ಬಿಪಿ-ಶುಗರ್ ಅಷ್ಟೇ ಅಲ್ಲ ಕ್ಯಾನ್ಸರ್ ರೋಗಿಗಳಿಗೂ ತುಂಬಾ ಲಾಭಕಾರಿ .

ನೀವೂ ಕೂಡ ಒಂದು ವೇಳೆ ನುಗ್ಗೆಸೊಪ್ಪನ್ನು ಸೇವಿಸುತ್ತಿಲ್ಲ ಎಂದಾದರೆ ಅದನ್ನು ಇಂದೇ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಏಕೆಂದರೆ ನುಗ್ಗೆಸೊಪ್ಪು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದ ಔಷಧಗಳನ್ನು ತಯಾರಿಸಲು ಕೂಡ ನುಗ್ಗೆಸೋಪ್ಪನ್ನು ಕಳೆದ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.ಇವು ಅನೇಕ ರೀತಿಯ ಜೀವಸತ್ವಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿಯೂ ಕೂಡ ಬಳಸಲಾಗುತ್ತದೆ. ಹಾಗಾದರೆ ಯಾವ ಯಾವ ಕಾಯಿಲೆಗಳಿಗೆ ನುಗ್ಗೆಸೊಪ್ಪು ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆಡಯಾಬಿಟಿಸ್ ರೋಗಿಗಳಿಗೆ ನುಗ್ಗೆಸೊಪ್ಪು ತುಂಬಾ ಉಪಯುಕ್ತವಾಗಿವೆ. ಹಾಗೆ ನೋಡಿದರೆ, ನುಗ್ಗೆಸೊಪ್ಪಿನ ಎಲೆಗಳು ಉತ್ಕರ್ಷಣ ನಿರೋಧಕ ಅಂದರೆ ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಹೀಗಿರುವಾಗ ನೀವು ಕೂಡ ಖಂಡಿತವಾಗಿ ನಿಮ್ಮ ಆಹಾರದಲ್ಲಿ ನುಗ್ಗೆಸೊಪ್ಪನ್ನು ಸೇರಿಸಿಕೊಳ್ಳಬೇಕು.ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಲಾಭಕಾರಿನುಗ್ಗೆಸೊಪ್ಪು ನಮ್ಮ ದೆಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹುಟ್ಟುಹಾಕುವುದಿಲ್ಲ. ಈ ಸೊಪ್ಪು ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಬಿಪಿ ನಿಯಂತ್ರಣದಲ್ಲಿರುತ್ತದೆನುಗ್ಗೆಸೋಪ್ಪು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಹೊಂದಿದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹ ಸಹಾಯ ಮಾಡುತ್ತದೆ. ಬಿಪಿ ಅಧಿಕವಾಗಿರುವವರು ಕಡ್ಡಾಯವಾಗಿ ತಮ್ಮ ಆಹಾರದಲ್ಲಿ ನುಗ್ಗೆಸೋಪ್ಪನ್ನು ಸೇರಿಸಿಕೊಳ್ಳಬೇಕು.ಕ್ಯಾನ್ಸರ್ ಗೆ ಮಾರಕನುಗ್ಗೆಸೊಪ್ಪಿ ಕ್ಯಾನ್ಸರ್ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಹಲವಾರು ರೀತಿಯ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಸತು ಮತ್ತು ಇತರ ಸಕ್ರಿಯ ಘಟಕಗಳು ನುಗ್ಗೆಸೋಪ್ಪಿನಲ್ಲಿರುತ್ತವೆ, ಇದು ಕ್ಯಾನ್ಸರ್ ಕೋಶಗಳು ಮತ್ತು ಫ್ರೀ ರಾಡಿಕಲ್‌ಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.ಈ ಲಾಭಗಳು ಕೂಡ ಇವೆಇದರೊಂದಿಗೆ, ರಕ್ತಹೀನತೆ ಸಮಸ್ಯೆ ನಿವಾರಣೆಗೂ ಕೂಡ ನುಗ್ಗೆಸೊಪ್ಪು ತುಂಬಾ ಸಹಾಯಕವಾಗಿವೆ. ದೃಷ್ಟಿದೋಷ ನಿವಾರಣೆಗೂ ಕೂಡ ನುಗ್ಗೆಸೊಪ್ಪು ಉಪಯುಕ್ತವಾಗಿವೆ. ಒಟ್ಟಾರೆಯಾಗಿ ಒಂದೇ ಒಂದು ತರಕಾರಿ ಸೇವಿಸುವುದರಿಂದ , ನೀವು ಸಾಕಷ್ಟು ಲಾಭಗಳನ್ನು ಪಡೆಯಬಹುದು ಇದನ್ನೂ ಓದಿ  (ಹಕ್ಕು ತ್ಯಾಗ – ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಶ್ಚಿಕ ರಾಶಿ ಭವಿಷ್ಯ (Tuesday, January 10, 2023)

Tue Jan 10 , 2023
ಯೋಗ ಮತ್ತು ಧ್ಯಾನ ನೀವು ಒಳ್ಳೆಯ ದೇಹರಚನೆ ಕಾಯ್ದುಕೊಳ್ಳಲು ಮತ್ತು ಮಾನಸಿಕವಾಗಿ ಸಧೃಢವಾಗಿರಲು ಸಹಾಯ ಮಾಡುತ್ತದೆ. ಜೀವನದ ವಾಹನವನ್ನು ಚೆನ್ನಾಗಿ ಚಲಾಯಿಸಲು ಬಯಸುತ್ತಿದ್ದರೆ, ಇಂದು ನೀವು ಹಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ಒಬ್ಬ ಸುಂದರ ನಗುವಿನಿಂದ ನಿಮ್ಮ ಪ್ರೇಮಿಯ ದಿನವನ್ನು ಪ್ರಕಾಶಮಾನವಾಗಿಸಿ. ವಿವಾದಗಳಿರಲಿ ಅಥವಾ ಕಚೇರಿ […]

Advertisement

Wordpress Social Share Plugin powered by Ultimatelysocial