ಎದೆನೋವು ಮಾತ್ರವಲ್ಲ, ಇವು ಕೂಡ ಹೃದಯಾಘಾತ ಲಕ್ಷಣಗಳು.

ತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ತುಂಬಾ ಚಿಕ್ಕ ಪ್ರಾಯದವರಿಗೆ ಕೂಡ ಹೃದಯಾಘಾತ ಉಂಟಾಗುತ್ತಿರುವುದು ಆತಂಕದ ಸಂಗತಿ.

ತಜ್ಞರು ಕೂಡ ಚಿಕ್ಕ ಪ್ರಾಯದಲ್ಲಿಯೇ ಹೃದಯಾಘಾತಕ್ಕೆ ಕಾರಣವೇನು ಎಂದು ಕಾರಣ ಹುಡುಕುತ್ತಿದ್ದರೆ. ಹಲವಾರು ಕಾರಣಗಳು ಹೇಳುತ್ತಿದ್ದರೂ ಈ ಕಾರಣಗಳಿಂದ ಹೃದಯಾಘಾತ ಹೆಚ್ಚಾಗುತ್ತಿದೆ ಎಂಬ ಸ್ಪಷ್ಟ ಅಧ್ಯಯನ ವರದಿ ಬಂದಿಲ್ಲ.

ಕೊರೊನಾದ ಬಳಿಕ ಜನರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ. ಹೃದಯಾಘಾತದ ಲಕ್ಷಣಗಳೆಂದರೆ ತುಂಬಾ ಎದೆನೋವು ಬರುತ್ತದೆ, ಮೈ ಬೆವರುತ್ತದೆ ಎಂದು ನಾವು ಕೇಳಿದ್ದೇವೆ, ಆದರೆ ಮಹಿಳೆಯರಲ್ಲಿ ಎದೆನೋವಲ್ಲದೆ ಇನ್ನು ಕೆಲವು ಲಕ್ಷಣಗಳಿವೆ.

ಆದ್ದರಿಂದ ಆ ಲಕ್ಷಣಗಳು ಕಂಡು ಬಂದರೂ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ತುರ್ತು ಚಿಕಿತ್ಸೆ ಪಡೆದರೆ ಪ್ರಾಣಾಪಾಯ ತಪ್ಪಿಸಬಹುದು. ಆ ಲಕ್ಷಣಗಳೇನು ನೋಡೋಣ ಬನ್ನಿ:

ಪುರುಷ ಹಾಗೂ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು

ಪುರುಷ ಹಾಗೂ ಮಹಿಳೆಯರಲ್ಲಿ ಹೃದಯಾಘಾತವಾದಾಗ ಎದೆ ನೋವು ಕಾಣಿಸಿಕೊಳ್ಳುತ್ತದೆ, ಆದರೆ ಮಹಿಳೆಯರಲ್ಲಿ ಉಸಿರಾಟದ ತೊಂದರೆ, ವಾಂತಿ, ಕುತ್ತಿಗೆ, ದವಡೆ ಭಾಗದಲ್ಲಿ ನೋವು ಈ ಬಗೆಯ ಸಮಸ್ಯೆಗಳು ಕಂಡು ಬರುವುದು. ಪುರುಷರಲ್ಲಿ ಈ ಬಗೆಯ ಸಮಸ್ಯೆ ಕಂಡು ಬರುವುದು ತುಂಬಾ ಕಡಿಮೆ ಎಂಬುವುದಾಗಿ ತಜ್ಞರು ಹೇಳುತ್ತಾರೆ.

ಮಹಿಳೆಯರಲ್ಲಿ ಕಂಡು ಬರುವ ಹೃದಯಾಘಾತದ ಲಕ್ಷಣಗಳು

ಉಸಿರಾಟದ ತೊಂದರೆ

ಅಸ್ತಮಾ ಸಮಸ್ಯೆ ಇರುವವರಿಗೆ ಉಸಿರಾಟದ ತೊಂದರೆ ಇರುತ್ತದೆ, ಆದರೆ ಹೃದಯಾಘಾತದಲ್ಲಿ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಂಡು ಬರುವುದು. ಎದೆ ಭಾಗದಲ್ಲಿ ನೋವಿನ ಜೊತೆಗೆ ಮೈ ತುಂಬಾ ಬೆವರುವುದು.

ವಾಂತಿ

ಹೃದಯಾಘಾತದ ಮತ್ತೊಂದು ಲಕ್ಷಣವೆಂದರೆ ಸುಸ್ತು, ತಲೆಸುತ್ತು, ವಾಂತಿ. ಎದೆನೋವು ಜೊತೆಗೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.

ಮುಖ ಬಿಳುಚಿಕೊಳ್ಳುವುದು

ವ್ಯಕ್ತಿಗೆ ಹೃದಯಾಘಾತವಾಗುವಾಗ ಪುರುಷ ಅಥವಾ ಮಹಿಳೆಯ ಮುಖ ಬಿಳುಚಿಕೊಳ್ಳುತ್ತದೆ, ಅದರ ಜೊತೆಗೆ ಎದೆನೋವು, ಸುಸ್ತು, ತಲೆಸುತ್ತು ಈ ಬಗೆಯ ಲಕ್ಷಣಗಳು ಕಂಡು ಬರುವುದು.

ಮೈ ತುಂಬಾ ಬೆವರುವುದು

ವ್ಯಕ್ತಿಗೆ ಹೃದಯಾಘಾತವಾಗುವ ಮುಂಚೆ ಮೈ ತುಂಬಾ ಬೆವರುತ್ತದೆ. ಮೈ ಬೆವರುವುದರ ಜೊತೆಗೆ ಸುಸ್ತು, ಎದೆಭಾಗದಲ್ಲಿ ನೋವು ಕಂಡು ಬರುವುದು. ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಸುಸಜ್ಜಿತ ಆಸ್ಪತ್ರೆಗೆ ಭೇಟಿ ನೀಡುವುದು ಒಳ್ಳೆಯದು.

ಗೋಲ್ಡನ್‌ ಅವರ್‌

ಹೃದಯಾಘಾತವಾದಾಗ ಆದಷ್ಟು ಬೇಗ ಸೂಕ್ತ ಚಿಕಿತ್ಸೆ ಸಿಕ್ಕರೆ ಬದುಕಿಳಿಯುವ ಸಾಧ್ಯತೆ ಹೆಚ್ಚು ಇದಕ್ಕೆ ಗೋಲ್ಡನ್ ಅವರ್‌ ಎಂದು ಹೇಳಲಾಗುವುದು. ಹೃದಯಾಘಾತವಾದ 80-90 ನಿಮಿಷದೊಳಗೆ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಬದುಕಿಳಿಯುವ ಸಾಧ್ಯತೆ ಹೆಚ್ಚು.

ಆಸ್ಪತ್ರೆಗೆ ಕರೆದುಕೊಂಡು ಬಂದ ತಕ್ಷಣ ಇಸಿಜಿ ಪರೀಕ್ಷೆ ಮಾಡಿ ಅವರು ರೋಗಿಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ, ಇದರಿಂದ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ.

ಹೃದಯಾಘಾತವಾಗ ಅವರ ಬಂಧುಗಳು ಅಥವಾ ಅಲ್ಲಿದ್ದ ವ್ಯಕ್ತಿಗಳು ಈ ರೀತಿ ಮಾಡಿದರೆ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚು

* ಹೃದಯಾಘಾತದ ಲಕ್ಷಣಗಳನ್ನು ಗುರುತಿಸಬೇಕು

* ತಕ್ಷಣವೇ ಆಂಬ್ಯೂಲೆನ್ಸ್‌ಗೆ ಕರೆಮಾಡಿ

* ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಆದರೆ ನೀವು ಕರೆದುಕೊಂಡು ಹೋಗುವ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರು, ಚಿಕಿತ್ಸೆಗೆ ವ್ಯವಸ್ಥೆ ಇರಬೇಕು.

* ಹೃದಯಾಘಾತವಾದಾಗ ಸ್ವಂತ ಗಾಡಿಯಲ್ಲಿ ಹೋಗುವುದಕ್ಕಿಂತ ಆಂಬ್ಯೂಲೆನ್ಸ್‌ಗೆ ಕರೆ ಮಾಡಿ.

* ಆಸ್ಪತ್ರೆಗೆ ತಲುಪುವ ಮುನ್ನವೇ ಹೆಲ್ಪ್‌ಲೈನ್‌ಗೆ ಕರೆಮಾಡಿ ರೋಗಿಯನ್ನು ಕರೆತರುತ್ತಿರುವುದಾಗಿ ಹೇಳಿ, ಅವರು ಸೂಕ್ತ ವ್ಯವಸ್ಥೆ ಮಾಡುತ್ತಾರೆ, ಇದರಿಂದ ತಡಮಾಡದೆ ಚಿಕಿತ್ಸೆ ನೀಡಬಹುದು.

ವ್ಯಕ್ತಿ ಹೃದಯಾಘಾತವಾಗಿ ಕುಸಿದು ಬಿದ್ದಾಗ ಪ್ರಾಥಮಿಕ ಚಿಕಿತ್ಸೆ

* ಅವರ ಬೆನ್ನು ನೆಲಕ್ಕೆ ತಾಗುವಂತೆ ಮಲಗಿಸಿ

* ಅವರ ಎದೆಬಡಿತ ಇದೆಯೇ ಎಂದು ಕಿವಿಗೊಟ್ಟು ಆಲಿಸಿ

* ಅವರ ಮೂಗಿನ ಬಳಿ ಬೆರಳು ಇಟ್ಟು ಉಸಿರಾಟ ಇದೆಯೇ ಎಂದು ಪರೀಕ್ಷಿಸಿ

* ಎದೆ ಭಾಗವನ್ನು ಪ್ರೆಸ್‌ ಮಾಡಿ, ಅವರ ಬಾಯಿಗೆ ನಿಮ್ಮ ಬಾಯಿ ಇಟ್ಟು ಗಾಳಿ ಊದಿ.

* ವ್ಯಕ್ತಿ ಹೃದಯಾಘಾತವಾದ ಜನ ಗುಂಪು ಸೇರದಂತೆ ನೋಡಿಕೊಳ್ಳಿ, ಗಾಳಿಯಾಡುವಂತಿರಲಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಲೆಮನೆ ಬೆಲ್ಲ ಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ.

Thu Jan 19 , 2023
ಆಲೆಮನೆ ಬೆಲ್ಲ ಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ ಉತ್ತರ ಕನ್ನಡದ ಆಲೆಮನೆ ಬೆಲ್ಲ ಕರ್ನಾಟಕದಲ್ಲಿ ಅತ್ಯಂತ ಖ್ಯಾತಿಗೆ ಒಳಗಾಗಿದೆ. ಏಕೆಂದರೆ ನೈಸರ್ಗಿಕ ಆಲೆಮನೆ ಬೆಲ್ಲ ದಿನನಿತ್ಯದ ಸೇವನೆಯಿಂದ ರಕ್ತದಲ್ಲಿ ಇರುವಂತಹ ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ. ಆಲೆಮನೆ ಬೆಲ್ಲಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ ಉತ್ತರ ಕನ್ನಡದ ಆಲೆಮನೆ ಬೆಲ್ಲ ಕರ್ನಾಟಕದಲ್ಲಿ ಅತ್ಯಂತ ಖ್ಯಾತಿಗೆ ಒಳಗಾಗಿದೆ. ಏಕೆಂದರೆ ನೈಸರ್ಗಿಕ ಆಲೆಮನೆ ಬೆಲ್ಲ ದಿನನಿತ್ಯದ ಸೇವನೆಯಿಂದ ರಕ್ತದಲ್ಲಿ […]

Advertisement

Wordpress Social Share Plugin powered by Ultimatelysocial