ಕೆ.ಆರ್.ಪಿ ಪಕ್ಷದ ಅಭ್ಯರ್ಥಿ ದರಪ್ಪ ನಾಯಕ ನಾಮಪತ್ರ ಸಲ್ಲಿಸಿದರು..!

ತಮ್ಮ ಅಪಾರ ಬೆಂಬಲಿಗರೊಂದಿಗೆ ಕೆ.ಆರ್.ಪಿ ಪಕ್ಷದ ಅಭ್ಯರ್ಥಿ ದರಪ್ಪ ನಾಯಕ ನಾಮಪತ್ರ ಸಲ್ಲಿಸಿದರು.  ಕಳೆದೆರಡು ಚುನಾವಣೆಗಳಲ್ಲಿಯೂ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯದ್ದೇ ಪಾರುಪತ್ತೆಯಾಗಿತ್ತು. ಜೆಡಿಎಸ್ ಇಲ್ಲಿ ಅಖಂಡ ಮಲಗಿದೆ. ಆದರೆ ಇದೀಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದಾಗಿ ಈ ಬಾರಿಯ ಸಾರ್ವತ್ರಿಕ ಚುನಾವಣೆಯು ತ್ರಿಕೋನ ಸ್ಪರ್ಧೆ ಆಗಬಹುದಾಗಿದೆ.

ಶನಿವಾರವಾದ ಇಂದು ವಿಧಾನಸಭಾ ಕ್ಷೇತ್ರದ ಕೆ.ಆರ್.ಪಿ. ಪಕ್ಷದ ಅಧಿಕೃತ ಅಭ್ಯರ್ಥಿ ಟಿ.ಧರಪ್ಪ ನಾಯಕ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ ಗಾಳಿ ಜನಾರ್ಧನ ರೆಡ್ಡಿ ಇವರ ಪತ್ನಿ ಅರುಣ ಲಕ್ಷ್ಮಿ ಹಾಗೂ ಬೆಂಬಲಿಗರೊಂದಿಗೆ ತಾಲ್ಲೂಕು ಆಡಳಿತ ಕಛೇರಿಯಲ್ಲಿನ ಚುನಾವಣಾಧಿಕಾರಿ ಕೆ.ಹೆಚ್ ಸತೀಶರಿಗೆ ಶನಿವಾರ ಚುನಾವಣೆಗೆ ತಮ್ಮ ಅಧಿಕೃತ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಪಂ. ಮಾಜಿ ಸದಸ್ಯೆ ಎಚ್.ಸಿ. ರಾಧ ಇವರೂ ಸಹ ಕೆ.ಆರ್.ಪಿ. ಪಕ್ಷದಿಂದ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ತಾಲ್ಲೂಕು ಕ್ರೀಡಾಂಗಣದಿಂದ ತೆರದ ವಾಹನದಲ್ಲಿ ಅಪಾರ ಬೆಂಬಲಿಗರೊಂದಿಗೆ ಭರ್ಜರಿ ಮೆರವಣಿಗೆ ನಡೆಸಿದರು. ಕೆ.ಆರ್.ಪಿ.ಪಿ. ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಅರುಣ ಲಕ್ಷ್ಮಿ, ಕೆ.ಆರ್.ಪಿ.ಪಿ.ಜಿಲ್ಲಾಧ್ಯಕ್ಷ ಗೋನಾಳು ರಾಶೇಖರ ಗೌಡ, ಮುಖಂಡ ಅಲಿಖಾನ್ ಇದ್ದರು.ಈವೇಳೆ ಅರುಣ ಲಕ್ಷ್ಮಿ ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಅಭಿಪ್ರಾಯ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

10 Greatest Relationship Sites For Folks Over 50 To Seek Out Love

Sun Apr 16 , 2023
Jenny Pizer, chief authorized officer for Lambda Legal, referred to as the decision limited. He acknowledged that Friday’s choice may lead to “misguided, even hurtful” messages. But, he said, “the Nation’s answer is tolerance, not coercion. The First Amendment envisions the United States as a wealthy and sophisticated place the […]

Advertisement

Wordpress Social Share Plugin powered by Ultimatelysocial