KGF ‘ದೊಡ್ಡಮ್ಮ’ನಿಗೆ ಭಾರೀ ಡಿಮ್ಯಾಂಡ್…..

ಕೆಜಿಎಫ್​ ಚಾಪ್ಟರ್ 2 ಚಿತ್ರದಲ್ಲಿ ದೊಡ್ಡಮ್ಮ ದೃಶ್ಯಗಳು ಪಕ್ಕಾ ನೆನಪಿನಲ್ಲಿ ಇರುತ್ತೆ. ಪೊಲೀಸ್ ಸ್ಟೇಷನ್​ ಮುಂದೆ ನಿಂತು ಜೀಪ್​ಗಳನ್ನ ಬ್ಲಾಸ್ಟ್​ ಮಾಡೋ ರಾಕಿ ಸೀನ್ ಈ ಸಮಯದಲ್ಲೂ ಎಲ್ಲ ವಿಕ್ಷಕರಿಗೆ ನೆನಪಿರುತ್ತೆ. ಈ ಚಿತ್ರದಲ್ಲಿ ಬರೋ ದೊಡ್ಡಮ್ಮ ಗನ್ ಈಗ ಸೌತ್ ಸಿನಿಮಾಗಳ ಫೆವರೇಟ್ ಆಗಿದ್ದು, ಅಜಿತ್ ಚಿತ್ರದಲ್ಲೂ ಕಾಣಿಸಿಕೊಂಡಿದೆ.ಕೆಜಿಎಫ್ ಚಾಪ್ಟರ್ 2 ಚಿತ್ರದ ಹೈ-ವೋಲ್ಟೆಜ್ ದೃಶ್ಯಗಳಲ್ಲಿ ಒಂದು ಈ ದೊಡ್ಡಮ್ಮ ಸೀನ್. ಟ್ರೈಪೋಡ್​ ಮೇಲೆ ಮಿಷನ್ ಗನ್ ಫಿಕ್ಸ್ ಪೊಲೀಸ್​ ಜೀಪ್​ಗಳನ್ನ ಬ್ಲಾಸ್ಟ್ ಮಾಡೋ ರಾಕಿ ಭಾಯ್​ ಸೀನ್ ನೋಡುಗರಿಗೆ ರೋಮಾಂಚನ ಸೃಷ್ಟಿಸಿಬಿಡುತ್ತೆ. ಈ ಗನ್​ಗೆ ದೊಡ್ಡಮ್ಮ ಅಂತ ಹೆಸರಿಟ್ಟಿದ್ದು, ಈಗ ಸೌತ್ ಸಿನಿಮಾಗಳಲ್ಲಿ ದೊಡ್ಡಮ್ಮನ ಬೇಡಿಕೆ ಜಾಸ್ತಿ ಆಗಿದೆ. ಕೆಜಿಎಫ್ ಆದ್ಮೇಲೆ ಬಂದ ‘ವಿಕ್ರಮ್’ ಚಿತ್ರದಲ್ಲೂ ಇಂಥಹದ್ದೇ ಗನ್ ಬಳಸಿದ್ರು. ಅದಕ್ಕೂ ಮುಂಚೆ ಲೋಕೇಶ್ ಕನಕರಾಜ್ ಮಾಡಿದ್ದ ‘ಕೈದಿ’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲೂ ದೊಡ್ಡಮ್ಮನ ಹೋಲಿಸೋ ಗನ್ ಬಳಸಿದ್ರು. ಈಗ ಮತ್ತೊಂದು ತಮಿಳು ಚಿತ್ರದಲ್ಲಿ ಇಂಥದ್ದೇ ಗನ್ ನೋಡೋಕೆ ಸಿಕ್ಕಿದೆ.ಅಜಿತ್ ಚಿತ್ರದಲ್ಲಿ ಕಾಣಿಸ್ತು ಕೆಜಿಎಫ್ ದೊಡ್ಡಮ್ಮ.!ತಮಿಳು ನಟ ಅಜಿತ್ ಕುಮಾರ್ ನಟನೆಯ ‘ತುನಿವು’ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗ್ತಿದೆ. ರಿಸೆಂಟ್​ ಆಗಿ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ತಲಾ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ. ಆದ್ರೆ, ಈ ಟ್ರೇಲರ್​ನಲ್ಲಿ ಸ್ಯಾಂಡಲ್​ವುಡ್​ ಫ್ಯಾನ್ಸ್ ಗಮನ ಸೆಳೆದಿದ್ದು ಮಾತ್ರ ಕೆಜಿಎಫ್ ಚಿತ್ರದಲ್ಲಿ ನೋಡಿದ್ದ ದೊಡ್ಡಮ್ಮ. ‘ತುನಿವು’ ಚಿತ್ರದಲ್ಲಿ ಅಜಿತ್ ಜೊತೆ ಮಂಜು ವಾರಿಯರ್ ನಾಯಕಿಯಾಗಿ ನಟಿಸಿದ್ದು, ಚಿತ್ರದ ಆಯಕ್ಷನ್ ಸೀನ್​ವೊಂದರಲ್ಲಿ ಕೆಜಿಎಫ್ ದೊಡ್ಡಮ್ಮನನ್ನ ಹೋಲಿಸೋ ಗನ್ ಕಾಣಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪ್ರೆಸಿಡೆನ್ಸಿ ವಿವಿಯಲ್ಲಿ ವಿದ್ಯಾರ್ಥಿನಿ ಕೊಲೆ ಹಿನ್ನೆಲೆ.

Thu Jan 5 , 2023
ಪ್ರೆಸಿಡೆನ್ಸಿ ವಿವಿಯಲ್ಲಿ ವಿದ್ಯಾರ್ಥಿನಿ ಕೊಲೆ ಹಿನ್ನೆಲೆ. ವಿವಿಯ ನಿರ್ಲಕ್ಷ್ಯತೆ ಖಂಡಿಸಿ ಪ್ರತಿಭಟನೆ. ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ವಿವಿ ಮುಂದೆ ನೂರಾರು ಜನರಿಂದ ಪ್ರತಿಭಟನೆ. ಕನ್ನಡ ಪರ ಸೇರಿದಂತೆ ವಿವಿಧ ಪರ ಸಂಘಟನೆಗಳಿಂದ ಪ್ರತಿಭಟನೆ. ವಿವಿ ಆಡಳಿತ ಮಂಡಳಿ ವಿರುದ್ಧ ದಿಕ್ಕಾರಗಳನ್ನ ಕೂಗಿ ಆಕ್ರೋಶ. ಪ್ರತಿಭಟನೆ ಹಿನ್ನೆಲೆ ವಿವಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್. ಪದೇ ಪದೇ ಅಹಿತಕರ ಘಟನೆಗಳು ನಡೆಯುತ್ತಿದ್ರು ಎಚ್ಚೆತ್ತುಕೊಳ್ತಿಲ್ಲ ಅಂತ ಆಕ್ರೋಶ. ಕೂಡಲೆ ಸೂಕ್ತ ಕಾನೂನು ಕ್ರಮ […]

Advertisement

Wordpress Social Share Plugin powered by Ultimatelysocial