ಶಾರುಖ್ ಖಾನ್‍ಗೆ ವಿಶ್ವದ 4ನೇ ಶ್ರೀಮಂತ ನಟನ ಪಟ್ಟ.

ವದೆಹಲಿ,ಜ.18- ವಿಶ್ವದ ಎಂಟು ಶ್ರೀಮಂತ ನಟರ ಪೈಕಿ ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರು ನಾಲ್ಕನೆ ಸ್ಥಾನ ಪಡೆದುಕೊಂಡಿದ್ದಾರೆ. ಖಾನ್ ಅವರ ನಿವ್ವಳ ಮೌಲ್ಯ 770 ಮಿಲಿಯನ್ ಡಾಲರ್ ಆಗಿದ್ದು ಅವರು ವಿಶ್ವದ ನಾಲ್ಕನೆ ಸಿರಿವಂತ ನಟರಾಗಿ ಗುರುತಿಸಿಕೊಂಡಿದ್ದಾರೆ ಎಂಬುದು ವಲ್ರ್ಡ್ ಆಫ್ ಸ್ಟಾಟಿಸ್ಟಿಕ್ ವರದಿಯಲ್ಲಿ ಬಹಿರಂಗಗೊಂಡಿದೆ.

ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರಿಗಿಂತ ಹೆಚ್ಚು ಶ್ರೀಮಂತ ನಟ ಶಾರೂಖ್ ಖಾನ್ ಎಂಬುದು ಇಲ್ಲಿ ಉಲ್ಲೇಖಾರ್ಹವಾಗಿದೆ.

ನಾನು ದೆಹಲಿಯಿಂದ ಮುಂಬೈಗೆ ಬಂದವನು ದೆಹಲಿಯಲ್ಲಿ ಬಂಗಲೆಯಲ್ಲಿ ವಾಸಿಸುವುದು ಮಾಮೂಲು ಆದರೆ, ಮುಂಬೈನಲ್ಲಿ ಆಪಾರ್ಟ್‍ಮೆಂಟ್‍ನಲ್ಲಿ ವಾಸಿಸುವ ಪರಿಕಲ್ಪನೆ ಇದೆ. ನಾನು ಇಲ್ಲಿಗೆ ಬಂದಾಗ ಗೌರಿಖಾನ್ ಅವರೊಂದಿಗೆ ಸಣ್ಣ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದೆ ನಂತರ ನಾನು ದೆಹಲಿ ಮಾದರಿ ಬಂಗಲೆಯಂತಿದ್ದ ಮನ್ನತ್ ನಿವಾಸವನ್ನು ಖರೀದಿಸಿದ್ದೇ ಎಂದು ನೆನಪಿಸಿಕೊಂಡಿದ್ದ ಶಾರುಖ್ ಇಂದು ವಿಶ್ವದ ನಾಲ್ಕನೆ ಶ್ರೀಮಂತ ನಟರಾಗಿ ಗುರುತಿಸಿಕೊಂಡಿದ್ದಾರೆ.

ನಾನು ಖರೀದಿಸಿದ ಅತ್ಯಂತ ದುಬಾರಿ ವಸ್ತು ಎಂದರೆ ನನ್ನ ಮನೆ ಮನ್ನತ್ ಅಲ್ಲಿ ನಾನು ಪ್ರತಿವರ್ಷ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ ಆಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಮಾಡುವುದು ಅದೇ ಮನೆಯಲ್ಲೇ ಎಂದು ಅವರು ಸ್ಮರಿಸಿಕೊಂಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕ್ಷಮಿಸಿ, ರಸ್ತೆಗಳ ಸ್ಥಿತಿ ಚೆನ್ನಾಗಿಲ್ಲ' ಎಂದು ವ್ಯಕ್ತಿಯ ಕಾಲು ತೊಳೆದ ಸಚಿವರು.

Wed Jan 18 , 2023
ಮಧ್ಯಪ್ರದೇಶ ರಾಜಕೀಯದಲ್ಲಿ ವಿಶೇಷ ಹೆಸರು ಮಾಡಿರುವ ಇಂಧನ ಸಚಿವ ಪ್ರದ್ಯುಮ್ನ್ ಸಿಂಗ್ ತೋಮರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಕ್ಷೇತ್ರ ಗ್ವಾಲಿಯರ್‌ನ ರಸ್ತೆಗಳು ಸರಿಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಸಚಿವ ಪ್ರದ್ಯುಮನ್ ಸಿಂಗ್ ದುರಸ್ತಿ ಕಾರ್ಯ ಆರಂಭವಾದ ಬಳಿಕ ಸ್ವತಃ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೇ ಚಪ್ಪಲಿಯನ್ನು ರಾಜ್ಯ ಸಚಿವ ಪ್ರದ್ಯುಮ್ನ ಅವರಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. […]

Advertisement

Wordpress Social Share Plugin powered by Ultimatelysocial