ಏರುತ್ತಲೇ ಇದೆ ಚಿನ್ನದ ದರ, 10 ಗ್ರಾಂಗೆ ₹68,000 ಮುಟ್ಟಬಹುದು ಎನ್ನುತ್ತಿದ್ದಾರೆ ತಜ್ಞರು!.

 

ಚಿನ್ನದ ರೇಟು ಈಗಾಗಲೇ 10 ಗ್ರಾಂಗೆ 60,000 ರೂ.ಗೆ ಮುಟ್ಟಿದೆ. ಈ ದರ ಮುಂದಿನ ದಿನಗಳಲ್ಲಿ 63,000 ರೂ.ಗೆ ಏರಿಕೆ ಆಗಬಹುದು ಅನ್ನುವ ಅಂದಾಜಿದೆ. 2023ರ ಕೊನೆಗೆ ಅಥವಾ ಮುಂದಿನ ವರ್ಷ ಚಿನ್ನದ ರೇಟು 10 ಗ್ರಾಂಗೆ 68,000 ರೂಪಾಯಿ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.ಅಂತಾರಾಷ್ಟ್ರೀಯ ಮಟ್ಟದ ತಲ್ಲಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಲವಾರು ಬಿಕ್ಕಟ್ಟುಗಳು ಎದುರಾಗಿವೆ. ಆರ್ಥಿಕ ಹಿಂಜರಿತ, ರಷ್ಯಾ-ಉಕ್ರೇನ್‌ ಯುದ್ಧ ಸೇರಿದಂತೆ ಹಲವು ಕಾರಣಗಳಿಂದಾಗಿ ಹೂಡಿಕೆದಾರರಿಗೆ ಚಿನ್ನವೇ ಹಾಟ್‌ ಫೇವರಿಟ್‌ ಆಗಿದೆ. ಏಕೆಂದರೆ, ಚಿನ್ನದ ದರದಲ್ಲಿ ಏಕಾಏಕಿ ಕುಸಿತ ಕಾಣೋದಿಲ್ಲ. ಸದಾ ಕಾಲಕ್ಕೂ ಚಿನ್ನದ ದರ ಏರುಮುಖವಾಗಿಯೇ ಸಾಗುವ ಭರವಸೆ ಇರುವ ಕಾರಣ, ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಹೂಡಿಕೆದಾರರು ಭಾವಿಸಿದ್ದಾರೆ.ಕೋವಿಡ್‌ ಬಳಿಕ ವಿಶ್ವಾದ್ಯಂತ ಷೇರು ಮಾರುಕಟ್ಟೆಯಲ್ಲೂ ಅಲ್ಲೋಲ ಕಲ್ಲೋಲವಾಗುತ್ತಿದೆ. ಹೂಡಿಕೆದಾರರು ಏಕಾಏಕಿ ದೊಡ್ಡ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಅವರಿಗೂ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ಬಂದಿದೆ. ಇನ್ನು ಅಮೆರಿಕದ ಡಾಲರ್‌ಗೆ ಹೋಲಿಕೆ ಮಾಡಿದರೆ ಭಾರತದ ರೂಪಾಯಿ ಮೌಲ್ಯ ದಿನೇ ದಿನೆ ಕುಸಿಯುತ್ತಿದೆ. ಭಾರತ ದೇಶವು ಡಾಲರ್‌ ಲೆಕ್ಕದಲ್ಲೇ ಚಿನ್ನವನ್ನು ಖರೀದಿ ಮಾಡುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಚಿನ್ನದ ದರ ಏರುತ್ತಿದೆ. ಅಂತಿಮವಾಗಿ ಅತಿ ಮುಖ್ಯವಾಗಿ, ಕೇಂದ್ರ ಬಜೆಟ್‌ನ ನಿರ್ಧಾರ ಕೂಡಾ ಚಿನ್ನದ ದರ ಏರಿಕೆಗೆ ಕಾರಣವಾಗಿದೆ. ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಬಾರ್‌ಗಳ ಮೇಲಿನ ಆಮದು ಸುಂಕ ಏರಿಕೆ ಮಾಡಿದ ಕಾರಣ, ಏಕಾಏಕಿ ಚಿನ್ನದ ರೇಟು ಗಗನಕ್ಕೆ ಏರುವಂತಾಗಿದೆ.
ಚಿನ್ನದ ರೇಟು ಇಳಿಯುವ ಸಾಧ್ಯತೆ ಅತಿ ಕಡಿಮೆ ಎನ್ನಬಹುದು. ಒಂದು ವೇಳೆ ಜನರು ತಮ್ಮ ಬಳಿ ಇರುವ ಚಿನ್ನವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಮನಸ್ಸು ಮಾಡಿದರೆ ಮಾತ್ರ ಚಿನ್ನದ ಬೆಲೆ ಇಳಿಯಬಹುದೇನೋ. ಚಿನ್ನದ ರೇಟು 10 ಗ್ರಾಂಗೆ 30,000 ರೂ. ಇದ್ದಾಗ ಖರೀದಿ ಮಾಡಿದ್ದವರು ತಮ್ಮ ಬಳಿ ಇರುವ ಚಿನ್ನದ ನಾಣ್ಯ, ಬಿಸ್ಕತ್‌ ಸೇರಿದಂತೆ ಯಾವುದೇ ಸ್ವರೂಪದ ಚಿನ್ನವನ್ನು ಈಗ ಮಾರಾಟ ಮಾಡಲು ಹೊರಟರೆ ಸದ್ಯದ ಬೆಲೆಯಲ್ಲಿ ಡಬಲ್‌ ಹಣ ಸಿಗುತ್ತದೆ. ಆದರೆ, ಈ ಸಾಧ್ಯತೆ ಅತಿ ಕಡಿಮೆ. ಏಕೆಂದರೆ, ನಮ್ಮ ಜನ ಚಿನ್ನದ ನಾಣ್ಯ, ಬಿಸ್ಕತ್‌ಗಿಂತಲೂ ಆಭರಣಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾಸ್ಟೆಲ್​ ಕಟ್ಟಡದಿಂದ ಜಿಗಿದು MBBS ವಿದ್ಯಾರ್ಥಿ ಶ್ರೀರಾಮ್ ಆತ್ಮಹತ್ಯೆ!

Wed Mar 1 , 2023
ಇನ್ನೇನು ಓದು ಮುಗಿದು ವೈದ್ಯನಾಗಬೇಕು ಎನ್ನುವಷ್ಟರಲ್ಲೇ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾವಿನ ಮನೆ ಸೇರಿದ್ದಾನೆ.ಬೀದರ್: ಇನ್ನೇನು ಓದು ಮುಗಿದು ವೈದ್ಯನಾಗಬೇಕು ಎನ್ನುವಷ್ಟರಲ್ಲೇ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾವಿನ ಮನೆ ಸೇರಿದ್ದಾನೆ. ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ  ಶ್ರೀರಾಮ್ ಹಾಸ್ಟೆಲ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ  ಮಾಡಿಕೊಂಡಿದ್ದಾನೆ. ಈ ಘಟನೆ ಇಂದು (ಫೆಬ್ರುವರಿ 28) ಬೀದರ್​ನ ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.  ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ ಬೆಂಗಳೂರು: ನಗರದ […]

Advertisement

Wordpress Social Share Plugin powered by Ultimatelysocial