ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾವತಿ ಶಿವಳ್ಳಿ ನಾಮಪತ್ರ..!

ಟಿಕೆಟ್ ತಪ್ಪತ್ತೇ ಟಿಕೆಟ್ ತಪ್ಪತ್ತೇ ಎಂಬ ಬಹುದೊಡ್ಡ ಚರ್ಚೆ ನಡುವೆ ಕಾಂಗ್ರೆಸ್ ಬಿ ಫಾರ್ಮ್ ಪಡೆದುಕೊಂಡು ಬಂದ ಶಾಸಕಿ ಕುಸುಮಾವತಿ ಶಿವಳ್ಳಿ ಎರಡನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕುಂದಗೋಳ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಕುಸುಮಾವತಿ ಶಿವಳ್ಳಿ ಅಪಾರ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು, ನಾಮಪತ್ರ ಸಲ್ಲಿಸಿದ ಮಾತನಾಡಿದ ಶಾಸಕಿ ಅಭಿವೃದ್ಧಿ ವಿಚಾರದಲ್ಲಿ ಕುಂದಗೋಳ ಕ್ಷೇತ್ರ ಅಲ್ಪಮಟ್ಟಿಗೆ ಹಿಂದುಳಿದಿದೆ, ಕಾರಣ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು, ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಆಗಲಿದೆ ಎಂದರು. ಶಾಸಕರ ಜೊತೆ ನಾಯಕರಾದ ಅರವಿಂದ ಕಟಗಿ. ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಗುರುವಾರ ಅದ್ದೂರಿಯಾಗಿ ತಮ್ಮ ನೆಚ್ಚಿನ ಸಾವಿರಾರು ಅಭಿಮಾನಿಗಳ ನಡುವೆ ನಾಮಪತ್ರ ಸಲ್ಲಿಸಿದರು.ಗುರುವಾರ ಬೆಳಿಗ್ಗೆ ಗಾಳಿ ಮರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಗೈದು ಪಟ್ಟಣದ ತಮ್ಮ ಅಭಿಮಾನಿಗಳೊಂದಿಗೆ ಅದ್ದೂರಿ ರೋಡ ಶೋ ನಡೆಸಿದರು.

ಎತ್ತಿನ ಬಂಡಿ ಏರಿ ಜನರತ್ತ ಕೈಬೀಸುತ್ತಾ ಜನರಿಗೆ ಕೈ ಮುಗಿತಾ ಸಾಗಿದ ಎಸ್ ಐ ಚಿಕ್ಕನಗೌಡ್ರ ರೊಂದಿಗೆ ಮಗಳು ನಂದಾ ಚಿಕ್ಕನಗೌಡ್ರ,ಎ. ಬಿ. ಉಪ್ಪಿನ, ಶಂಕರಗೌಡ ನಿರಂಜನ ಗೌಡ್ರ, ರುದ್ರಪ್ಪ ಗಾಣಿಗೇರ್,ಮಾಣಿಕ್ಯ ಚಿಲ್ಲೋರ, ಸೇರಿದಂತೆ ಹಲವು ಮುಖಂಡರು ಸಾಥ ನೀಡಿದರು.ಪಟ್ಟಣದ ಗಾಳಿ ಮಾರಮ್ಮ ದೇವಸ್ಥಾನದ ಆರಂಭವಾದ ರೋಡ್ ಶೋ ಬಸ್ ಸ್ಟ್ಯಾಂಡ್ ಮಾರ್ಗವಾಗಿ ಮೂರ್ ಅಂಗಡಿ ಕೂಟದ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಮಾಡಲಾಯಿತು .

ಮೆರವಣಿಗೆ ಉದ್ದಕ್ಕೂ ಚಿಕ್ಕನಗೌಡರ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹಸಿರು ಟವಲ್ ಹಾಕಿಕೊಂಡು ಬಿಸಿಲನ್ನು ಲೆಕ್ಕಿಸದೆ ಸಾಗಿದರು.ನಾಮಪತ್ರ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಚಿಕ್ಕನಗೌಡರ
ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಸಂತೋಷ ತಂದಿದೆ ಹಿಂದೆ ಶಾಸಕನಾಗಿ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುವೆ, ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಈ ಬಾರಿ ಜನರ ಅನುಕಂಪ ನನ್ನ ಮೇಲಿದೆ ಹಾಗೂ ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಸಿ ಫಾರ್ಮ್ ಸಿಗುವ ಅಭಿಲಾಷೆವನ್ನು ವ್ಯಕ್ತಪಡಿಸಿದರು.

ಮೆರವಣಿಗೆಯಲ್ಲಿ ಎಂ ಎಚ್ ಮಾದನೂರ್, ವಿ ಡಿ ಸೀಮಿಕೆರೆ ಮಲ್ಲಿಕಾರ್ಜುನ ಕಿರೇಸೂರ, ಜಾಕಿರ್ ಹುಸೇನ್ ಯರಗುಪ್ಪಿ, ಸಲೀಂ ಕಡ್ಲಿ, ಮುಸ್ತಾಕ ಕಿಲೆದಾರ,ಎಚ್ ವಿ ಪಾಟೀಲ, ಯೂಸಫ್ ಛಡ್ಡಿ, ವೈ ಜಿ ಪಾಟೀಲ ಭಾಗವಹಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿದರ್ ಜಿಲ್ಲೆ ಬಸವಕಲ್ಯಾಣ ಬಿಜೆಪಿಗೆ ದೊಡ್ಡ ಹೊಡೆತ..!

Fri Apr 21 , 2023
ಬಸವಕಲ್ಯಾಣ ಬಿಜೆಪಿ ಪಕ್ಷದ ಘಟಾನುಘಟಿಗಳಿಂದ ರಾಜಿನಾಮೆ ಪರ್ವ. ಇಲ್ಲಿನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗು ಬಿಜೆಪಿಯ ಪ್ರಭಾವಿ ನಾಯಕ ಗುಂಡು ರೆಡ್ಡಿ ರಾಜಿನಾಮೆ ನಿಡಿ ಕಾಂಗ್ರೆಸ್ ಸೆರಿದ ಬೆನ್ನಲ್ಲೇ ಹಲವು ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳು ರಾಜಿನಾಮೆ ನಿಡುತ್ತಿದ್ಧಾರೆ. ಇದಿಗ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಹಾಗು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಲತಾ ಹಾರಕೂಡೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಕ್ಕೆ ರಾಜೀನಾಮೆ ನಿಡಿದ್ಧಾರೆ. ರಾಜಿನಾಮೆ ನಿಡಿ ಪತ್ರಿಕಾಗೋಷ್ಠಿ ನಡೆಸಿದ […]

Advertisement

Wordpress Social Share Plugin powered by Ultimatelysocial