ಜೆಸಿಂಡಾ ಆರ್ಡರ್ನ್ ಪದತ್ಯಾಗ.

ನೇಪಿಯರ್: ನ್ಯೂಜಿಲ್ಯಾಂಡ್ ಪ್ರಧಾನಿ ಹುದ್ದೆಯಿಂದ ಜೆಸಿಂಡಾ ಆರ್ಡರ್ನ್ ಅವರು ಕೆಳಕ್ಕಿಳಿಯುವುದಾಗಿ ಘೋಷಿಸಿದ ಬಳಿಕ ಇದೀಗ ಹೊಸ ಪ್ರಧಾನ ಮಂತ್ರಿಯ ನೇಮಕವಾಗಿದೆ. ಲೇಬರ್ ಪಕ್ಷದ ಸಂಸದ ಹಾಗೂ ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರು ನೂತನ ಪ್ರಧಾನಿಯಾಗಲಿದ್ದಾರೆ.

ಕೋವಿಡ್ 19 ಸಂದರ್ಭದಲ್ಲಿ ಹಿಪ್ಕಿನ್ಸ್ ಅವರು ಜವಾಬ್ದಾರಿ ಹೊತ್ತಿದ್ದರು. ಲೇಬರ್ ಪಕ್ಷದಿಂದ ಹಿಪ್ಕಿನ್ಸ್ ಒಬ್ಬರನ್ನೇ ನಾಮ ನಿರ್ದೇಶನ ಮಾಡಿದ್ದರಿಂದ ಅವರು ಅವಿರೋಧವಾಗಿ ನೇಮಕವಾದರು.

“ನಾವು ಈ ಆಯ್ಕೆ ಪ್ರಕ್ರಿಯೆಯನ್ನು ಏಕತೆಯೊಂದಿಗೆ ನಡೆಸಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ. ನ್ಯೂಜಿಲ್ಯಾಂಡ್‌ ನ ಜನರ ಸೇವೆಗೆ ನಿಜವಾದ ಬದ್ಧತೆಯನ್ನು ಹೊಂದಿರುವ ಇಂತಹ ಅದ್ಭುತ ಜನರ ಗುಂಪಿನೊಂದಿಗೆ ಕೆಲಸ ಮಾಡಲು ನಾನು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ” ಎಂದು ಹಿಪ್ಕಿನ್ಸ್ ಹೇಳಿದರು.

ಕಳೆದ ಗುರುವಾರ ಪಿಎಂ ಜೆಸಿಂಡಾ ಆರ್ಡರ್ನ್ ಅವರು ತಾನು ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿಯುವುದಾಗಿ ಘೋಷಿಸಿದ್ದರು. ಕಳೆದ ಐದೂವರೆ ವರ್ಷಗಳಿಂದ ಪ್ರಧಾನಿಯಾಗಿದ್ದ 37 ವರ್ಷದ ಜೆಸಿಂಡಾ ಅವರು ಇನ್ನು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಮೊಟ್ಟೆ ತಿನ್ನುವುದರ ದುಷ್ಪರಿಣಾಮಗಳು.

Sat Jan 21 , 2023
ಮೊಟ್ಟೆ ತಿನ್ನುವುದರ ದುಷ್ಪರಿಣಾಮಗಳು: ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತವೆ, ಇದರಿಂದಾಗಿ ದೇಹವು ಶಕ್ತಿ ಮತ್ತು ಶಕ್ತಿಯನ್ನು ಪಡೆಯುತ್ತದೆ. ಇದನ್ನು ತಯಾರಿಸುವುದು ಕೂಡ ಸುಲಭ. ಬೇಕಿದ್ದರೆ ಮೊಟ್ಟೆಯನ್ನು ಬೇಯಿಸಿ ತಿನ್ನಿ ಅಥವಾ ಆಮ್ಲೆಟ್ ಮಾಡಿ ಸೇವಿಸಿ. ಎರಡೂ ಸಂದರ್ಭಗಳಲ್ಲಿಯೂ ಸಮಾನ ಪ್ರಯೋಜನವಿದೆ. ಇದರ ಬಳಕೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು, ಮೂಳೆಗಳು ಮತ್ತು ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಆದರೆ ಮೊಟ್ಟೆ ತಿನ್ನುವುದು ಎಲ್ಲರಿಗೂ […]

Advertisement

Wordpress Social Share Plugin powered by Ultimatelysocial