ಉದ್ಯೋಗಿಗಳಿಗೆ ಅದೃಷ್ಟವೋ ಅದೃಷ್ಟ!

 ಕಂಪನಿಯಲ್ಲಿ ಕೆಲಸ ಮಾಡೋ ಉದ್ಯೋಗಿಗಳು ಅದೃಷ್ಟ ಮಾಡಿರೋದಂತೂ ಸುಳ್ಳಲ್ಲ. ಈ ಕಂಪನಿ ತನ್ನ ಉದ್ಯೋಗಿಗಳಿಗೆ ನಾಲ್ಕು ವರ್ಷದ ಸಂಬಳವನ್ನು ಬೋನಸ್ ಆಗಿ ನೀಡಿದೆ!

ಹೌದು, ತೈವಾನ್ ಎವರ್‌ಗ್ರೀನ್ ಮರೈನ್ ಕಾರ್ಪೋರೇಷನ್ ಹೊಸ ವರ್ಷದ ಖುಷಿಗೆ ತನ್ನ ಉದ್ಯೋಗಿಗಳಿಗೆ ಭಾರೀ ಗಿಫ್ಟ್ ನೀಡಿದೆ.

ತೈವಾನ್ ಮೂಲದ ಶಿಪ್ಪಿಂಗ್ ಕಂಪನಿ ವರ್ಷಾಂತ್ಯದ ಬೋನಸ್ ಘೋಷಣೆ ಮಾಡಿದ್ದು, 50 ತಿಂಗಳ ಸಂಬಳ ಒಟ್ಟಿಗೇ ಸಿಗೋ ಖುಷಿಯಲ್ಲಿ ಉದ್ಯೋಗಿಗಳು ಕುಣಿದು ಕುಪ್ಪಳಿಸಿದ್ದಾರೆ. ತೈವಾನ್ ಆಧಾರಿತ ಒಪ್ಪಂದಗಳನ್ನು ಹೊಂದಿರುವ ಸಿಬ್ಬಂದಿಗಳಿಗೆ ಮಾತ್ರ ಬೋನಸ್ ಅನ್ವಯಿಸುತ್ತದೆ.

ವರ್ಷಾಂತ್ಯದ ಬೋನಸ್ ಯಾವಾಗಲೂ ಕಂಪನಿಯ ವರ್ಷದ ಕಾರ್ಯಕ್ಷಮತೆ ಮತ್ತು ಉದ್ಯೋಗಿಗಳು ವೈಯಕ್ತಿಕವಾಗಿ ಕಾರ್ಯನಿರ್ವಹಿಸಿದ ನೀತಿ ಅನುಸಾರ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಈ ಬೋನಸ್ ಎಲ್ಲರಿಗೂ ಸಿಕ್ಕಿಲ್ಲ, ಶಾಂಘೈ ಮೂಲದ ಉದ್ಯೋಗಿಗಳು ತಮ್ಮ ಮಾಸಿಕ ಸಂಬಂಳದ ಐದರಿಂದ ಎಂಟು ಪಟ್ಟು ಬೋನಸ್ ಪಡೆದಿದ್ದಾರೆ. ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ನೀತಿ ಬಗ್ಗೆ ಉದ್ಯೋಗಿಗಳು ಗರಂ ಆಗಿದ್ದಾರೆ. ಇನ್ನು ಹಲವರು ಕೆಲಸ ಬಿಡಲು ತಯಾರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಜಿಯೋ 5G ಈಗ ದೇಶದ 88 ನಗರಗಳಲ್ಲಿ ಪ್ರಾರಂಭ!

Tue Jan 10 , 2023
ರಿಲಯನ್ಸ್ ಜಿಯೋ ಈ ಹೊಸ ವರ್ಷದ ವೇಳೆಗೆ ದೇಶದ ಪ್ರಮುಖ ಭಾರತೀಯ ನಗರಗಳಲ್ಲಿ ತನ್ನ 5G ನೆಟ್ವರ್ಕ್ ಅನ್ನು ನಿಯೋಜಿಸುವ ತನ್ನ ಬದ್ಧತೆಯನ್ನು ಪೂರೈಸುವ ಹಾದಿಯಲ್ಲಿದೆ. ಕಳೆದ ವರ್ಷ ಅಕ್ಟೋಬರ್ 2022 ರಲ್ಲಿ ತನ್ನ ಅದ್ವಿತೀಯ 5G ನೆಟ್ವರ್ಕ್ ಅನ್ನು ಪ್ರಾರಂಭಿಸಿದ ಟೆಲ್ಕೊ ಭಾರತದಾದ್ಯಂತ 80 ಕ್ಕೂ ಹೆಚ್ಚು ನಗರಗಳನ್ನು ತಲುಪಿದೆ. 3 ತಿಂಗಳೊಳಗೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ನಗರಗಳನ್ನು ಆವರಿಸುತ್ತದೆ. ಇತ್ತೀಚಿನ ನಿಯೋಜನೆಯಲ್ಲಿ ಆಗ್ರಾ, ಕಾನ್ಪುರ ನೆಲ್ಲೂರು, […]

Advertisement

Wordpress Social Share Plugin powered by Ultimatelysocial