ಮಹಿಳೆಯರಲ್ಲಿ ಆಭರಣಗಳ ಬಗ್ಗೆ ಉತ್ಸಾಹ ತುಸು ಹೆಚ್ಚಾಗಿಯೇ ಇರುತ್ತದೆ.

ಹಿಳೆಯರಲ್ಲಿ ಆಭರಣಗಳ ಬಗ್ಗೆ ಉತ್ಸಾಹ ತುಸು ಹೆಚ್ಚಾಗಿಯೇ ಇರುತ್ತದೆ. ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರ ಹೀಗೆ ಜಗತ್ತಿನಲ್ಲಿ ಅನೇಕ ಬಗೆಯ ದುಬಾರಿ ಆಭರಣಗಳು ಲಭ್ಯವಿವೆ. ಮಹಿಳೆಯರ ಆಭರಣಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಚಾರವೊಂದಿದೆ. ಸಾಮಾನ್ಯವಾಗಿ ಮಹಿಳೆಯರು ಪಾದಗಳಲ್ಲಿ ಚಿನ್ನದ ಕಾಲುಂಗುರಗಳನ್ನು ಧರಿಸುವುದಿಲ್ಲ.

ಚಿನ್ನದ ಕಾಲ್ಗೆಜ್ಜೆಯನ್ನೂ ಧರಿಸುವುದಿಲ್ಲ.ಇದಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಎರಡೂ ಕಾರಣಗಳಿವೆ.

ಹಿಂದೂ ಧರ್ಮದಲ್ಲಿ ಮಹಿಳೆಯರ ಆಭರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರತಿಯೊಂದು ಆಭರಣಕ್ಕೂ ತನ್ನದೇ ಆದ ಮಹತ್ವವಿದೆ. ವಿಷ್ಣುವಿಗೆ ಚಿನ್ನವು ತುಂಬಾ ಪ್ರಿಯವಾಗಿದ್ದು ಎಂದು ಹೇಳಲಾಗುತ್ತದೆ. ವಿಷ್ಣುವಿನ ಪತ್ನಿಯಾದ ಲಕ್ಷ್ಮಿದೇವಿಗೂ ಚಿನ್ನಕ್ಕೂ ಅವಿನಾಭಾವ ಸಂಬಂಧ. ಹಾಗಾಗಿಯೇ ಸೊಂಟದ ಕೆಳಗೆ ಯಾವುದೇ ಚಿನ್ನದ ಆಭರಣಗಳನ್ನು ಧರಿಸಬಾರದು ಎಂಬುದು ನಂಬಿಕೆ. ಸೊಂಟದ ಕೆಳಗೆ ಬಂಗಾರದ ಆಭರಣಗಳನ್ನು ಧರಿಸಿದ್ರೆ ವಿಷ್ಣು ಮತ್ತು ಲಕ್ಷ್ಮಿಗೆ ಅಪಮಾನ ಮಾಡಿದಂತೆ, ದೇವತೆಗಳು ನಮ್ಮ ಮೇಲೆ ಕೋಪಗೊಳ್ಳುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.

ಚಿನ್ನದ ಆಭರಣಗಳು ನಮ್ಮ ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ. ಬೆಳ್ಳಿಯು ತಂಪು ನೀಡುತ್ತದೆ. ಹಾಗಾಗಿ ದೇಹದ ಕೆಳಭಾಗದಲ್ಲಿ ಬೆಳ್ಳಿಯನ್ನು ಧರಿಸುವುದು ಹೆಚ್ಚು ಪ್ರಯೋಜನಕಾರಿ, ಏಕೆಂದರೆ ಅದು ದೇಹದ ಉಷ್ಣತೆಯನ್ನು ಸ್ಥಿರವಾಗಿರಿಸುತ್ತದೆ. ಇದರಿಂದಾಗಿ ಅನೇಕ ರೋಗಗಳು ನಮ್ಮಿಂದ ದೂರವಿರುತ್ತವೆ. ಆದರೆ ನಾವು ಚಿನ್ನವನ್ನು ಧರಿಸಿದಾಗ ದೇಹದ ಉಷ್ಣತೆಯು ನಿಯಂತ್ರಣ ಕಳೆದುಕೊಳ್ಳುತ್ತದೆ ಮತ್ತು ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ. ಈ ಕಾರಣಕ್ಕೆ ಚಿನ್ನದ ಕಾಲುಂಗುರ ಮತ್ತು ಕಾಲ್ಗೆಜ್ಜೆಯನ್ನು ಮಹಿಳೆಯರು ಧರಿಸುವುದಿಲ್ಲ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮೇಶ್ವರ ಜಯಂತಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ ಉದ್ಘಾಟಿಸಿದರು.

Mon Jan 16 , 2023
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ ಉದ್ಘಾಟಿಸಿದರು. ವಿದ್ಯಾವತಿ ಭಜಂತ್ರಿ, ಎಲ್. ಜಿ. ಗಾಡಿವಡ್ಡರ, ಕೆ. ಎಸ್. ಮಮದಾಪೂರ ಮತ್ತಿತರರು ಉಪಸ್ಥಿತರಿದ್ದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial