ಹುಬ್ಬಳ್ಳಿಯ ತಹಶೀಲ್ದಾರರ ಕಚೇರಿಯಲ್ಲಿ ಮರಿಚಿಕೆಯಾದ ಸ್ವಚ್ಛತೆ!

 

 

ಹುಬ್ಬಳ್ಳಿ: ಹೌದು ವಾಣಿಜ್ಯ ನಗರಿ ಎಂದೇ ಖ್ಯಾತಿಯಾದ ಹುಬ್ಬಳ್ಳಿಯ ಮಿನಿ ವಿಧಾನಸೌಧ ಸೂಕ್ತ ನಿರ್ವಹಣೆಯಿಲ್ಲದೆ ಕಸದ ಗೂಡಾಗಿದೆ. ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುವ ಈ ಮಿನಿ ವಿಧಾನಸೌಧದಲ್ಲಿ ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪಾಠ ಮಾಡುವ ಅಧಿಕಾರಿಗಳೇ ಅಭಿಯಾನವನ್ನು ಮರೆತಂತೆ ಕಾಣುತ್ತಿದೆ. ಹೌದು, ಮಿನಿ ವಿಧಾನಸೌಧದಲ್ಲಿಯೇ ಉಪ ನೊಂದಣಾಧಿಕಾರಿಗಳ ಕಚೇರಿಯಿದೆ.

ಪ್ರತಿನಿತ್ಯ ಆಸ್ತಿ ನೋಂದಣಿಗೆ ಹಾಗೂ ಇನ್ನಿತರೆ ಕೆಲಸಗಳಿಗೆ ಸಾರ್ವಜನಿಕರು ಎಡತಾಕುತ್ತಾರೆ. ಇದಲ್ಲದೇ ಮಿನಿವಿಧಾನ ಸೌಧದಲ್ಲಿ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಉಪ ಖಜಾನೆ, ಗ್ರಾಮೀಣ ಪೋಲಿಸ್ ಠಾಣೆ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ತಾಲೂಕು ದಂಡಾಧಿಕಾರಿಗಳಾದ ತಹಸೀಲ್ದಾರ್ ಕಚೇರಿಯೂ ಇಲ್ಲಿರುವುದರಿಂದ ಮಿನಿವಿಧಾನ ಸೌಧ ರೈತ ಸಮುದಾಯದ ಜೀವನಾಡಿಯಾಗಿದೆ.

ಸರಕಾರಿ ಕಚೇರಿ ಖಾಲಿ ಖಾಲಿ: ಸಾರ್ವಜನಿಕರ ಪರದಾಟ.. ಸಿಬ್ಬಂದಿಗೂ ಹೆಚ್ಚಿನ ಹೊರೆ..

ಮಿನಿ ವಿಧಾನ ಸೌಧದಲ್ಲಿ ಸಾರ್ವಜನಿಕ ಶೌಚಾಲಯವಿದ್ದರು ಜನರ ಬಳಕೆಗೆ ಯೋಗ್ಯವಾಗಿಲ್ಲ. ಅಲ್ಲದೇ ಎಲ್ಲೆಂದರಲ್ಲಿ ಗುಟ್ಕಾ, ಎಲೆ, ಅಡಕೆ ತಿಂದು ಉಗುಳುವವರ ಸಂಖ್ಯೆ ಹೆಚ್ಚಾಗಿದೆ. ಇಡೀ ಮಿನಿ ವಿಧಾನಸೌಧದ ಕಟ್ಟಡ ಕಸದ ರಾಶಿಯಿಂದ ಗಬ್ಬೆದ್ದು ನಾರುತ್ತಿದೆ. ಲಿಫ್ಟ್ ಗಳಲ್ಲಿ ಕೂಡ ಎಲ್ಲೆಂದರಲ್ಲಿ ಕಸ್ ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ.

ಮಳೆಗಾಲ ಬೇರೆ ಪರಿಣಾಮವಾಗಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗದ ಭಿತ್ತಿ ಎದುರಾಗಿದೆ. ಸ್ವಚ್ಛ ಭಾರತ ಯೋಜನೆ ಅಡಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ ತನ್ನದೇ ಕಚೇರಿಯ ಆವರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಿರ್ಲಕ್ಷ ತೋರುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸರ್ಕಾರ ಮೊದಲು ತನ್ನ ಕಛೇರಿಗಳ ಶೌಹಗೃಹ ಅವರಣಗಳನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲದಿರುವುದು ವಿಪರ್ಯಾಸವೇ ಸರಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನವರಿ 28ಕ್ಕೆ ಅಮಿತ್ ಶಾರಿಂದ ಅಮೃತ ಮಹೋತ್ಸವ ಉದ್ಘಾಟನೆ.

Tue Jan 24 , 2023
ಹುಬ್ಬಳ್ಳಿ ನಗರದ ವಿದ್ಯಾನಗರದಲ್ಲಿರುವ ಕೆಎಲ್‌ಇ ಸಂಸ್ಥೆಯ ಬಿ.ಬಿ. ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಅಮೃತ ಮಹೋತ್ಸವ ಹಾಗೂ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಜ. 28ರಂದುವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, 28ರಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ’ ಎಂದು ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ‘ಅಮೃತ ಮಹೋತ್ಸವದ […]

Advertisement

Wordpress Social Share Plugin powered by Ultimatelysocial