ತಾಲೂಕು ಪಂಚಾಯಿತಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ:

ತಾಲೂಕು ಪಂಚಾಯಿತಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ: ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಬರದೆ ಹೋದರೆ ತಾಲೂಕು ಪಂಚಾಯಿತಿ ಮುತ್ತಿಗೆ

ರಾಯಚೂರು :ದೇವದುರ್ಗ ಎಮ್.ಜಿ.ಎನ್.ಆರ್.ಇ.ಜಿ.ಎ ಯೋಜನೆಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸಮಾನಂತರವಾಗಿ ಹಂಚಿಕೆ ಮಾಡದೆ ರಾಜಕೀಯವಾಗಿ ಬಳಸಿಕೊಂಡು ಬಿಜೆಪಿ ಪಕ್ಷವನ್ನ ಬೆಂಬಲಿಸಿದ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಕ್ರೀಯಾಯೋಜನೆಗೆ ಅನುಮೊದನೆ ನೀಡುತ್ತೆನೆಂದು ನೇರವಾಗಿ ಹೇಳುವ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಂಪಾಪತಿಹೀರೆಮಠ
ಅವರನ್ನ ತಕ್ಷಣ ವಜಾಗೊಳಿಸಿ ಸಂವಿಧಾನ ಬದ್ಧ ಸ್ಥಾನದ ಗೌರವ ಕಾಪಾಡುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾಲೂಕು ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು,

ಎಮ್.ಜಿ.ಎನ್.ಆರ್.ಇ.ಜಿ.ಎ ಯೋಜನೆಯಲ್ಲಿ ನಮ್ಮ ಹೊಲ ನನ್ನು ರಸ್ತೆ ಕಾಮಗಾರಿಗಳನ್ನ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಈ ಬಗ್ಗೆ ಉನ್ನತ ಮಟ್ಟದ ತನಿಕೆಯಾಗಬೇಕು. ಗ್ರಾಮ ಸಭೆಯ ಮುಖಾಂತರ ಆಯ್ಕೆಯಾದ ಅಮೃತ ಸರೋವರ ಹಾಗೂ ಇನ್ನಿತರ ಕಾಮಗಾರಿಯನ್ನ ಪ್ರಾರಂಭಿಸಬೇಕು ಹಾಗೂ ತಮ್ಮ ಮನಸ್ತಿಗೆ ಬಂದಂತೆ ಕಾಮಗಾರಿಗಳಿಗೆ ಅನುಮೋದನೆ ನೀಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಜಾಲಹಳ್ಳಿ ಸಂತ ಮಾರುಕಟ್ಟೆಯ ರಸ್ತೆಯ ಚರಂಡಿಯನ್ನ ಮಾಡೇಕೆಂದು ಕಳೆದ ಎರಡುಮೂರ ಹೋರಾಟಗಳಲ್ಲಿ ಸಂಭಂದಿಸಿದ ಅಧಿಕಾರಿಗಳು ಬರವೆಣಿಗೆ ಮುಖಾಂತ ಲಿಖಿತ ಬರವಸೆ ನೀಡಿದರು ವಿನಯ ಕಾರಣ ವಿಳಂಬ ಮಾಡುತ್ತಿರುವ ಸರಿಯಲ್ಲ

ಸ್ಥಳೀಯವಾಗಿ ಗ್ರಾಮ ಸಭೆಗಳಲ್ಲಿ ನಿರ್ಣಯಿಸಿದ ತಿರ್ಮಾನಗಳನ್ನ ಕಡ್ಡಾಯವಾಗಿ ಜಾರಿಗೊಳಸಬೇಕು ಮತ್ತು ಸಕಾಲದಲ್ಲಿ ಗ್ರಾಮ ಸಭೆಗಳನ್ನ ಮಾಡಲು ಸೂಚಿಸಬೇಕು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಮಂಜೂರಾದ ವಿವಿಧ ಯೋಜನೆಗಳನ್ನ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸರಕಾರದ ನಿಯಮದಂತೆ ಹಂಚಿಕೆ ಮಾಡಬೇಕು.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ವಸತಿ, ಕುಡಿಯುವ ನೀರು ಇನ್ನಿತರ ಮೂಲಭೂತ ಸೌಲಭ್ಯಗಳು ಸಮಾನಂತರ ಆಧ್ಯತೆಯ ಮೇಲೆ ಒದಗಿಸಬೇಕು

15 ನೇ ಹಣಕಾಸು ಯೋಜನೆಯಲ್ಲಿ ಸುಳ್ಳು ದಾಖಲೆಗಳನ್ನು ಸ್ಮಸಿ ಕಮೀಷನ್‌ ಗಾಗಿ ಭ್ರಷ್ಟಾಚಾರ ಮಾಡಲಾಗಿದೆ ಈ ಬಗ್ಗೆ ತನಿಖೆ ಮಾಡಿ ತಪಿತಸ್ಥರನ್ನು ಬಂದಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು

ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದೆ ಹೋದರೆ ತಾಲೂಕು ಪಂಚಾಯತ್ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಕಾರರು ಆಗ್ರಹಿಸಿದರು,

ಇದೆ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ.ಡಿ. ವೀರನಗೌಡ, ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ್, ಉಪಾಧ್ಯಕ್ಷೆ ಶಬ್ಬೀರ್ ಜಾಲಹಳ್ಳಿ, ದುರಗಪ್ಪ ವರಟಿ, ಭೂಜಪ್ಪ, ಮುಕ್ಕನಗೌಡ, ಹನುಮಂತ ಬುಂಕಲದೊಡ್ಡ, ಮುಕ್ತ ಪಾಷಾ, ಹನುಮಂತ ಮಂಡಲಗುಡ್ಡ, ದೇವಣ್ಣ, ರಿಯಾಜ್ ಆರ್ತಿ, ರಾಜು ನಾಯಕ, ಮತ್ತು ಇತರರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದರಾಸಗಳಲ್ಲಿ ಸಾಮಾನ್ಯ ಶಿಕ್ಷಣವನ್ನು ಬೋಧಿಸಲು ಕ್ರಮ ವಹಿಸುತ್ತೇವೆ:

Tue Jan 24 , 2023
ಗುವಾಹಟಿ: ರಾಜ್ಯದಲ್ಲಿ ಮದರಾಸಗಳ ಸಂಖ್ಯೆಯನ್ನು ಕಡಿಮೆ ಮಾಡಿ ಅವುಗಳನ್ನು ನೋಂದಣಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಮೊದಲನೆಯದಾಗಿ ನಾವು ಅಸ್ಸಾಂನಲ್ಲಿರುವ ಮದರಾಸಗಳ ಸಂಖ್ಯೆಯನ್ನು ಇಳಿಕೆ ಮಾಡಲು ತಯಾರಿ ನಡೆಸಿದ್ದೇವೆ. ಮದರಾಸಗಳಲ್ಲಿ ಸಾಮಾನ್ಯ ಶಿಕ್ಷಣವನ್ನು ಬೋಧಿಸಲು ಕ್ರಮ ವಹಿಸುತ್ತೇವೆ. ಜೊತೆಗೆ ಮದರಾಸಗಳನ್ನು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ. ನಮ್ಮ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಜೊತೆ […]

Advertisement

Wordpress Social Share Plugin powered by Ultimatelysocial