ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.

ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ನಿನ್ನೆ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದಾರೆ.

ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ  ಸಮೀಪದಲ್ಲಿರುವಾಗಲೇ ಹಿಂದೂ ಫೈರ್ ಬ್ರಾಂಡ್ ಎಂದು ಹೆಸರಾಗಿದ್ದ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ   ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ನಿನ್ನೆ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದ ಬಿಎಸ್ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದಾರೆ. ಹಿರಿಯರಿಗೆ ಟಿಕೆಟ್ ನಿರಾಕರಣೆ ಬಗ್ಗೆ ಮಾಹಿತಿ ಲಭ್ಯವಾದ ಹಾಗೂ ಪುತ್ರ ಕಾಂತೇಶ್ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗಲು ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಈಶ್ವರಪ್ಪ ಅವರು ಸಮುದಾಯದ ಸ್ವಾಮೀಜಿಗಳು ಹಾಗೂ ಸಂಘ ಪರಿವಾರದ ಮುಖಂಡರ ಜತೆಗೂ ಚರ್ಚಿಸಿ ನಿವೃತ್ತಿ ನಿರ್ಣಯ ಕೈಗೊಂಡು ಬಳಿಕ ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ  ಪತ್ರ ಕಳುಹಿಸಿದ್ದಾರೆ.

ಚುನಾವಣಾ ರಾಜಕೀಯದಿಂದ ಹಿಂದೆಸರಿದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಈಶ್ವರಪ್ಪ, ರಾಜ್ಯ ಚುನಾವಣಾ ಸಮಿತಿಯ ಗಮನಕ್ಕೆ ತಂದಿದ್ದೆ. ಆದರೆ ನನ್ನ ಮಾತಿಗೆ ಯಾರು ಗಮನ ಕೊಡಲಿಲ್ಲ. ಹೀಗಾಗಿ ಇವತ್ತು ಬೆಳಿಗ್ಗೆ ರಾಷ್ಟ್ರೀಯ ಅದ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತಿದ್ದೇನೆ. ಕೇಂದ್ರದ ನಾಯಕರು ನನ್ನ ಮನವಿ ಪರಿಗಣಿಸುವ ವಿಶ್ವಾಸವಿದೆ ಎಂದರು.

 ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಿವೃತ್ತಿ ಹೊಂದುವಂತೆ ನನಗೆ ಯಾರ ಒತ್ತಡವೂ ಇರಲಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ರಾಜ್ಯದಲ್ಲಿ ಸಂಘಟನೆಗೆ ಶಕ್ತಿ ತುಂಬಬೇಕು. ರಾಜ್ಯದಲ್ಲಿ ಬಿಜೆಪಿ ಒಮ್ಮೆಯೂ ಬಹುಮತದಿಂದ ಸರ್ಕಾರ ರಚಿಸಿಲ್ಲ. ಈ ಬಾರಿ ಪೂರ್ಣ ಬಹುಮತದ ಸರ್ಕಾರ ಬರಬೇಕು. ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. ಈಶ್ವರಪ್ಪ ಚುನಾವಣೆ ನಿವೃತ್ತಿ ನಿರ್ಧಾರಕ್ಕೆ ಕಾರ್ಯಕರ್ತರ ಆಕ್ರೋಶ  ಈಶ್ವರಪ್ಪ ಅವರು ಚುನಾವಣೆಯಿಂದ ಹಿಂದೆ ಸರಿದಿರುವುದನ್ನು ಖಂಡಿಸಿರುವ ಕಾರ್ಯಕರ್ತರು, ಬೆಂಬಲಿಗರು ಈಶ್ವರಪ್ಪ ನಿವಾಸದ ಎದುರು ಜಮಾಯಿಸಿ ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಈ ಬಾರಿಯ ಚುನಾವಣೆಯಲ್ಲಿ ಈಶ್ವರಪ್ಪಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಪಟ್ಟು ಹಿಡಿದರು. ಮಾತ್ರವಲ್ಲದೆ, ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಅವರನ್ನು ಹೊತ್ತು ಮೆರೆಸಿದರು. ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಿದ್ದಾರೆ.

ಪಕ್ಷದ ಯಾವ ಕಾರ್ಯಕರ್ತರು ಕೂಡ ಬೇಸರವಾಗಬಾರದು: ಕಾಂತೇಶ್  ಚುನಾವಣಾ ರಾಜಕೀಯಕ್ಕೆ ನನ್ನ ತಂದೆ ನಿವೃತ್ತಿ ಘೋಷಣೆ ಮಾಡಿರುವುದು ನಿಜ. ಈ ಬಗ್ಗೆ ಯಾವುದೇ ಒತ್ತಡ ಇರಲಿಲ್ಲ. ಯೋಚನೆ ಮಾಡಿಯೇ ನಮ್ಮ ತಂದೆ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಬೇಸರವಾಗಬಾರದು ಎಂದು ಈಶ್ವರಪ್ಪ ಪುತ್ರ ಕಾಂತೇಶ್ ಮನವಿ ಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ

Wed Apr 12 , 2023
  ನಿಮ್ಮ ಆರೋಗ್ಯ ಸುಧಾರಿಸಲು ಸಹಕಾರಿಯಾಗುವ ಕೆಲಸಗಳನ್ನು ಮಾಡಬಹುದಾದ ಒಂದು ದಿನ. ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸ್ನೇಹಿತರ ಜೊತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ಸಮಸ್ಯೆಗಳನ್ನು ದೂರ ತಳ್ಳಿ ಹಾಗೂ ಮನೆಯಲ್ಲಿ ಸ್ನೇಹಿತರ ನಡುವೆಯೆರಡೂ ನಿಮ್ಮ ಸ್ಥಾನವನ್ನು ಸುಧಾರಿಸುವಲ್ಲಿ ಮನಸ್ಸು ನೀಡಿ. ನೀವು ಯಾರಾದರೂ ವಿಶೇಷವಾದವರ ಗಮನ ಸೆಳೆಯುತ್ತೀರಿ –ನೀವು ನಿಮ್ಮ ಗುಂಪಿನಲ್ಲಿ ಚಲಿಸಿದಲ್ಲಿ. ನಿಮ್ಮ ಯೋಜನೆಗಳ ಬಗ್ಗೆ ತುಂಬಾ ಮುಕ್ತತೆ ಹೊಂದಿದ್ದಲ್ಲಿ ನೀವು […]

Advertisement

Wordpress Social Share Plugin powered by Ultimatelysocial