ಸ್ಯಾಂಟ್ರೋ ರವಿ ಹೆಸರು ಹೇಳುತ್ತಲೇ ಹೊಸ ಬಾಂಬ್​ ಸಿಡಿಸಿದ ಎಚ್​ಡಿಕೆ.

ಬೆಂಗಳೂರು: ಸ್ಯಾಂಟ್ರೋ ರವಿ ಹೆಸರು ಹೇಳುತ್ತಲೇ ಮಾಜಿ ಸಿಎಂ ಎಚ್.​ಡಿ.ಕುಮಾರಸ್ವಾಮಿ ಹೊಸ ಬಾಂಬ್​ ಸಿಡಿಸಿದ್ದಾರೆ. ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರವನ್ನ ಕೆಡವಲು 12 ಶಾಸಕರನ್ನು ಬಾಂಬೆಗೆ ಕರೆದುಕೊಂಡು ಹೋದ್ರಲ್ಲ… ಸ್ಯಾಂಟ್ರೋ ರವಿ ಜೊತೆ ಯಾವ ಮಂತ್ರಿಗಳ ಸಂಪರ್ಕ ಇಲ್ಲ ಹೇಳಿ?ಬಾಂಬೆಗೆ 12 ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋದ್ರಲ್ಲ… ಈ ಬಗ್ಗೆ ಸತ್ಯ ಹೇಳ್ತೀರಾ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ಎಂದು ಎಚ್​ಡಿಕೆ ಸವಾಲು ಹಾಕಿದ್ದಾರೆ.’ಕೆಲಸವನ್ನ ಕೊಡಿಸುವ ನೆಪದಲ್ಲಿ ನನ್ನ ಮೇಲೆ ಸ್ಯಾಂಟ್ರೋ ರವಿ ಅತ್ಯಾಚಾರ ಮಾಡಿದ್ದಾನೆ. ಖಾಸಗಿ ಫೋಟೋ ಇಟ್ಟುಕೊಂಡು ನನ್ನನ್ನು ಬೇರೆಯವರ ಜತೆ ಹೋಗುವಂತೆ ಒತ್ತಾಯಿಸಿದ್ದಾನೆ. ಆತನಿಗೆ ಮಾರಕ ಕಾಯಿಲೆ ಇದ್ದರೂ ನನ್ನ ಮೇಲೆ ಅತ್ಯಾಚಾರವೆಸಗಿ ನನಗೂ ಕಾಯಿಲೆ ಅಂಟಿಸಿದ್ದಾನೆ’ ಎಂದು ಸಂತ್ರಸ್ತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಇದರ ಬೆನ್ನಲ್ಲೇ ಬುಧವಾರ ಸುದ್ದಿಗೋಷ್ಠಿ ನಡೆಸಿದ ಎಚ್​ಡಿಕೆ, ಸ್ಯಾಂಟ್ರೋ ರವಿ ಜೊತೆ ಯಾವ ಮಂತ್ರಿಗಳ ಸಂಪರ್ಕ ಇಲ್ಲ ಹೇಳಿ? ಬಾಂಬೆಗೆ 12 ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋದ್ರಲ್ಲ… ಈ ಬಗ್ಗೆ ಸತ್ಯ ಹೇಳ್ತೀರಾ ಬೊಮ್ಮಾಯಿ ಅವರೇ? ಎಂದು ಎಚ್​ಡಿಕೆ ಆಗ್ರಹಿಸಿದ್ದಾರೆ.ನಾನು ಇಲ್ಲಿವರೆಗೂ ಬಾಯಿ ಮುಚ್ಚಿಕೊಂಡು ಇದ್ದೆ. ನಾನೇನು ಹಿಟ್ ಅಂಡ್ ರನ್ ಅಲ್ಲ. ಜೆಡಿಎಸ್​ನಿಂದ ರಾಜ್ಯದ ಉಳಿವು ಸಾಧ್ಯವಿಲ್ಲ ಅಂದಿದ್ದಾರೆ. ಏನ್​ ಅಮಿತ್​ ಷಾ ಬಂದು ರಾಜ್ಯ ರಕ್ಷಣೆ ಮಾಡ್ತಾರಾ? ಈ ರಾಜ್ಯ ಬಿಜೆಪಿಯಿಂದ ಉಳಿಯಲು ಸಾಧ್ಯನಾ? ಇನ್ಸ್ಪೆಕ್ಟರ್ ಪೋಸ್ಟಿಂಗ್​ಗೆ ಒಂದು ಕೋಟಿ ರೂ. ಡೀಲ್​ ನಡೀತಿದೆ. ನ್ಯೂ ಇಯರ್ ಪಾರ್ಟಿ ಆಯ್ತಲ್ಲ.. ಅವಾಗ ಎಷ್ಟು ಡ್ರಗ್ಸ್ ಸಪ್ಲೈ ಆಗಿದೆ ಹೇಳಿ… ಸ್ಯಾಂಟ್ರೋ ರವಿದು ದೊಡ್ಡ ಇತಿಹಾಸ ಇದೆ. ಯಾರ ಜೊತೆ ಕಾಂಟ್ಯಾಕ್ಟ್ ಇಲ್ಲ ಅಂತ ಕೇಳಬೇಕು. ಇಂತಹ ವ್ಯಕ್ತಿಗಳನ್ನ ಇಟ್ಕೊಂಡು ವರ್ಗಾವಣೆ ಮಾಡೋದಾದ್ರೆ ಅವನನ್ನೇ ಸಿಎಂ ಮಾಡಿ. ನಳಿನ್ ಕುಮಾರ್ ಕಟೀಲ್ ರಸ್ತೆ ಗುಂಡಿ ಸಮಸ್ಯೆ ಸಣ್ಣ ವಿಚಾರ, ಲವ್ ಜಿಹಾದ್ ಬಗ್ಗೆ ಗಮನ ಹರಿಸಿ ಅಂತಾರೆ. ಈ ಜಿಹಾದ್‌ಗೆ ಏನು ಮಾಡಬೇಕು? ದಲಿತ ಸಮುದಾಯದ ಹೆಣ್ಣು ಮಗಳಿಗೆ ಚಿತ್ರಹಿಂಸೆ ಕೊಟ್ರಲ್ಲ ಈ ಜಿಹಾದ್‌ ಬಗ್ಗೆ ಮಾತನಾಡಿ ಎಂದು ಆಕ್ರೋಶ ಹೊರಹಾಕಿದರು.’ಕುಮಾರಸ್ವಾಮಿ ಅವರು ಅಪ್ಪನ ಮಾತು ಕೇಳಲ್ಲ’ ಎಂಬ ಬಿಜೆಪಿ ಟ್ವೀಟ್ ಮಾಡಿದ್ದರ ಕುರಿತು ಕೆಂಡಾಮಂಡಲವಾದ ಎಚ್​ಡಿಕೆ, ನಾನು ಸಾರ್ವಜನಿಕವಾಗಿ ಹೇಳಿದ್ದೇನೆ. ಪಕ್ಷವನ್ನ ಉಳಿಸಲು ತಂದೆ ವಿರುದ್ಧ ನಿರ್ಣಯ ಮಾಡಿದ್ದೆ ಅಂತ. 2004ರಲ್ಲಿ ಕಾಂಗ್ರೆಸ್ ಜೊತೆ ಹೋಗುವ ಮುನ್ನ ಅರುಣ್ ಜೇಟ್ಲಿ ನನ್ನ ಬಳಿ ಬಂದಿದ್ರು. ಕಾಂಗ್ರೆಸ್‌ನವರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ರು. ಅದಕ್ಕಾಗಿ ಪಕ್ಷವನ್ನ ಉಳಿಸಲು ತಂದೆಯ ವಿರುದ್ಧ ನಿರ್ಣಯ ತೆಗೆದುಕೊಂಡೆ. ತಂದೆ ಎಷ್ಟು ಮುಖ್ಯವೋ ಪಕ್ಷವೂ ಅಷ್ಟೇ ಮುಖ್ಯ ಅಂತ ನಡೆದು ಬಂದವ ನಾನು. ಮೈಸೂರು-ಬೆಂಗಳೂರು ದಶಪಥ ರಸ್ತೆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ತಗೆದುಕೊಂಡ ನಿರ್ಧಾರದಿಂದ ವೇಗ ಪಡೆಯಿತು. ಹೆದ್ದಾರಿಗೆ ಯಾರ ಹೆಸರನ್ನಾದರೂ ಇಟ್ಟುಕೊಳ್ಳಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.ಉದ್ಯಮಿ ಪ್ರದೀಪ್ ಆತ್ಮಹತ್ಯೆ ಕೇಸ್ ಸಂಬಂಧ ಪ್ರತಿಕ್ರಿಯಿಸಿದ ಎಚ್​ಡಿಕೆ, ಪೊಲೀಸ್ ಇಲಾಖೆಯಲ್ಲಿ ಆರೋಪಿ ಗೋಪಿ ಮೂಲಕ 50-60 ಕೋಟಿ ರೂ. ಸಂಗ್ರಹ ಆಗಿದೆ. ಅರವಿಂದ ಲಿಂಬಾವಳಿ ಸಚಿವರಾಗಿದ್ದಾಗ ಬಿಲ್ಡರ್​ಗಳ ಅತ್ರ ನಂಬರ್ ಒನ್ ಮತ್ತು ನಂಬರ್ ಟೂ ಗೆ ಇಂತಿಷ್ಟು ಪರ್ಸೆಂಟೇಜ್ ಸಂಗ್ರಹ ಮಾಡ್ತಿದ್ರು. ಯಾರು ಆ ನಂಬರ್ ಒನ್ ಮತ್ತು ನಂಬರ್ ಟೂ? ಈಗ ಯಾಕೆ ಸಚಿವ ಸ್ಥಾನದಿಂದ ಲಿಂಬಾವಳಿಯನ್ನ ತೆಗೆದ್ರು? ಎಂದು ಪ್ರಶ್ನಿಸಿದರು.ಬಿಜೆಪಿ ಅಜೆಂಡಾ ಏನು ಅಂತ ಕಟೀಲ್ ತೋರಿಸಿಕೊಂಡಿದ್ದಾರೆ. ಯುಪಿ ಸಿಎಂಗೆ ಮೊದಲು ಲವ್ ಮಾಡೋಕ್ಕೆ ಹೇಳಿ. ಲವ್ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ, ಅವರಿಗೆ ಲವ್ ಮಾಡಿ ಗೊತ್ತಿಲ್ಲ. ಪೋಲಿ ಹುಡುಗರು ಮಾತಾಡೋ ಥರ ಕಟೀಲ್ ಮಾತಾಡಿದ್ದಾರೆ. ಚುನಾವಣೆಯಲ್ಲಿ‌ ಇಂಥವರನ್ನು ಒದ್ದು ಹೊರಗೆ ಹಾಕ್ಬೇಕು ಜನ. ಮುಂದೆ ಬೆಳೆಯೋ ಮಕ್ಕಳಿಗೆ ಕಟೀಲ್ ಅವರು ಏನು ಪಾಠ ಮಾಡ್ತಿದಾರೆ? ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯ ಸಾಧನೆ!

Wed Jan 4 , 2023
ಬೆಂಗಳೂರು: ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ. ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂ ರಾವ್ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು ಯುಪಿಎ ಆಡಳಿತದ ಅಂತ್ಯಕ್ಕೆ ಭಾರತದ ಸಾಲ 63,583 ಕೋಟಿ ಇತ್ತು. ಆದರೆ ಮೋದಿಯವರು ಕೇವಲ‌ 8 ವರ್ಷದಲ್ಲಿ ಸಾಲದ ಪ್ರಮಾಣ 1.40 ಲಕ್ಷ ಕೋಟಿಗೆ […]

Advertisement

Wordpress Social Share Plugin powered by Ultimatelysocial