6 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಬೆಕ್ಕು.!

ಸಾಕುಪ್ರಾಣಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ಅದು ಉದ್ದೇಶಪೂರ್ವಕವಾಗಿ ಎಲ್ಲೋ ಅಲೆದಾಡಬಹುದು ಮತ್ತು ಕಳೆದುಹೋಗಬಹುದು ಎಂಬ ಭಯ ಇದ್ದೇ ಇರುತ್ತದೆ. ಜನರು ತಮ್ಮ ಸಾಕುಪ್ರಾಣಿಗಳನ್ನು ಈ ರೀತಿ ಕಳೆದುಕೊಂಡ ಅನೇಕ ನಿದರ್ಶನಗಳಿವೆ ಮತ್ತು ಲಂಡನ್‌ನ ಲೀಸಾ ಗ್ರೆಗೊರಿ ಅವರಿಗೂ ಹೀಗೆ ಆಗಿದೆ.

ಇವರ ಬೆಕ್ಕು ತಲಲಾ 2017 ರಲ್ಲಿ ಉತ್ತರ ಲಂಡನ್‌ನ ಕೆಂಟಿಶ್ ಟೌನ್‌ನಲ್ಲಿರುವ ಅವರ ಮನೆಯಿಂದ ನಾಪತ್ತೆಯಾಗಿತ್ತು. ಆದರೆ ಈಗ ಆರು ವರ್ಷಗಳ ಬಳಿಕ ಬೆಕ್ಕು ಅವರಿಗೆ ಸಿಕ್ಕಿದೆ. ಇಡೀ ಕುಟುಂಬ ಸಂತೋಷದಲ್ಲಿ ಇದೆ.

ಆದರೆ ಈಗ ಈ ಬೆಕ್ಕಿಗಾಗಿ ಕುಟುಂಬ ಭಾರಿ ಬೆಲೆ ತೆರಬೇಕಾಗಿದೆ. ಅವರು ಈಗ ತಮ್ಮ ಹೊಸ ನಿವಾಸಕ್ಕೆ ಬೆಕ್ಕನ್ನು 10,500 ಮೈಲುಗಳಷ್ಟು ಸಾಗಿಸಬೇಕಿದೆ. ಅವರು ಮನೆ ಬದಲಾವಣೆ ಮಾಡಿದ್ದು, ಬೆಕ್ಕು ಹಳೆಯ ಮನೆಯ ಕಡೆಗೆ ಹೋಗಿತ್ತು. ಬಲು ಶ್ರಮದಿಂದ ಬೆಕ್ಕು ಸಿಕ್ಕಿದೆ. ಆದರೆ ಈಗ ಇದಕ್ಕಾಗಿ ಹಲವಾರು ಕಾನೂನು ತೊಡಕುಗಳು ಬರುತ್ತಿವೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈಗ ಇರುವ ನಿಯಮದ ಪ್ರಕಾರ ಹೋದರೆ ಬೆಕ್ಕನ್ನು ಆಸ್ಟ್ರೇಲಿಯಾಕ್ಕೆ ತರುವ ವಿಧಾನವು 12 ತಿಂಗಳವರೆಗೆ ತೆಗೆದುಕೊಳ್ಳಬಹುದು. ಅದಕ್ಕೆ ಸುಮಾರು 2 ಲಕ್ಷ ರೂ. ಖರ್ಚಾಗಬಹುದು ಎಂದಿದ್ದಾರೆ ಮಾಲೀಕರು. ಸದ್ಯ ಅವರು ಬೆಕ್ಕಿನ ಸಹೋದರಿಯನ್ನು ಸಾಕಿಕೊಂಡಿದ್ದಾರೆ. ಈಗ ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿ ಅವರು ಇದ್ದಾರೆ.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಉಗ್ರ ಪತಿ ಸೆರೆಗೆ ಪತ್ನಿ ಸುಳಿವು; ಇಂದೋರ್‌ ಪೊಲೀಸರ ಕಾರ್ಯಾಚರಣೆ,

Wed Mar 1 , 2023
ಇಂದೋರ್‌/ಮುಂಬೈ: ಪಾಕಿಸ್ತಾನ, ಚೀನ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ ಶಂಕಿತ ಉಗ್ರನನ್ನು ಮಧ್ಯಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ಸರ್ಫಾರಾಜ್‌ ಮೆಮನ್‌ (40) ಎಂದು ಗುರುತಿಸಲಾಗಿದೆ. ಆತನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆಗೆ ನೇರ ಲಿಂಕ್‌ ಮತ್ತು ಉಗ್ರ ಸಂಘಟನೆಗಳ ಜತೆಗೆ ಸಂಪರ್ಕವಿದೆ. ಇದೇ ವೇಳೆ, ಆತ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಚೀನ ಮೂಲದ ತನ್ನ ಪತ್ನಿಯೇ ಪೊಲೀಸರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಬಂಧನವಾಗುವಂತೆ ಮಾಡಿದ್ದಾಳೆ. ನಾವಿಬ್ಬರೂ […]

Advertisement

Wordpress Social Share Plugin powered by Ultimatelysocial