ಉತ್ತಮ ಆರೋಗ್ಯಕ್ಕೆ ಸಿರಿ ಧಾನ್ಯಗಳನ್ನು ಬಳಸಿ.

ಚಿಕ್ಕಮಗಳೂರು, ಜನವರಿ, 22: ಜಿಲ್ಲೆಯ ಜನರು ಪೂರ್ಣ ಭಾಗಿಯಾಗುತ್ತಿರುವುದರಿಂದ ಚಿಕ್ಕಮಗಳೂರು ಜಿಲ್ಲಾ ಹಬ್ಬ ಯಶಸ್ವಿಯಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಹಾಗೆಯೇ ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯವನ್ನು ಬಳಸಿ ಎಂದು ಜನರಿಗೆ ಹೇಳಿದರು.

ಚಿಕ್ಕಮಗಳೂರು ಹಬ್ಬದ ಅಂಗವಾಗಿ ನಾಲ್ಕನೇ ಶನಿವಾರ ನಗರದ ಎಐಟಿ ಕಾಲೇಜಿನ ಆವರಣದಲ್ಲಿ ಜ್ಞಾನ ವೈಭವ ಮೇಳದಲ್ಲಿ ಸಿರಿ ಧಾನ್ಯಗಳು ಉತ್ತಮ ಆರೋಗ್ಯಕ್ಕಾಗಿ ವಿಚಾರ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಉತ್ಸವ ಹಬ್ಬದ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಜ್ಞಾನ ವೈಭವ, ಬೀದಿ ಉತ್ಸವಗಳಿಗೆ ಜನರು ನಿರೀಕ್ಷೆ ಮೀರಿ ಸಮಾವೇಶಗೊಳ್ಳುತ್ತಿದ್ದಾರೆ. ಉತ್ಸವ ಜನರಿಗೆ ಜ್ಞಾನ ನೀಡುವ ಹಬ್ಬವಾಗಿ ರೂಪಿಸಲಾಗಿದೆ. ಇದು ಜನರ ಭಾಗವಹಿಸುವಿಕೆಯಿಂದ ಯಶಸ್ವಿಯಾಗುತ್ತಿದೆ ಎಂದರು.

ಸಿರಿ ಧಾನ್ಯಗಳಲ್ಲಿ ಹೆಚ್ಚಿನ ನಾರಾಂಶ, ಪೋಷಾಕಾಂಶಗಳು ಇರುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪೂರ್ವಜರು ಸಿರಿ ಧಾನ್ಯಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಅವುಗಳನ್ನೇ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದರಿಂದ ಆಸ್ಪತ್ರೆಗಳಿಂದ ದೂರ ಇದ್ದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆರೋಗ್ಯ ರಕ್ಷಿಸಲು ಸಿರಿಧಾನ್ಯಗಳ ಕಡೆ ಗಮನ ಹರಿಸುವುದು ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.

ಹೆಚ್ಚು ವೆಚ್ಚ ಇರುವುದಿಲ್ಲಪ್ರಗತಿಪರ ಕೃಷಿಕ ಕುಮಾರಸ್ವಾಮಿ ಮಾತನಾಡಿ, ಸಾವಯವ ಕೃಷಿಗೆ ಭವಿಷ್ಯದಲ್ಲಿ ಉತ್ತಮ ಬೇಡಿಕೆ ಸಿಗಲಿದೆ. ಆರಂಭದಲ್ಲಿ ಈ ಪದ್ಧತಿ ಸ್ವಲ್ಪ ಕಷ್ಟವಾದರೂ ಎರಡು ವರ್ಷದ ನಂತರ ಲಾಭದಾಯಕವಾಗಲಿದೆ. ಸಾವಯವ ಕೃಷಿಗೆ ಹೆಚ್ಚು ವೆಚ್ಚ ಇರುವುದಿಲ್ಲ. ಸಿರಿಧಾನ್ಯ ಸೇವನೆಯಿಂದ ಮಧುಮೇಹ, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಸಹಜವಾಗಿಯೇ ಮನುಷ್ಯನ ಆರೋಗ್ಯ ಸ್ಥಿರವಾಗಿರುತ್ತದೆ. ಸಾವಯವ ಕೃಷಿ ಮಾಡುವ ರೈತರಿಗೆ ಸರ್ಕಾರ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರದಲ್ಲಿ ಕೆಂಪೇಗೌಡರು ಸಾರ್ವಜನಿಕವಾಗಿ ಸೇವೆ ಸಲ್ಲಿಸಿ ಅಪಾರವಾದ ಕೊಡುಗೆ ನೀಡಿದ್ದಾರೆ. ದೇಶಾದ್ಯಂತ ಮನ್ನಣೆ ಗಳಿಸಿದ ಅಂತಹ ಮಹಾನೀಯರನ್ನು ನಾವು ಪ್ರತಿನಿತ್ಯ ಸ್ಮರಿಸುವಂತಾಗಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಹಿ ಪೊಂಗಲ್ ಮಾಡುವ ವಿಧಾನ.

Sun Jan 22 , 2023
*ಅಕ್ಕಿ- ೧/೪ ಕೆ.ಜಿ *ಬೆಲ್ಲ -೫೦ ಗ್ರಾಂ *ಹೆಸರು ಬೇಳೆ – ೩ ಚಮಚ *ಏಲಕ್ಕಿ ಪುಡಿ – ೧ ಚಮಚ *ತುಪ್ಪ – ೨ ಚಮಚ *ಒಣದ್ರಾಕ್ಷಿ – ೧೦ *ಗೋಡಂಬಿ – ೧೨ *ನೀರು – ೨೦೦ ಮಿ.ಲೀ  ಪ್ಯಾನ್‌ಗೆ ಹೆಸರು ಬೇಳೆ ಹಾಕಿ ಕೆಂಪಗೆ ಹುರಿದು ತೆಗೆದಿಡಿ. ಪ್ಯಾನ್‌ಗೆ ನೀರು, ಬೆಲ್ಲ ಹಾಕಿ ಪಾಕ ಮಾಡಿಕೊಳ್ಳಿ. ಕುಕ್ಕರ್‌ಗೆ ನೀರು ಹಾಕಿ. ಹುರಿದಿರುವ ಹೆಸರುಬೇಳೆ ಸೇರಿಸಿ, ಮುಚ್ಚಳ […]

Advertisement

Wordpress Social Share Plugin powered by Ultimatelysocial