ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ .

ಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆದ ಮರುದಿನ ಬಿಗಿ ಭದ್ರತೆಯೊಂದಿಗೆ ಕಾಂಗ್ರೆಸ್ ನಾಯಕ ಭಾರತ್ ಜೋಡೋ ಯಾತ್ರೆಯನ್ನು ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಹಿರನ್ ನಗರದಿಂದ ಪುನಾರಂಭ ಮಾಡಿದ್ದಾರೆ. ಕತುವಾ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆದ ಮರುದಿನ ಬಿಗಿ ಭದ್ರತೆಯೊಂದಿಗೆ ಕಾಂಗ್ರೆಸ್ ನಾಯಕ ಭಾರತ್ ಜೋಡೋ ಯಾತ್ರೆಯನ್ನು ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಹಿರನ್ ನಗರದಿಂದ ಪುನಾರಂಭ ಮಾಡಿದ್ದಾರೆ.
ಜ.21 ರಂದು ಜಮ್ಮುವಿನಲ್ಲಿ ಅವಳಿ ಸ್ಫೋಟ ನಡೆದಿತ್ತು. ಒಂದು ದಿನದ ವಿರಾಮದ ನಂತರ ಭಾರತ್ ಜೋಡೋ ಯಾತ್ರೆ ಬೆಳಿಗ್ಗೆ 7 ಗಂಟೆಗೆ ಅಂತಾರಾಷ್ಟ್ರೀಯ ಗಡಿಯ ಬಳಿ ಇರುವ ಜಮ್ಮು-ಪಠಾಣ್ ಕೋಟ್ ಹೆದ್ದಾರಿಯಾದ್ಯಂತ ಇರುವ ಹಿರನ್ ನಗರ ಆರಂಭವಾಯಿತು. ರಾಹುಲ್ ಗಾಂಧಿಗೆ ಜಮ್ಮು-ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ವಿಕಾರ್ ರಸೂಲ್ ವನಿ, ಕಾರ್ಯಾಧ್ಯಕ್ಷ ರಮಣ್ ಭಲ್ಲಾ ಹಾಗೂ ಇನ್ನಿತರ ಸ್ವಯಂ ಸೇವಕರು ಭಾಗವಹಿಸಿದ್ದರು. ಜಮ್ಮುವಿನಲ್ಲಿ ಅವಳಿ ಸ್ಫೋಟ; 9 ಮಂದಿಗೆ ಗಾಯರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬೆಳಿಗ್ಗೆ 8 ರ ವೇಳೆಗೆ ಲೋಂದಿ ಚೆಕ್ ಪಾಯಿಂಟ್ ಗೆ ತಲುಪಿ ಸಾಂಬ ಜಿಲ್ಲೆಯ ತಪ್ಯಾಲ್-ಗಗ್ವಾಲ್ ಗೆ ಪ್ರವೇಶಿಸಿತು.

ಇಂದು ಸುಮಾರು 25 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ ಬಳಿಕ, ಯಾತ್ರೆ ಚಕ್ ನಾನಕ್ ನಲ್ಲಿ ರಾತ್ರಿ ವಿರಾಮ ಪಡೆದುಕೊಳ್ಳಲಿದ್ದು, ನಾಳೆ ಸಾಂಬದ ವಿಜಯಪುರದಿಂದ ಜಮ್ಮುವಿನತ್ತ ಸಾಗಲಿದೆ. ರಾಹುಲ್ ಗಾಂಧಿಗೆ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಇದಕ್ಕಾಗಿ ಪೊಲೀಸ್, ಸಿಆರ್ ಪಿಎಫ್ ಹಾಗೂ ಇತರ ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದ್ದು, ಭಾರತ್ ಜೋಡೋ ಯಾತ್ರೆ ಸುಗಮವಾಗಿ ಸಾಗುವುದನ್ನು ಭದ್ರತಾ ಸಿಬ್ಬಂದಿಗಳು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶನಿವಾರದಂದು ಜಮ್ಮುವಿನ ಹೊರಭಾಗದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿತ್ತು, 9 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಜನವರಿ 30 ರಂದು ಶ್ರೀನಗರದಲ್ಲಿ ಭರತ್ ಜೋಡೋ ಯಾತ್ರೆ ಪೂರ್ಣಗೊಳ್ಳಲಿದ್ದು, ಅಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣದ ಮೂಲಕ ಯಾತ್ರೆ ಸಮಾರೋಪ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಭಾರತದ ಹಲವೆಡೆ ಭಾರಿ ಮಳೆ ಸಾಧ್ಯತೆ.

Sun Jan 22 , 2023
  ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಶೀತದ ಅಲೆಗಳು ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಭಾರತದಲ್ಲಿ ಶೀತ ಹವಾಮಾನ ಇದೇ 23 ರಿಂದ ಪ್ರಾರಂಭವಾಗಲಿದೆ ಮತ್ತು ಜನವರಿ 24 ರ ವೇಳೆಗೆ ವಿಮಾನಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ ಮತ್ತು ಜನವರಿ 25 ರವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದೆ. ಮುಂದಿನ ವಾರ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು […]

Advertisement

Wordpress Social Share Plugin powered by Ultimatelysocial