ತನಗೆ ತಾನೇ ವಾಟ್ಸ್​ ಆಪ್​ ನಲ್ಲಿ ಶ್ರದ್ಧಾಂಜಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ..!

ಮುಂಬೈ, ಜ.24. ಕೆಲವರು ತಮಗೆ ತಾವೇ ವಿಚಿತ್ರವಾಗಿ ಅಂತ್ಯ ಹೇಳಿಕೊಳ್ಳುತ್ತಾರೆ.

ಅಂಥದ್ದೇ ಒಂದು ಪ್ರಕರಣ ಇಲ್ಲೊಂದು ಕಡೆ ನಡೆದಿದ್ದು, ಯುವಕನೊಬ್ಬ ತನಗೇ ತಾನೇ ವಾಟ್ಸ್​ ಆಪ್​ನಲ್ಲಿ ಶ್ರದ್ಧಾಂಜಲಿ ಸ್ಟೇಟಸ್ ಹಾಕಿಕೊಂಡಿದ್ದ. ವಿಚಿತ್ರವೆಂದರೆ ಆತ ಹಾಗೆ ಸ್ಟೇಟಸ್ ಹಾಕಿಕೊಂಡ ಕೆಲವೇ ಗಂಟೆಗಳಲ್ಲಿ ಆತನ ಶವ ಮರವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿತ್ತು ಎನ್ನಲಾಗಿದೆ.

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ನೇರಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್‌ಇನ ರಿಷಿಕೇಶ್ ದಿಲಿಪ್​ ಖೊಡ್ಪೆ (25) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಜತೆ ನೆಲೆಸಿದ್ದ ಈತ ಮೂಡ್ ಆಫ್​ ಅಂತ ವಾಟ್ಸ್​ ಆಪ್​ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ.

ಮರುದಿನ ತನಗೆ ತಾನೇ ಶ್ರದ್ಧಾಂಜಲಿ ಹೇಳಿಕೊಳ್ಳವಂತೆ ಭಾವನಾತ್ಮಕವಾಗಿ ಸ್ಟೇಟಸ್ ಹಾಕಿಕೊಂಡಿದ್ದ ಈತ, ನಂತರ ತನ್ನ ಕಸಿನ್ ಪ್ರದೀಪ್ ಖೊಡ್ಪೆಗೆ ಕರೆ ಮಾಡಿ, ನಿನ್ನನ್ನು ಬಿಟ್ಟು ಹೋಗುವುದಾಗಿ ಹೇಳಿದ್ದ. ಎಲ್ಲಿದ್ದಿಯಾ ಎಂದು ಪ್ರದೀಪ್ ಕೇಳಿದಾಗ ಗೋರಖ್ ಬಾಬಾ ಫಾರ್ಮ್​ನಲ್ಲಿದ್ದೇನೆ ಎಂದಿದ್ದ. ಕೂಡಲೇ ಪ್ರದೀಪ್ ಅಲ್ಲಿಗೆ ಹೋದರೆ ಅಲ್ಲಿನ ಮರವೊಂದರಲ್ಲಿ ರಿಷಿಕೇಶ್ ನೇಣು ಹಾಕಿಕೊಂಡಿದ್ದ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ಕಿ ಸಾಗಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಕಾರು ̤

Tue Jan 24 , 2023
ಕೇರಳ, ಜ.24. ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಅಂಬಲಪುಳ ಬಳಿ ನಸುಕಿನ ವೇಳೆ ನಡೆದಿದೆ. ಇವರಲ್ಲಿ ನಾಲ್ವರು ತಿರುವನಂತಪುರಂ ಮೂಲದವರಾಗಿದ್ದು, ನಗರದ ಇಸ್ರೋ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.ಆಂಧ್ರಪ್ರದೇಶದಿಂದ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಐವರು ಪ್ರಯಾಣಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿದ್ದ ಮತ್ತೊಬ್ಬರು ವೈದ್ಯಕೀಯ ಕಾಲೇಜು […]

Advertisement

Wordpress Social Share Plugin powered by Ultimatelysocial