ಗೋಧ್ರೋತ್ತರ ಗಲಭೆ.

ಗಾಂಧಿನಗರ: ಗುಜರಾತ್‌ ಹತ್ಯಾಕಾಂಡ ಮತ್ತು ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇಬ್ಬರು ಮಕ್ಕಳನ್ನು ಒಳಗೊಂಡು 17 ಮಂದಿ ಮುಸ್ಲಿಮರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ 19 ಮಂದಿ ಆರೋಪಿಗಳನ್ನು ಗುಜರಾತ್‌ನ ಪಂಚಮಹಲ್‌ನ ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಘಟನೆಯ ಸ್ಥಳದಲ್ಲಿ ಸಂತ್ರಸ್ತರ ಮೃತ ದೇಹಗಳು ದೊರೆತಿಲ್ಲ ಎಂದು ಹೇಳಿರುವ ನ್ಯಾಯಾಲಯವು ಅಪರಾಧ ಘಟಿಸಿರುವಿಕೆ ನಿರೂಪಿಸುವ ತತ್ವದ (ಕಾರ್ಪಸ್‌ ಡೆಲಿಕ್ಟಿ) ಆಧಾರದಲ್ಲಿ 19 ಮಂದಿಯನ್ನು ಸಾಕ್ಷ್ಯ ಕೊರತೆಯ ಕಾರಣ ನೀಡಿ ಖುಲಾಸೆಗೊಳಿಸಿದೆ. ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಹರ್ಷ ತ್ರಿವೇದಿ ಅಪರಾಧ ಘಟಿಸಿರುವಿಕೆಯನ್ನು ನಿರೂಪಿಸಬೇಕಾದ್ದು ಕೊಲೆ ತನಿಖೆಯಲ್ಲಿ ಪ್ರಮುಖ ವಿಚಾರ ಎಂದು ಹೇಳಿದ್ದಾರೆ.

“ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲು ಮೃತದೇಹ ಅಥವಾ ಮೃತದೇಹದ ಸಾಕ್ಷ್ಯವು ಪೊಲೀಸರಿಗೆ ಲಭ್ಯವಾಗಬೇಕು. ಯಾರೋ ಒಬ್ಬರು ನಾಪತ್ತೆಯಾದರೆ ಪೊಲೀಸರ ಬಳಿ ಮೃಹದೇಹವಿಲ್ಲದಿದ್ದರೆ ಅಥವಾ ಕನಿಷ್ಠ ಪಕ್ಷ ಮೃತದೇಹದ ಸಾಕ್ಷ್ಯ ಲಭ್ಯವಾಗದಿದ್ದರೆ ಪೊಲೀಸರು ಹೇಗೆ ತಾನೆ ಮುಂದುವರಿಯಲು ಅಥವಾ ಕೆಲಸ ಮಾಡಲು ಸಾಧ್ಯ. ಅಪರಾಧ ಘಟಿಸಿರುವಿಕೆ ನಿರೂಪಿಸುವುದು (ಕಾರ್ಪಸ್‌ ಡೆಲಿಕ್ಟಿ) ಸಾಧ್ಯವಾಗದಿದ್ದರೆ ಯಾರನ್ನೂ ಅಪರಾಧಿ ಎಂದು ಘೋಷಿಸಲಾಗದು ಎಂಬುದು ಸಾಮಾನ್ಯ ತತ್ವ. ಹಾಲಿ ಪ್ರಕರಣದಲ್ಲಿ ಸುಟ್ಟ ಮೂಳೆಯ ತುಂಡುಗಳಿಂದ (ನಾಪತ್ತೆಯಾದ ವ್ಯಕ್ತಿಗಳು ಎನ್ನಲಾದ ಆರೋಪ) ವಂಶವಾಹಿ ಚಿತ್ರಣದ ಫಲಿತಾಂಶ ಪಡೆಯಲಾಗದು ಎಂದ ಮೇಲೆ ಸ್ವಯಂಚಾಲಿತವಾಗಿ ಅಪರಾಧ ಘಟಿಸಿರುವಿಕೆ ನಿರೂಪಣಾ ತತ್ವವನ್ನು ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಹದಿನೇಳು ಮಂದಿಯನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಲು ಮೃತದೇಹಗಳನ್ನು ಸುಟ್ಟಿರುವ ಆರೋಪದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಗುಜರಾತ್‌ನಲ್ಲಿ ಸಂಭವಿಸಿದ್ದ ಗೋಧ್ರೋತ್ತರ ಕೋಮು ಗಲಭೆಯ ಸಂದರ್ಭದಲ್ಲೇ 2002ರ ಫೆಬ್ರವರಿ 28ರಂದು ದೆಲೋಲ್‌ ಗ್ರಾಮದಲ್ಲಿ ಸಂತ್ರಸ್ತರನ್ನು ಕೊಲ್ಲಲಾಗಿತ್ತು. ಪಂಚಮಹಲ್‌ನ ಗೋಧ್ರಾ ಪಟ್ಟಣದ ಸಮೀಪ 2002ರ ಫೆಬ್ರವರಿ 27ರಂದು ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ್ದರಿಂದ ಗಲಭೆ ಆರಂಭವಾಗಿತ್ತು. ಘಟನೆಯಲ್ಲಿ 59 ಮಂದಿ ಸಾವನ್ನಪ್ಪಿದ್ದರು. ರೈಲಿನಲ್ಲಿದ್ದ ಹೆಚ್ಚಿನವರು ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರಾಗಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟ ರಾಷ್ಟ್ರೀಯ ನಾಯಕ.

Fri Jan 27 , 2023
ಚಿಕ್ಕಮಗಳೂರು, ಜನವರಿ 27: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದ್ದು, ಭವಾನಿ ರೇವಣ್ಣ ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನದಲ್ಲಿಯೇ ನನ್ನ ಹೆಸರು ಘೋಷಣೆಯಾಗಲಿದೆ ಎಂದಿದ್ದರು. ಆದರೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಎಲ್ಲರಿಗೂ ಚುನಾವಣೆಯಲ್ಲಿ ನಿಲ್ಲಬೇಕು ಎಂಬ ಆಸೆ ಇರುತ್ತದೆ. ಹಾಸನದಲ್ಲಿ ಅನಿವಾರ್ಯ ಇದ್ದಿದ್ದರೇ ನಾನೇ ನಿಲ್ಲಿಸುತ್ತಿದ್ದೆ, ಆದರೆ ಅಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ ಎಂದು ಹೇಳುವ […]

Advertisement

Wordpress Social Share Plugin powered by Ultimatelysocial