ಭಗವದ್ಗೀತಾಚಾರ್ಯ ಶ್ರೀ ಕೆ. ವಿ. ಶಿವಸ್ವಾಮಿ

ಶಿವಮೊಗ್ಗ ಜಿಲ್ಲೆಯವರಾದ ಕೆ. ವಿ. ಶಿವಸ್ವಾಮಿ ಅವರು ಕಳೆದ 14 ವರ್ಷಗಳಿಂದ ಭಗವದ್ಗೀತೆಯನ್ನು ಜನರಿಗೆ ನಿರಂತರವಾಗಿ, ಯಾವುದೇ ಶುಲ್ಕವಿಲ್ಲದೆ ಬೋಧಿಸುತ್ತ ಬಂದಿದ್ದಾರೆ. ಇವರು ತಮ್ಮ ಜೀವನವನ್ನು ಶ್ರೀ ಕೃಷ್ಣನ ಸೇವೆಗೆ ಮತ್ತು ಭಗವದ್ಗೀತೆಯ ಪ್ರಚಾರಕ್ಕೆ ಮುಡಿಪಾಗಿಟ್ಟಿದ್ದಾರೆ. ಇವರಿಗೆ, ಭಾರತ , ಅಮೆರಿಕ, ಆಫ್ರಿಕ, ಯೂರೋಪ್ ಮತ್ತು ಪೂರ್ವ ಏಷ್ಯಾದಲ್ಲಿ ಅನೇಕ ಶಿಷ್ಯರಿದ್ದಾರೆ.
ಶಿವಸ್ವಾಮಿ ಅವರು ಶೃಂಗೇರಿಯಲ್ಲಿ ಬಿ.ಎ. ಪದವಿಯ ನಂತರ, ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಡಿಪ್ಲೋಮಾ ಪಡೆದರು.
ಕೊಪ್ಪದ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿದ ಶಿವಸ್ವಾಮಿ ಅವರು ಮುಂದೆ ಶಿವಮೊಗ್ಗ ಮತ್ತು ಹರಿಹರಪುರಗಳಲ್ಲಿ ಅಧ್ಯಾಪನ ನಡೆಸಿದರು. ಶಿವಮೊಗ್ಗ, ಭದ್ರಾವತಿ, ಬಸರಿಕಟ್ಟೆ ಮುಂತಾದೆಡೆ ವಿಶೇಷ ಇಂಗ್ಲಿಷ್ ಬೋಧಕರಾಗಿಯೂ ಅನೇಕ ಸಂಸ್ಥೆಗಳಲ್ಲಿ ಇವರ ಸೇವೆ ಸಂದಿತು.
ಶಿವಸ್ವಾಮಿ ಅವರಿಗೆ ತಮಿಳುನಾಡಿನ ಅನುಸೋನಿಯ ಹಂಸಾಶ್ರಮದ ದಿವಂಗತ ಶ್ರೀ ವಿರಜೇಶ್ವರ ಸ್ವಾಮೀಜಿ ಅವರಿಂದ ಗೀತೆಯ ಸಂದೇಶವನ್ನು ಸಮಾಜದೆಲ್ಲೆಡೆ ಪಸರಿಸಲು ಪ್ರೇರಣೆಯಾಯಿತು. ಪೊನ್ನಂಪೇಟೆಯಲ್ಲಿದ್ದ ಶ್ರೀರಾಮಕೃಷ್ಣ ಮಠದ ಸ್ವಾಮಿ ಜಗದಾತ್ಮಾನಂದಜೀ ಅವರ ಪ್ರೋತ್ಸಾಹ ಆಶೀರ್ವಾದವೂ ಇವರ ಈ ಕಾರ್ಯಕ್ಕೆ ಸಂದಿತು. ಹೀಗೆ 2000ದ ಇಸವಿಯಿಂದ ಆರಂಭಗೊಂಡಂತೆ ಎಲ್ಲ ಹದಿನೆಂಟು ಅಧ್ಯಾಯಗಳ ಶ್ಲೋಕಗಳನ್ನೂ ಪಠಿಸುವುದು ಇವರ ಅಭ್ಯಾಸವಾಯಿತು.
ಸಿರ್ಸಿಯ ಶ್ರೀ ಸೊಂದಾ ಸ್ವರ್ಣವಲ್ಲೀ ಮಠದ ಭಗವದ್ಗೀತಾ ಅಭಿಯಾನದಲ್ಲಿ ಮಾರ್ಗದರ್ಶಿಗಳಾಗಿ ಸಕ್ರಿಯ ಭಾಗವಹಿಕೆ ನೀಡಿದರು.
ಮುಂದೆ ಶಿವಸ್ವಾಮಿ ಅವರ ಗೀತಾ ಪ್ರವಚನಗಳು ಶಾಲಾ ಕಾಲೇಜುಗಳಲ್ಲಿ, ನಾಡಿನ ನೂರಾರು ವೇದಿಕೆಗಳಲ್ಲಿ, ಕಿರುತೆರೆಯ ವಾಹಿನಿಗಳಲ್ಲಿ, ಅಮೆರಿಕದ ಹಲವಾರು ಕೇಂದ್ರಗಳನ್ನು ಒಳಗೊಂಡಂತೆ ಹಲವು ದೇಶಗಳಲ್ಲಿ ನಿರಂತರ ನಡೆಯುತ್ತ ಬಂದಿವೆ.
ಅಸಂಖ್ಯಾತ ವೀಕ್ಷಣೆಗಳಿಂದ ಜನಪ್ರಿಯಗೊಂಡಿದೆ. ಶಿವಮೊಗ್ಗದಲ್ಲಿ ಇವರ ನೇರ ಉಚಿತ ತರಗತಿಗಳಲ್ಲಿ ಅಸಂಖ್ಯಾತ ಮಂದಿ ಲಾಭ ಪಡೆದಿದ್ದಾರೆ. Zoom ಮೂಲಕ ಸಹಾ ಇವರ ತರಗತಿಗಳ ಲಾಭ ಪಡೆಯಬಹುದಾಗಿದೆ.ಆಚಾರ್ಯ ಶಿವಸ್ವಾಮಿ ಅವರನ್ನು ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಬೆಂಗಳೂರು ಮತ್ತು ಆಸುಪಾಸಿನಲ್ಲಿ ನೆಲೆಸಿರುವ , ಶ್ರೀ ಶಿವಸ್ವಾಮಿ ಕೆ.ವಿ. ಯವರ ಶಿಷ್ಯವೃಂದದವರು ,2022ರ ಡಿಸೆಂಬರ್ 18 , ಭಾನುವಾರದಂದು ವಿಜಯನಗರದ ಶ್ರೀ ಆದಿಚುಂಚನಗಿರಿ ಕನ್ವೆಂಷನ್ ಹಾಲ್ನಲ್ಲಿ , ಗೀತಾ ಜಯಂತಿಯನ್ನು ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಆಚರಿಸಿದರು. ಆಚಾರ್ಯ ಶಿವಸ್ವಾಮಿ ಅವರ ನೇತೃತ್ವದಲ್ಲಿ , ಸಂಪೂರ್ಣ ಭಗವದ್ಗೀತೆ ಪಾರಾಯಣ, ಆರತಿ, ಭಜನೆ ಮುಂತಾದ ಕಾರ್ಯಕ್ರಮಗಳನ್ನು ಗೀತಾ ಜಯಂತಿಯ ಅಂಗವಾಗಿ ನಡೆಸಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಮನೆಮುಂದೆ ನಿಲ್ಲಿಸಿದ ಕಾರ್ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

Thu Dec 22 , 2022
ಮನೆಮುಂದೆ ನಿಲ್ಲಿಸಿದ ಕಾರ್ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ ವಿದ್ಯಾರಾಣ್ಯಪುರ ಪೊಲೀಸರಿಂದ ಸದ್ದಾ ಹುಸೇನ್ ಬಂಧನ ಬಂಧಿತನಿಂದ 5 ಲಕ್ಷ ಮೌಲ್ಯದ ಮೂರು ಕಾರು, ಎರಡು ದ್ವಿಚಕ್ರ ವಾಹನ ವಶಕ್ಕೆ ನಕಲಿ ಕೀ ಬಳಸಿ ಆರೋಪಿ ವಾಹನಗಳನ್ನು ‌ಕಳ್ಳತನ ಮಾಡುತ್ತಿದ್ದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details… Please follow and like us:

Advertisement

Wordpress Social Share Plugin powered by Ultimatelysocial