ಕಾಲಿವುಡ್‌ ನಲ್ಲಿ ವರ್ಷದ ಮೊದಲ ದೊಡ್ಡ ಹಿಟ್‌ಗಳತ್ತ ಸಾಗುತ್ತಿದೆ.

ಚೆನ್ನೈ: ದಳಪತಿ ವಿಜಯ್‌ ʼವಾರಿಸುʼ ಹಾಗೂ ಅಜಿತ್‌ ಕುಮಾರ್ ʼತುನಿವುʼ ಕಾಲಿವುಡ್‌ ನಲ್ಲಿ ವರ್ಷದ ಮೊದಲ ದೊಡ್ಡ ಹಿಟ್‌ಗಳತ್ತ ಸಾಗುತ್ತಿದೆ. ನಿರೀಕ್ಷೆಯಂತೆ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ.

ಪೊಂಗಲ್ ಹಬ್ಬವನ್ನು ಗುರಿಯಾಗಿಸಿಕೊಂಡು ಜ.11 ರಂದು ವಿಶ್ವದಾದ್ಯಂತ ತೆರೆಗೆ ಬಂದ ʼವಾರಿಸುʼ ಮೊದಲ ದಿನದಲ್ಲೇ ವರ್ಲ್ಡ್‌ ವೈಡ್‌ 45 ಕೋಟಿ ಗಳಿಕೆ ಕಂಡಿತ್ತು. ನಿರೀಕ್ಷೆಯಂತೆ ವಿಜಯ್‌ ಸಿನಿಮಾ 100 ಕೋಟಿ ಗಳಿಕೆಯನ್ನು ಕಂಡಿದೆ. ರಿಲೀಸ್‌ ಆದ ಐದೇ ದಿನದಲ್ಲೇ ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿ ಸದ್ದು ಮಾಡಿದೆ.

ಸಿನಿಮಾ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವೀಟ್‌ ಮಾಡಿದ್ದು, ʼವಾರಿಸುʼ ಹಾಗೂ ʼತುನಿವುʼ ಸಿನಿಮಾ ವರ್ಲ್ಡ್‌ ವೈಡ್‌ ಬಾಕ್ಸ್‌ ಆಫೀಸ್‌ ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಹೇಳಿದ್ದಾರೆ.

ಅಜಿತ್‌ ಕುಮಾರ್‌ ಅವರ ʼತುನಿವುʼ ಸಿನಿಮಾದೊಂದಿಗೆ ಪೈಪೋಟಿ ನೀಡಿ, ʼವಾರಿಸುʼ ಎದ್ದು ಗೆದ್ದು ಬಂದಿದೆ. ಶ್ರೀಮಂತ ಉದ್ಯಮಿ ಕುಟುಂಬದ ಕಥೆಯಲ್ಲಿ ವಿಜಯ್‌ ಮಾಸ್‌ & ಕ್ಲಾಸ್‌ ಲುಕ್‌ ನಲ್ಲಿ ಮಿಂಚಿದ್ದಾರೆ.

ದಿಲ್‌ ರಾಜು ಸಿನಿಮಾಕ್ಕೆ ಬಂಡವಾಳ ಹಾಕಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಶರತ್ ಕುಮಾರ್, ಜಯಸುಧಾ, ಶ್ರೀಕಾಂತ್, ಶಾಮ್ ,ಯೋಗಿ ಬಾಬು ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.

ವಾರಿಸು ʼ ವಾರ್ಸುಡುʼ ಆಗಿ ತೆಲುಗು ವರ್ಷನ್‌ ನಲ್ಲಿ ಜ.14 ರಿಂದ ಆಂಧ್ರ ಹಾಗೂ ತೆಲಂಗಾಣದಲ್ಲಿ ರಿಲೀಸ್‌ ಆಗಿದೆ.

ಇತ್ತ ಮಾಸ್‌ ಪ್ರಿಯರ ಮನ ಕದ್ದ ʼತುನಿವುʼ ಕೂಡ ವಿಶ್ವದಾದ್ಯಂತ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಬಾಕ್ಸ್‌ ಆಫೀಸ್‌ ನಲ್ಲಿ ಸಖತ್‌ ಸದ್ದು ಮಾಡಿದೆ.

ಆಸ್ಟ್ರೇಲಿಯಾದಲ್ಲಿ ʼತುನಿವುʼ ಅಜಿತ್‌ ಕುಮಾರ್‌ ನ ʼ ವಿವೇಗಂʼ ದಾಖಲೆಯನ್ನು ಮುರಿದು ಹೆಚ್ಚಿನ ಕಲೆಕ್ಷನ್‌ ಮಾಡಿದೆ.

ಉತ್ತರ ಅಮೆರಿಕಾದಲ್ಲಿ ʼತುನಿವುʼ 6 ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಮಂಜು ವಾರಿಯರ್, ಜಾನ್ ಕೊಕ್ಕೆನ್, ಅಮೀರ್, ಪಾವ್ನಿ ಮತ್ತು ಬಗವತಿ ಪೆರುಮಾಳ್ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಹೆಚ್.‌ ವಿನೋಥ್‌ ಸಿನಿಮಾಕ್ಕೆ ಆಯಕ್ಷನ್‌ ಕಟ್‌ ಹೇಳಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ.

Sun Jan 15 , 2023
ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ.ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ಏತಿ ಏರ್​ಲೈನ್ಸ್​ ನಿರ್ವಹಿಸುತ್ತಿದ್ದ ಎಟಿಆರ್​-72 ವಿಮಾನವು ಕಸ್ಕಿ ಜಿಲ್ಲೆಯ ಪೋಖರಾದಲ್ಲಿ ಭಾನುವಾರ ಪತನಗೊಂಡಿದ್ದು, ಕನಿಷ್ಠ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ, ವಿಮಾನದಲ್ಲಿ 68 ಪ್ರಯಾಣಿಕರು ಹಾಗೂ 4 ಸಿಬ್ಬಂದಿ ಇದ್ದರು. ಅಪಘಾತದ ಸ್ಥಳದಲ್ಲಿ 13 ಮೃತದೇಹಗಳು ಕಂಡುಬಂದಿದ್ದು, […]

Advertisement

Wordpress Social Share Plugin powered by Ultimatelysocial