿದೆ. ಬ್ಯಾಂಕ್‌ಗಳಿಂದ ಹಿಡಿದು ಹಲವಾರು ಸಂಸ್ಥೆಗಳು ಪ್ರಮುಖವಾಗಿ […]

Advertisement

Wordpress Social Share Plugin powered by Ultimatelysocial