ಉಗ್ರ ಪತಿ ಸೆರೆಗೆ ಪತ್ನಿ ಸುಳಿವು; ಇಂದೋರ್‌ ಪೊಲೀಸರ ಕಾರ್ಯಾಚರಣೆ,

ಇಂದೋರ್‌/ಮುಂಬೈ: ಪಾಕಿಸ್ತಾನ, ಚೀನ ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ ಶಂಕಿತ ಉಗ್ರನನ್ನು ಮಧ್ಯಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ಸರ್ಫಾರಾಜ್‌ ಮೆಮನ್‌ (40) ಎಂದು ಗುರುತಿಸಲಾಗಿದೆ.

ಆತನಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆಗೆ ನೇರ ಲಿಂಕ್‌ ಮತ್ತು ಉಗ್ರ ಸಂಘಟನೆಗಳ ಜತೆಗೆ ಸಂಪರ್ಕವಿದೆ.

ಇದೇ ವೇಳೆ, ಆತ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಚೀನ ಮೂಲದ ತನ್ನ ಪತ್ನಿಯೇ ಪೊಲೀಸರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಬಂಧನವಾಗುವಂತೆ ಮಾಡಿದ್ದಾಳೆ. ನಾವಿಬ್ಬರೂ ವಿಚ್ಛೇದನ ಪಡೆಯುವ ಪ್ರಕ್ರಿಯೆಯಲ್ಲಿ ಇದ್ದೇವೆ. ಜತೆಗೆ ಪತ್ನಿ ಪರ ವಕೀಲನ ಜತೆಗೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಇಂಥ ಸಂಚು ರೂಪಿಸಿದ್ದಾಳೆ ಎಂದು ಅಲವತ್ತುಗೊಂಡಿದ್ದಾನೆ.

ಮುಂಬೈ ಪೊಲೀಸರು ಮತ್ತು ಎನ್‌ಐಎ ಮಧ್ಯಪ್ರದೇಶ ಪೊಲೀಸರಿಗೆ ಸರ್ಫಾರಾಜ್‌ ಮೆಮನ್‌ ಬಗ್ಗೆ ಸುಳಿವು ನೀಡಿದ್ದರು. ಅದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ, “ಇಂದೋರ್‌ನ ಚಂದನ್‌ ನಗರ್‌ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಸಫ್ìರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಈತ 2005ರಿಂದ 2018ರವರೆಗೆ ಚೀನಾ ಮತ್ತು ಹಾಂಕಾಂಗ್‌ನಲ್ಲಿ ನೆಲೆಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ತನಿಖೆಗಾಗಿ ಎನ್‌ಐಎ ಅಧಿಕಾರಿಗಳು ಈತನ ವಿಚಾರಣೆ ನಡೆಸುತ್ತಿದ್ದಾರೆ,’ ಎಂದು ತಿಳಿಸಿದ್ದಾರೆ.

“ಎಲ್ಲಾ ಕೋನಗಳಿಂದಲೂ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಎನ್‌ಐಎ ಮತ್ತು ಮುಂಬೈ ಪೊಲೀಸರು ಈತನ ಬಗ್ಗೆ ಮಾಹಿತಿ ನೀಡಿ ಅಲರ್ಟ್‌ ಮಾಡಿದ್ದರು. ಮುಂಬೈನಿಂದ ಈತ ಇಂದೋರ್‌ಗೆ ಬಂದಿದ್ದಾನೆ. ಹೆಚ್ಚಿನ ಮಾಹಿತಿಯು ತನಿಖೆ ನಂತರ ತಿಳಿಯಲಿದೆ,’ ಎಂದು ಇಂದೋರ್‌ ಡಿಸಿಪಿ ರಜತ್‌ ಸಲೆಕಾ ವಿವರಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ : ಸಾಕಪ್ಪ ಸಾಕು ಉಪ ಚುನಾವಣೆಯ ಸಹವಾಸ ಎನ್ನುತ್ತಾರೆ .

Wed Mar 1 , 2023
ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 2006ರಲ್ಲಿ ನಡೆದ ಉಪ ಚುನಾವಣೆಯನ್ನು ನೆನಪಿಸಿದರೆ ಸಾಕು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈಗಲೂ ಸುಸ್ತು ಹೊಡೆಯುತ್ತಾರೆ. ಸಾಕಪ್ಪ ಸಾಕು ಉಪ ಚುನಾವಣೆಯ ಸಹವಾಸ ಎನ್ನುತ್ತಾರೆ.ಸಿದ್ದರಾಮಯ್ಯ ಅವರು 2006ರಲ್ಲಿ ಜೆಡಿಎಸ್‌ನಿಂದ ಉಚ್ಛಾಟನೆಯಾದ ಅನಂತರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿ ಉಪ ಚುನಾವಣೆ ಎದುರಿಸಿದರು. ಆಗ ರಾಜ್ಯದಲ್ಲಿ ಜೆಡಿಎಸ್‌ನ ಎಚ್‌. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ […]

Advertisement

Wordpress Social Share Plugin powered by Ultimatelysocial