ಶಾಖದ ಅಲೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಆರೋಗ್ಯ ಮಾರ್ಗಸೂಚಿ ಬಿಡುಗಡೆ,

ನಿಮ್ಮ ಸುತ್ತಮುತ್ತಲಲ್ಲಿ ಯಾರಾದರೂ ಅಧಿಕ ಬಿಸಿಲಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದರೆ ತಕ್ಷಣ 108/102 ಗೆ ಕರೆ ಮಾಡಬೇಕು ಎಂದು ಸರ್ಕಾರ ಹೇಳಿದೆ. ಜೊತೆಗೆ ಭಾರತೀಯ ಹವಾಮಾನ ಇಲಾಖೆಯು 2023 ರ ಶಾಖದ ಅಲೆಯು ಹೆಚ್ಚಾದಂತೆ ಯಾವ ರೀತಿ ನಿಮ್ಮ ಆರೋಗ್ಯದ ಕಡೆ ಗಮನಹರಿಸುವ ಹಿನ್ನೆಲೆಯಲ್ಲಿ ಕೆಲವೊಂದು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಪಟ್ಟಿ ಮಾಡಿದೆ.

ಶಾಖದ ಅಲೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಚ್​ ತಿಂಗಳಿನಲ್ಲಿ ಶಾಖದ ಅಲೆಯು ಹೆಚ್ಚಾಗುತ್ತಾ ಹೋದರೆ ಜನರು ಯಾವ ರೀತಿ ತಮ್ಮದ ಕಡೆ ಗಮನಹರಿಸಬೇಕು ಎಂಬೆಲ್ಲಾ ವಿಷಯದ ಕುರಿತು ಈ ಮಾರ್ಗ ಸೂಚಿಯಲ್ಲಿ ಕಾಣಬಹುದು.
ನಿಮ್ಮ ಸುತ್ತಮುತ್ತಲಲ್ಲಿ ಯಾರಾದರೂ ಅಧಿಕ ಬಿಸಿಲಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದರೆ ತಕ್ಷಣ 108/102 ಗೆ ಕರೆ ಮಾಡಬೇಕು ಎಂದು ಸರ್ಕಾರ ಹೇಳಿದೆ. ಜೊತೆಗೆ ಭಾರತೀಯ ಹವಾಮಾನ ಇಲಾಖೆಯು 2023 ರ ಶಾಖದ ಅಲೆಯು ಹೆಚ್ಚಾದಂತೆ ಯಾವ ರೀತಿ ನಿಮ್ಮ ಆರೋಗ್ಯದ ಕಡೆ ಗಮನಹರಿಸುವ ಹಿನ್ನೆಲೆಯಲ್ಲಿ ಕೆಲವೊಂದು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಪಟ್ಟಿ ಮಾಡಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಶಾಖದ ಅಲೆಯು 2015 ಕ್ಕಿಂತ 2020- 23ರ ವೇಳೆಗೆ ದ್ವಿಗುಣಗೊಂಡಿದೆ. ಕಳೆದ ವರ್ಷ ಮಾರ್ಚ್​ನಲ್ಲಿ ತೀವ್ರ ಶಾಖದ ಅಲೆಗಳು ಕೊಯ್ಲುಗಳನ್ನು ಹಾಳುಮಾಡಿತ್ತು ಎಂದು ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯ ಪ್ರಕಾರ ನಿಮಗೆ ಬಾಯಾರಿಕೆಯಿಲ್ಲದಿದ್ದರೂ, ಸಾಧ್ಯವಾದಾಗಲೆಲ್ಲಾ ಸಾಕಷ್ಟು ನೀರು ಕುಡಿಯುವುದು ಸೂಕ್ತ ಎಂದು ಸಲಹೆ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯ ಇತರ ಅಂಶಗಳು:

  • ಶಾಖದ ಅಲೆಯು ಹೆಚ್ಚಾಗುತ್ತಿರುವಂತೆ ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ನಿಂಬೆ ನೀರು, ಲಸ್ಸಿ, ಸ್ವಲ್ಪ ಉಪ್ಪು ಸೇರಿಸಿದ ಹಣ್ಣಿನ ರಸವನ್ನು ಸೇವಿಸಬೇಕು.
  • ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಾಗ ತೆಳು, ಸಡಿಲವಾದ, ಹತ್ತಿಯ ಉಡುಪುಗಳನ್ನು ಧರಿಸಲು ಮತ್ತು ಛತ್ರಿ ಮತ್ತು ಕ್ಯಾಪ್​​ಗಳನ್ನು ಬಳಸಿ.
  • ಸ್ಥಳೀಯ ಹವಾಮಾನ ಸುದ್ದಿಗಳಿಗಾಗಿ ರೇಡಿಯೊವನ್ನು ಕೇಳಲು, ಪತ್ರಿಕೆಗಳನ್ನು ಓದಲು ಮತ್ತು ಟಿವಿ ವೀಕ್ಷಿಸಲು ಸರ್ಕಾರವು ನಿವಾಸಿಗಳನ್ನು ಕೇಳಿದೆ. ಜನರು ಭಾರತೀಯ ಹವಾಮಾನ ಇಲಾಖೆಯ ವೆಬ್‌ಸೈಟ್ ಅನ್ನು ಸಹ ಟ್ರ್ಯಾಕ್ ಮಾಡಬಹುದು ಎಂದು ಅದು ಉಲ್ಲೇಖಿಸಿದೆ .
  • ಜೊತೆಗೆ ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಗಡೆ ಬಿಸಿಲಿನಲ್ಲಿ ಕೆಲಸ ಮಾಡುವವರು, ಮಾನಸಿಕ ಅಸ್ವಸ್ಥತೆ ಹೊಂದಿರುವವರು, ದೈಹಿಕವಾಗಿ ಅಸ್ವಸ್ಥರಾಗಿರುವವರು, ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರು ಹೆಚ್ಚಿನ ಕಾಳಜಿಯನ್ನು ವಹಿಸುವುದು ಅಗತ್ಯವಾಗಿದೆ.
  • ವಿಶೇಷವಾಗಿ ಮಧ್ಯಾಹ್ನ 12:00 ರಿಂದ 3:00 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು ಅಗತ್ಯವಾಗಿದೆ. ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳು ಅಥವಾ ಹೆಚ್ಚಿನ ಪ್ರಮಾಣದ ಸಕ್ಕರೆಯೊಂದಿಗೆ ಪಾನೀಯಗಳನ್ನು ಸೇವಿಸಬೇಡಿ, ಏಕೆಂದರೆ ಇವುಗಳು ಹೆಚ್ಚು ದೇಹದ ದ್ರವದ ನಷ್ಟಕ್ಕೆ ಕಾರಣವಾಗಬಹುದು ಅಥವಾ ಹೊಟ್ಟೆ ಸೆಳೆತಕ್ಕೆ ಕಾರಣವಾಗಬಹುದು ಮುಂತಾಸ ಸಲಹೆಗಳನ್ನು ನೀಡಿದೆ.
  • ಸಾಕಷ್ಟು ಬಿಸಿಲಿರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದಾಗ, ಮಕ್ಕಳನ್ನು ಮತ್ತು ನಿಮ್ಮ ಸಾಕು ಪ್ರಾಣಿಗಳನ್ನು ವಾಹನದ ಒಳಗಡೆಯೇ ಕೂರಿಸಬೇಡಿ. ವಾಹನದೊಳಗಿನ ತಾಪಮಾನವು ಅಪಾಯಕಾರಿಯಾಗಬಹುದು.
  • ತಲೆತಿರುಗುವಿಕೆ ಅಥವಾ ಮೂರ್ಛೆ, ವಾಕರಿಕೆ ಅಥವಾ ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಅಸಾಧಾರಣವಾಗಿ ಗಾಢ ಹಳದಿ ಮೂತ್ರದೊಂದಿಗೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು ಮತ್ತು ತ್ವರಿತ ಉಸಿರಾಟ ಮತ್ತು ಹೃದಯ ಬಡಿತವನ್ನು ಒಳಗೊಂಡಿರುವ “ಶಾಖದ ಒತ್ತಡ” ದ ಲಕ್ಷಣಗಳನ್ನು ಕಂಡು ಬಂದರೆ ತಕ್ಷಣ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Please follow and like us:

Leave a Reply

Your email address will not be published. Required fields are marked *

Next Post

ತೈವಾನ್ ಪ್ರವೇಶಿಸಿದ ಚೀನಾ ವಿಮಾನಗಳು.

Wed Mar 1 , 2023
  ಒಂದೆಡೆ ಅಮೆರಿಕಾದ ವಾಯುಪ್ರದೇಶದಲ್ಲಿ ಬಲೂನ್ ಹಾರಿಸುವ ಮೂಲಕ ಉದ್ಘಟತನ ಸೃಷ್ಟಿಸಿರುವ ಚೀನಾ ಇದೀಗ ತೈವಾನ್‌ನಲ್ಲೂ ತನ್ನ ಕುಟಿಲ ಬುದ್ಧಿ ಪ್ರದರ್ಶಿಸಿದೆ. ಕಳೆದ ೨೪ ಗಂಟೆಗಳಲ್ಲಿ ತೈವಾನ್‌ನ ವಾಯು ರಕ್ಷಣಾ ವಲಯದಲ್ಲಿ ೧೯ ಬಾರಿ ತನ್ನ ವಾಯು ಪಡೆಯ ವಿಮಾನಗಳನ್ನು ನುಗ್ಗಿಸುವ ಮೂಲಕ ಚೀನಾ ಉದ್ದಟತನ ಪ್ರದರ್ಶಿಸಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಚೀನಾ ವಾಯು ರಕ್ಷಣಾ ವಲಯದ ನಿಯಮ ಉಲ್ಲಂಘಿಸಿದ ಬಗ್ಗೆ ತೈವಾನ್‌ನ ರಕ್ಷಣಾ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.ತೈವಾನ್‌ಗಿಂತ […]

Advertisement

Wordpress Social Share Plugin powered by Ultimatelysocial