Logistics Park: ಬೆಂಗಳೂರಲ್ಲಿ 1770 ಕೋಟಿ ವೆಚ್ಚದ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್! NHLML ಜತೆ ಡೀಲ್

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್ (NHLML) ಎಂದು ಕರೆಯಲಾಗುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ದ ಘಟಕವು, ಬೆಂಗಳೂರಿನಲ್ಲಿ (Bengaluru) ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್(multi-modal logistics park) ನಿರ್ಮಾಣಕ್ಕೆ ಸಂಬಂಧಿಸಿದಂತೆ 1,770 ಕೋಟಿ ರೂ.

ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ(ministry of road transport and highways).

ಬೆಂಗಳೂರು ಗ್ರಾಮೀಣ ಜಿಲ್ಲೆಯ ಮುದ್ದಲಿಂಗನಹಳ್ಳಿಯಲ್ಲಿ ಸುಾರು 4000 ಎಕರೆಯಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ. ಪಿಎಂ ಗತಿ ಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲ್ಯಾನ್ ಅಡಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಅತಿ ದೊಡ್ಡ ಪ್ರಾಜೆಕ್ಟ್ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

ಈ ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್ ಮುಂಬರುವ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಸಮೀಪದಲ್ಲಿ ಸ್ಥಾಪನೆಯಾಗುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿ 648 ಮತ್ತು ಅದರ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಮತ್ತು ಬೆಂಗಳೂರು-ಹುಬ್ಬಳ್ಳಿಯನ್ನು ಸಂಪರ್ಕಿಸುವ ಮೂಲಕ ಬಹು ಮೋಡ್ ಸಾರಿಗೆಯನ್ನು ಸಂಯೋಜಿಸುತ್ತದೆ. -ಮುಂಬೈ ರೈಲು ಮಾರ್ಗವು ಅದರ ದಕ್ಷಿಣದಲ್ಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಎಖ್ಸ್ ವೇದಿಕೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಪಾರ್ಕ್, ವಿಮಾನ ನಿಲ್ದಾಣದಿಂದ 58 ಕಿಮೀ ಮತ್ತು ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ 48 ಕಿಮೀ ದೂರದಲ್ಲಿ ಇರಲಿದೆ.

ಈ ಪಾರ್ಕ್ ಅನ್ನು ಮೂರು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮೊದಲನೇ ಹಂತದ ಪಾರ್ಕ್ ನಿರ್ಮಾಣವು ಮುಂದಿನ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದು ಕನ್ಸೆಷನ್ ಪಿರಿಯಡ್‌ 45 ವರ್ಷ ಪೂರೈಸುವ ಹೊತ್ತಿಗೆ 30 ಮಿಲಿಯನ್ ಮೆಟ್ರಿಕ್ ಟನ್ ಕಾರ್ಗೊ ನಿರ್ವಹಣೆ ಮಾಡಲಿದೆ. ಸಹಜವಾಗಿಯೇ ಇದರಿಂದ ಬೆಂಗಳೂರು ಮತ್ತ ತುಮಕೂರುಗಳಂಥ ಕೈಗಾರಿಕಾ ಪ್ರದೇಶಗಳಿಗೆ ಭಾರೀ ಲಾಭವಾಗಲಿದೆ.

ಎಂಎಂಲ್‌ಪಿಯ ಅಭಿವೃದ್ಧಿಯು ಒಟ್ಟಾರೆ ಸರಕು ವೆಚ್ಚಗಳು ಮತ್ತು ಸಮಯವನ್ನು ಕಡಿಮೆ ಮಾಡಲು ಸಮರ್ಥ ಅಂತತ್-ಮಾದರಿ ಸರಕು ಸಾಗಣೆಯನ್ನು ಸಕ್ರಿಯಗೊಳಿಸುವ ಮೂಲಕ ದೇಶದ ಸರಕು ಸಾಗಣೆ ವಲಯವನ್ನು ಸುಧಾರಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮವಾಗಿದೆ. ಅತ್ಯುತ್ತಮ ಉಗ್ರಾಣವನ್ನು ಒದಗಿಸಲು, ಸರಕುಗಳ ಟ್ರ್ಯಾಕಿಂಗ್ ಮತ್ತು ಪತ್ತೆಹಚ್ಚುವಿಕೆಯು ಸುಧಾರಿಸಲಿದೆ. ಇದರಿಂದಾಗಿ ಭಾರತೀಯ ಲಾಜಿಸ್ಟಿಕ್ಸ್ ವಲಯದ ದಕ್ಷತೆಯು ಹೆಚ್ಚಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಮೆಕ್ಸಿಕನ್ ಅಸೆಂಬ್ಲಿಯಲ್ಲಿ ತೋರಿಸಲಾದ 'ಅನ್ಯಗ್ರಹ ಜೀವಿಗಳು' ಜೀವಂತವಾಗಿವೆ : ವೈದ್ಯರಿಂದ ಶಾಕಿಂಗ್ ಹೇಳಿಕೆ

Wed Sep 20 , 2023
ಮೆಕ್ಸಿಕೊ ಸಿಟಿ: “ಮಾನವರಲ್ಲದವರು” ಎಂದು ಕರೆಯಲ್ಪಡುವ ಅವಶೇಷಗಳ ಬಗ್ಗೆ ಮೆಕ್ಸಿಕನ್ ವೈದ್ಯರು ನಡೆಸಿದ ವ್ಯಾಪಕ ಪ್ರಯೋಗಾಲಯ ಸಂಶೋಧನೆಗಳು, “ಅನ್ಯಗ್ರಹ ಜೀವಿಗಳು” ಕುಶಲತೆಯಿಂದ ಕೂಡಿಲ್ಲ ಎಂದು ಬಹಿರಂಗಪಡಿಸಿದೆ. ಮೆಕ್ಸಿಕನ್ ನೌಕಾಪಡೆಯ ಆರೋಗ್ಯ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಜೋಸ್ ಡಿ ಜೀಸಸ್ ಜಾಲ್ಸೆ ಬೆನಿಟೆಜ್ ನೇತೃತ್ವದ ತನಿಖೆಗಳು ಸೋಮವಾರ ನೂರ್ ಕ್ಲಿನಿಕ್ನಿಂದ ಯೂಟ್ಯೂಬ್ನಲ್ಲಿ ನೇರ ಪ್ರಸಾರವಾಗಿದ್ದು, ಅವಶೇಷಗಳನ್ನ ಮಾನವರು ಕೃತಕವಾಗಿ ರಚಿಸಿಲ್ಲ ಎಂದು ಬಲವಾಗಿ ಸೂಚಿಸಿದೆ.   ಅನ್ಯಗ್ರಹ ಜೀವಿಗಳನ್ನು ಕಳೆದ […]

Advertisement

Wordpress Social Share Plugin powered by Ultimatelysocial