ಪ್ರಯಾಣಿಕರಿಗೆ ಗುಡ್ ನ್ಯೂಸ್ .

ಬೆಂಗಳೂರು : ಇಂದಿನಿಂದ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ -2 ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಮಾದರಿಯ ಹಚ್ಚ ಹಸಿರಿನ ಪರಿಸರ ಸ್ನೇಹಿ ಟರ್ಮಿನಲ್-2 ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ.

ಕಳೆದ ವರ್ಷ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ( Narendra Modi ) ನಗರದ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2 ಉದ್ಘಾಟಿಸಿದ್ದರು. ಇಂದು ಬೆಳಗ್ಗೆ 8 ಗಂಟೆ 40 ನಿಮಿಷಕ್ಕೆ ಕೆಂಪೇಗೌಡ ಏರ್ಪೋರ್ಟ್ನ ಟರ್ಮಿನಲ್-2 ರನ್ವೇಯಿಂದ ಸ್ಟಾರ್ ಏರ್ಲೈನ್ಸ್ ಮೊಟ್ಟ ಮೊದಲ ವಿಮಾನ ಕಲಬುರಗಿಗೆ ಹಾರಲಿದೆ.

ಟರ್ಮಿನಲ್ 2 ವಿಶೇಷತೆ ಏನು..?
ಇಡೀ ಭಾರತದಲ್ಲೇ ಮುಂಬೈ ಮತ್ತು ದೆಹಲಿಯನ್ನು ಹೊರತುಪಡಿಸಿದರೆ 2ನೇ ಟರ್ಮಿನಲ್ ಹೊಂದಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಹಲವು ವಿಶೇಷತೆಗಳಿಂದ ಗಮನ ಸೆಳೆದಿರುವ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ. ಟರ್ಮಿನಲ್ 2ದಲ್ಲಿ ಪ್ರಯಾಣಿಕರು 10,000 ಚದರ ಮೀಟರ್ಗಳಷ್ಟು ಉದ್ದದ ಹಸಿರು ಗೋಡೆಗಳು, ನೇತಾಡುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸಬಹುದು.

ಉದ್ಯಾನದಲ್ಲಿ ನಿರ್ಮಾಣವಾದ ಟರ್ಮಿನಲ್ನಂತೆ ನಿರ್ಮಾಣವಾದ ಟಿ2 ಬೆಂಗಳೂರಿನ ವಿಶೇಷತೆಗಳಾದ ಹಸಿರು ಆಧುನಿಕತೆ, ಆವಿಷ್ಕಾರ, ಸುಸ್ಥಿರತೆ ಮತ್ತು ಸಾಂಸ್ಕೃತಿಕ ಶ್ರೀಮಂತ ನಗರವನ್ನು ಪ್ರತಿಫಲಿಸುತ್ತದೆ. ಟಿ2 ಹೊಸ 255,661 ಚದರ ಮೀಟರ್ ಟರ್ಮಿನಲ್ ಬೆಂಗಳೂರು ಸುಂದರ ನಗರಿಗೆ ಸಮರ್ಪಣೆಯಾಗಿದೆ. ಹೊಸ ಟರ್ಮಿನಲ್ ಟರ್ಮಿನಲ್ 1ರ ಈಶಾನ್ಯ ಬದಿಯಲ್ಲಿದೆ ಮತ್ತು ಅದನ್ನು ನ್ಯೂಯಾರ್ಕ್ ಮೂಲದ ವಾಸ್ತುಶಿಲ್ಪ ಕಂಪನಿ ಎಸ್‌ಒಎಂ ವಿನ್ಯಾಸಗೊಳಿಸಿದೆ.

ಟರ್ಮಿನಲ್ 2ರ ಪ್ರಮಾಣ ಮತ್ತು ಒಳನೋಟಯುಕ್ತ ವಿನ್ಯಾಸವು ಪ್ರಯಾಣಿಕರಿಗೆ ಹಿಂದೆಂದೂ ಕಾಣದ ಅತ್ಯಂತ ಆತ್ಮೀಯ ಭಾವ ನೀಡುತ್ತದೆ. 90 ಕೌಂಟರ್ಗಳನ್ನು ಟರ್ಮಿನಲ್ ಸುತ್ತಲೂ 10,235 ಚದರ ಅಡಿಗಳಷ್ಟು ಹಸಿರು ಗೋಡೆಗಳಿಂದ, ಕಂಚಿನ ಪರದೆಗಳ ಮೂಲಕ ಟರ್ಮಿನಲ್ನ ತಾರಸಿಯಿಂದ ಇಳಿದುಬಿದ್ದ ತೂಗಾಡುವ ಉದ್ಯಾನವನಗಳು ಮತ್ತು ತಾರಸಿಯಿಂದ ಇಳಿಬಿದ್ದ ಗಂಟೆಗಳು ಮತ್ತು ಆವರಣದ ಒಳಗಡೆ ಇರುವ ಹಸಿರು ಕೊಳಗಳು ಟರ್ಮಿನಲ್ ಮತ್ತು ಬೋರ್ಡಿಂಗ್ ಪಿಯರ್ಗಳ ನಡುವಿನ ವಿಸ್ತಾರ ಅರಣ್ಯ ಪ್ರದೇಶದಿಂದ ಪ್ರಯಾಣಿಕರು ಹಿಂದೆಂದೂ ಕಾಣದ ಹಸಿರಿನ ಅನುಭವ ಪಡೆಯುತ್ತಾರೆ.

630 ಸ್ಥಳೀಯ ಸಸ್ಯಗಳು, 3,600+ ಸಸ್ಯ ಪ್ರಭೇದಗಳು, 150 ತಾಳೆ ಪ್ರಭೇದಗಳು, 7,700 ಕಸಿ ಆದ ಮರಗಳು, 100 ವಿಧಗಳ ಲಿಲ್ಲಿಗಳು, 96 ಕಮಲದ ಪ್ರಭೇದಗಳು ಮತ್ತು 180 ಅಪರೂಪದ ಅಪಾಯದಲ್ಲಿರುವ ಪ್ರಭೇದಗಳು ಮತ್ತು 10 ಪಾರಿಸರಿಕ ಆವಾಸಸ್ಥಾನಗಳು ಬೆಂಗಳೂರು ವಿಮಾನ ನಿಲ್ದಾಣದ ಟಿ2ರ ಹಸಿರು ಪ್ರದೇಶವನ್ನು ದಟ್ಟ ಹಸಿರನ್ನಾಗಿಸುತ್ತದೆ. ಟರ್ಮಿನಲ್ ಸುತ್ತಲೂ ಇರುವ ಈ ಉದ್ಯಾನವನವು ತನ್ನ ಸುತ್ತಮುತ್ತಲಿನ ಪ್ರದೇಶಕ್ಕಿಂತ ಎರಡರಿಂದ ಮೂರು ಡಿಗ್ರಿ ಕಡಿಮೆ ಮೈಕ್ರೊಕ್ಲೋ ಕಾಪಾಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಕ್ಕಿ ಹೊಡೆದು 10 ಮೀ. ಎಳೆದೊಯ್ದ KSRTC ಬಸ್: ಸ್ನೇಹಿತೆಯ ಕಣ್ಣೆದುರಲ್ಲೇ SSLC ವಿದ್ಯಾರ್ಥಿನಿ ದುರಂತ ಸಾವು​.

Sun Jan 15 , 2023
    ಕಳವೂರ್​​: ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದು ರಸ್ತೆಯುದ್ದಕ್ಕೂ ಎಳೆದೊಯ್ದ ಪರಿಣಾಮ 15 ವರ್ಷದ ಬಾಲಕಿಯೊಬ್ಬಳು ಸ್ನೇಹಿತೆಯ ಕಣ್ಣೆದುರೇ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಕಮಲಪುರಂನಲ್ಲಿ ಶನಿವಾರದ ಮಧ್ಯಾಹ್ನ 2.15ಕ್ಕೆ ನಡೆದಿದೆ. ಮೃತರನ್ನು ಮನ್ನಂಚೇರಿ ಮೂಲದ ಸಫ್ನಾ ಸಿಯಾದ್ ಎಂದು ಗುರುತಿಸಲಾಗಿದೆ. ಕಳವೂರ್​ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಳು. ಖಾಸಗಿ ಬಸ್​ ಇಳಿದು ಸಫ್ನಾ ರಸ್ತೆ ದಾಟುತ್ತಿದ್ದಾಗ ಕೆಎಸ್​​ಆರ್​ಟಿಸಿ ಬಸ್​ ಆಕೆಗೆ […]

Advertisement

Wordpress Social Share Plugin powered by Ultimatelysocial