ರಾಷ್ಟ್ರಪತಿಯ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದ ಮಹಿಳಾ ಇಂಜಿನಿಯರ್ ಸಸ್ಪೆಂಡ್.

newupಜೋಧ್​ಪುರ: ಕಳೆದ ಜನವರಿ 4ರಂದು ರೋಹೆತ್‌ನಲ್ಲಿ ನಡೆದ ಸ್ಕೌಟ್ ಗೈಡ್ ಜಾಂಬೋರಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದ್ದರು. ಈ ವೇಳೆ ರಾಜಸ್ಥಾನ ಸರ್ಕಾರದ ಮಹಿಳಾ ಇಂಜಿನಿಯರ್ ಒಬ್ಬರು ಭದ್ರತಾ ಪ್ರೋಟೋಕಾಲ್ ಉಲ್ಲಂಘಿಸಿ ರಾಷ್ಟ್ರಪತಿ ಅವರ ಪಾದಗಳನ್ನು ಸ್ಪರ್ಶಿಸಿ, ನಮಸ್ಕರಿಸುವ ಪ್ರಯತ್ನ ಮಾಡಿದ್ದರು.

ಇದೀಗ ಪ್ರೋಟೋಕಾಲ್ ಉಲ್ಲಂಘಿಸಿದ ಇಂಜಿನಿಯರ್ ಅಂಬಾ ಸಿಯೋಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ಪ್ರೋಟೋಕಾಲ್ ಉಲ್ಲಂಘನೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯ, ರಾಜಸ್ಥಾನದ ಸಾರ್ವಜನಿಕ ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗ ವರದಿ ನೀಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ನಾಗರಿಕ ಸೇವಾ ನಿಯಮದ ಅನ್ವಯ ಇಲಾಖೆ ಇಂಜಿನಿಯರ್ ಅಂಬಾ ಸಿಯೋಲ್ ವಿರುದ್ಧ ಕ್ರಮ ಜರುಗಿಸಿದೆ.

ರಾಷ್ಟ್ರಪತಿ ಆಗಮಿಸಿದ ಕಾರ್ಯಕ್ರಮದಲ್ಲಿ ಇಂಜಿನಿಯರ್ ಅಂಬಾ ಸಿಯೋಲ್ ನೀರಿನ ವ್ಯವಸ್ಥೆ ನೋಡಿಕೊಳ್ಳುವ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬರುತ್ತಿರುವಾಗ ಭದ್ರತೆಯನ್ನೂ ಲೆಕ್ಕಿಸದೆ, ನಿಯಮ ಉಲ್ಲಂಘಿಸಿ ಅಲ್ಲಿ ನಿಂತಿದ್ದ ಗಣ್ಯರ ಸಾಲಿನಲ್ಲಿ ನುಸುಳಿದ್ದರು. ರಾಷ್ಟ್ರಪತಿ ಹತ್ತಿರ ಬರುತ್ತಿದ್ದಂತೆ ಅವರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾಗಿದ್ದರು. ಈ ಘಟನೆಯನ್ನು ನೋಡಿದ್ದ ಸ್ಥಳೀಯ ಪೊಲೀಸರು ಆಕೆಯ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು. ಆದರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಸಚಿವಾಲಯ, ಆಕೆಯ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳದಲ್ಲಿ ಧಾರುಣ ಘಟನೆ .

Sat Jan 14 , 2023
ಕೊಪ್ಪಳ : ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕತ್ತು ಕುಯ್ದುಕೊಂಡು ಪ್ರೇಮಿಗಳಿಬ್ಬರು ಭಯಾನಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಪ್ರಕಾಶ್ (20) ಸುಮಾ (17) ಎಂದು ಗುರುತಿಸಲಾಗಿದೆ. ಪ್ರಕಾಶ್ ಫೋಟೋಗ್ರಾಫರ್ ಕೆಲಸ ಮಾಡಿಕೊಂಡಿದ್ದು, ಸುಮಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಇಬ್ಬರ ಪ್ರೀತಿಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದು, ಶನಿವಾರ ಅವರಿಬ್ಬರು ಕತ್ತು ಕುಯ್ದುಕೊಂಡು […]

Advertisement

Wordpress Social Share Plugin powered by Ultimatelysocial