ಶಿವರಾತ್ರಿಯಂದು ಗರ್ಭಿಣಿಯರು ಉಪವಾಸ ಮಾಡುವುದು ಎಷ್ಟು ಸುರಕ್ಷಿತ ?

ಫೆಬ್ರವರಿ 18 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಈ ದಿನ ಶಿವನ ಭಕ್ತರು ಉಪವಾಸ ಮಾಡುತ್ತಾರೆ. ಗರ್ಭಿಣಿಯರು ಕೂಡ ಶಿವರಾತ್ರಿಯಂದು ಉಪವಾಸ ವೃತ ಕೈಗೊಳ್ಳುತ್ತಾರೆ.

ಉಪವಾಸವು ಆರೋಗ್ಯಕ್ಕೆ ಪ್ರಯೋಜನಕಾರಿಯಾದರೂ, ಗರ್ಭಾವಸ್ಥೆಯಲ್ಲಿ ಉಪವಾಸ ಮಾಡುವುದು ಅಪಾಯಕಾರಿಯಾಗಿ ಪರಿಣಮಿಸಬಹುದು.

ಗರ್ಭಿಣಿಗೆ ಮತ್ತು ಹೊಟ್ಟೆಯೊಳಗಿರುವ ಮಹಿಳೆಗೆ ಇದರಿಂದ ತೊಂದರೆಯಾಗಬಹುದು. ಹಾಗಾಗಿ ಉಪವಾಸ ಮಾಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯಬೇಕು. ಜೊತೆಗೆ ಗರ್ಭಾವಸ್ಥೆಯಲ್ಲಿ ಉಪವಾಸ ಮಾಡುವಾಗ ಕೆಲವೊಂದು ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕು.

ಗರ್ಭಿಣಿಯರಿಗೆ ಉಪವಾಸ ಎಷ್ಟು ಸೂಕ್ತ ?

ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ಉಪವಾಸವನ್ನು ಮಾಡಬೇಡಿ ಎಂದು ಹೆಚ್ಚಿನ ವೈದ್ಯರು ಸಲಹೆ ನೀಡುತ್ತಾರೆ. ಅದರಲ್ಲೂ ಗರ್ಭಾವಸ್ಥೆಯ ಆರಂಭಿಕ 3 ತಿಂಗಳು ವಾಂತಿ, ಹೆದರಿಕೆ, ವಾಕರಿಕೆ ಮುಂತಾದ ಸಮಸ್ಯೆಗಳಿರುತ್ತವೆ. ಆ ಸಮಯದಲ್ಲಿ ಉಪವಾಸ ಮಾಡಿದರೆ ತಲೆನೋವು ಮತ್ತು ದೌರ್ಬಲ್ಯ ಕಾಡುತ್ತದೆ. ಇದಲ್ಲದೆ ಮೂರನೇ ತ್ರೈಮಾಸಿಕದಲ್ಲಿ ಕೂಡ ಉಪವಾಸವನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ನಿಮಗೆ ರಕ್ತಹೀನತೆ ಅಥವಾ ಮಧುಮೇಹದಂತಹ ಸಮಸ್ಯೆ ಇದ್ದರೆ ಉಪವಾಸ ಮಾಡುವುದರಿಂದ ಮತ್ತಷ್ಟು ತೊಂದರೆಯಾಗುತ್ತದೆ.

ಗರ್ಭಿಣಿಯರು ಉಪವಾಸ ಮಾಡುವಾಗ ನೆನಪಿನಲ್ಲಿಡಬೇಕಾದ ವಿಷಯಗಳು

ಯಾವುದೇ ರೀತಿಯ ಉಪವಾಸವನ್ನು ಆಚರಿಸುತ್ತಿದ್ದರೂ ನೀರು ಕುಡಿಯಲೇಬೇಕು. ಪ್ರತಿ 2 ಗಂಟೆಗಳಿಗೊಮ್ಮೆ ಲಘು ಆಹಾರವನ್ನು ಸೇವಿಸಿ. ನೀರು ಕುಡಿಯುತ್ತಿರಿ. ಎಳನೀರು, ಜ್ಯೂಸ್‌ ಮುಂತಾದ ದ್ರವ ಪದಾರ್ಥಗಳನ್ನು ಹೆಚ್ಚು ಹೆಚ್ಚು ತೆಗೆದುಕೊಳ್ಳಿ. ಇದರಿಂದ ದೇಹವು ಪೋಷಕಾಂಶಗಳನ್ನು ಪಡೆಯುತ್ತದೆ. ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ, ಸಾಕಷ್ಟು ನೀರು ಕುಡಿಯಿರಿ, ಇದರಿಂದ ನಿರ್ಜಲೀಕರಣದ ಸಮಸ್ಯೆ ಇರುವುದಿಲ್ಲ. ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಹೆಚ್ಚು ಪೌಷ್ಠಿಕಾಂಶವಿರುವ ಪದಾರ್ಥಗಳನ್ನು ತಿನ್ನುವುದು ಸೂಕ್ತ. ಚಹಾ ಮತ್ತು ಕಾಫಿಯನ್ನು ಹೆಚ್ಚಾಗಿ ಸೇವಿಸಬೇಡಿ.

ಕನಿಷ್ಠ 2-3 ಹಣ್ಣುಗಳನ್ನಾದರೂ ತಿನ್ನಿರಿ. ಅದು ನಿಮಗೆ ಶಕ್ತಿಯನ್ನು ನೀಡುತ್ತದೆ. ಕಲ್ಲು ಉಪ್ಪನ್ನು ಸೇವಿಸಿದರೆ ದೌರ್ಬಲ್ಯವನ್ನು ಹೋಗಲಾಡಿಸುತ್ತದೆ. ಉಪವಾಸದ ಸಮಯದಲ್ಲಿ ನಿಮ್ಮ ಮಗುವಿನ ಚಲನವಲನದ ಬಗ್ಗೆ ಕಾಳಜಿ ವಹಿಸಿ. ಯಾವುದೇ ಸಮಸ್ಯೆ ಕಂಡುಬಂದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ರಾಗಿಯಂತಹ ಧಾನ್ಯಗಳಿಂದ ಮಾಡಿದ ತಿನಿಸುಗಳನ್ನು ಸೇವಿಸಿ. ಇದು ದೇಹಕ್ಕೆ ಶಕ್ತಿ ಕೊಡುತ್ತದೆ. ಹಣ್ಣು, ಹಾಲು, ಡ್ರೈಫ್ರೂಟ್ಸ್‌, ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲದೊಂದಿಗೆ ದಿನವನ್ನು ಪ್ರಾರಂಭಿಸಿ.

ಬೆಳಗಿನ ಉಪಾಹಾರಕ್ಕಾಗಿ ಮಿಲ್ಕ್‌ಶೇಕ್ ಅಥವಾ ಮೊಸರಿನಿಂದ ಮಾಡಿದ ಪದಾರ್ಥವನ್ನು ತಿನ್ನಬಹುದು. ಹೆಚ್ಚು ಸಕ್ಕರೆ ಅಥವಾ ಉಪ್ಪನ್ನು ಸೇವಿಸಬೇಡಿ, ಏಕೆಂದರೆ ಅದು ದೇಹದಿಂದ ನೀರನ್ನು ತೆಗೆದುಹಾಕುತ್ತದೆ. ಇದರಿಂದ ಸಮಸ್ಯೆಯಾಗಬಹುದು. ಅಜೀರ್ಣ, ಮಲಬದ್ಧತೆ, ವಾಕರಿಕೆ, ವಾಂತಿ, ಆಯಾಸ, ತಲೆನೋವು, ತಲೆತಿರುಗುವಿಕೆ, ರಕ್ತದೊತ್ತಡ ಮತ್ತು ಹೃದಯ ಬಡಿತ ಕಡಿಮೆಯಾಗುತ್ತಿದ್ದರೆ ಉಪವಾಸವನ್ನು ಮುಂದುವರಿಸಬೇಡಿ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಎಚ್. ದ್ವಾರಕಾನಾಥ್ ಕಬಾಡಿ ಕನ್ನಡದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಪಾರ ಸಾಧನೆ .

Fri Feb 17 , 2023
ಡಾ. ಎಚ್. ದ್ವಾರಕಾನಾಥ್ ಕಬಾಡಿ ಕನ್ನಡದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.ದ್ವಾರಕಾನಾಥ್ ಕಬಾಡಿ 1936ರ ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನಲ್ಲೇ ಬಿ.ಕಾಂ., ಬಿ.ಎಲ್. ಪದವಿ ಪಡೆದ ನಂತರ ಲೆಕ್ಕ ಪರಿಶೋಧಕರಾಗಿ ವೃತ್ತಿ ಆರಂಭಿಸಿದರು.ದ್ವಾರಕಾನಾಥ್ ಸಾಹಿತ್ಯದ ಗೀಳು ಹತ್ತಿಸಿಕೊಂಡವರು. ವಿದ್ಯಾರ್ಥಿ ದೆಸೆಯಿಂದಲೇ ಕೀಟ್ಸ್, ಎಲಿಯೆಟ್, ಷೆಲ್ಲಿ, ಷೇಕ್ಸ್‌ಪಿಯರ್ ಮುಂತಾದ ಪಾಶ್ಚಿಮಾತ್ಯ ಕವಿಗಳು ಮತ್ತು ಕನ್ನಡ ಕವಿಗಳ ಅಧ್ಯಯನ ಮಾಡಿದರು. ಕಾಲೇಜು ಮ್ಯಾಗಜಿನ್‌ನಲ್ಲಿ ‘ಗೌರಿಶಂಕರ’ ಎಂಬ […]

Advertisement

Wordpress Social Share Plugin powered by Ultimatelysocial