Aditya L1 Mission: 3ನೇ ಬಾರಿ ಕಕ್ಷೆ ಬದಲಿಸಿದ ಆದಿತ್ಯ ಎಲ್‌1 ಮಿಷನ್;‌ ಎಲ್‌ ಪಾಯಿಂಟ್‌ಗೆ ತೆರಳಲು ಎರಡೇ ಹೆಜ್ಜೆ ಬಾಕಿ

Aditya-L1 healthy, first Earth-bound manoeuvre puts spacecraft in 245km x  22,459km orbit - Times of India

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವದ ಸೂರ್ಯಯಾನ ಆದಿತ್ಯ ಎಲ್‌ 1 ಮಿಷನ್‌ ಮೂರನೇ ಕಕ್ಷೆಯ (Aditya L1 Mission) ಬದಲಾವಣೆಯನ್ನೂ ಪೂರ್ಣಗೊಳಿಸಿದೆ. ಸೆಪ್ಟೆಂಬರ್‌ 10ರ ಬೆಳಗಿನ ಜಾವ ಆದಿತ್ಯ ಎಲ್‌ 1 ಮಿಷನ್‌ ಮೂರನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಕುರಿತು ಇಸ್ರೋ ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದೆ.

 

‘ಸೂರ್ಯನ ಲ್ಯಾಗ್ರೇಂಜ್‌ ಪಾಯಿಂಟ್‌ನತ್ತ ಸಾಗುತ್ತಿರುವ ಆದಿತ್ಯ ಎಲ್‌ 1 ಮಿಷನ್‌ ಮೂರನೇ ಬಾರಿ ಕಕ್ಷೆ ಬದಲಾವಣೆ ಮಾಡಿದೆ. ಬೆಂಗಳೂರಿನಲ್ಲಿರುವ ಐಎಸ್‌ಟಿಆರ್‌ಎಸಿ ಸಂಸ್ಥೆ ಮೂಲಕ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ನೂತನ ಕಕ್ಷೆಯಲ್ಲಿ 296 ಕಿ.ಮೀ x 71,767 ಕಿ.ಮೀ ವೇಗದಲ್ಲಿ ಮಿಷನ್‌ ಚಲಿಸುತ್ತಿದೆ. ನಾಲ್ಕನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಸೆಪ್ಟೆಂಬರ್‌ 15ರಂದು ಮಧ್ಯಾಹ್ನ 2 ಗಂಟೆಗೆ ಕೈಗೊಳ್ಳಲಾಗುತ್ತದೆ’ ಎಂದು ಇಸ್ರೋ ಮಾಹಿತಿ ನೀಡಿದೆ.

ಸೆಪ್ಟೆಂಬರ್‌ 2ರಂದು ಆದಿತ್ಯ ಎಲ್‌ 1 ಮಿಷನ್‌ ಉಡಾವಣೆಯಾಗಿದ್ದು, ಸೆಪ್ಟೆಂಬರ್‌ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರೈಸಿತು. ಸೆಪ್ಟೆಂಬರ್‌ 5ರಂದು ಎರಡನೇ ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡಿತು. ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿಕೊಂಡ ನಂತರ ಅಧ್ಯಯನ ನಡೆಸಲು ಉದ್ದೇಶಿಸಿರುವ ಲ್ಯಾಂಗ್ರೇಜ್‌ ಪಾಯಿಂಟ್‌ನತ್ತ (L1 Point) ಆದಿತ್ಯ ಎಲ್‌ 1 ಮಿಷನ್‌ ಸಾಗಲಿದೆ. ಲ್ಯಾಗ್ರೇಂಜ್‌ ಪಾಯಿಂಟ್‌ ತಲುಪಲು ಮಿಷನ್‌ಗೆ 125 ದಿನ ಬೇಕು.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಮಿಷನ್‌ ಹೊತ್ತುಕೊಂಡು ಪಿಎಸ್‌ಎಲ್‌ವಿ-ಸಿ 57 (PSLV-C57 ) ರಾಕೆಟ್‌ ಸೆಪ್ಟೆಂಬರ್‌ 2ರಂದು ನಭಕ್ಕೆ ಹಾರಿದೆ. ನಭಕ್ಕೆ ನೆಗೆದ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಿಂದ ಆದಿತ್ಯ ಎಲ್‌ 1 ಮಿಷನ್‌ ಬೇರ್ಪಟ್ಟಿದೆ. ಸೂರ್ಯನ ಮೇಲ್ಮೈನಲ್ಲಿ ಮಾತ್ರ ಆದಿತ್ಯ ಎಲ್‌ 1 ಮಿಷನ್‌ ಅಧ್ಯಯನ ನಡೆಸಲಿದೆ. ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿ 15 ಲಕ್ಷ ಕಿಲೋಮೀಟರ್‌ ಸಂಚರಿಸಿ ಅಧ್ಯಯನ ನಡೆಸಲಿದೆ. ಭೂಮಿಯಿಂದ 15 ಲಕ್ಷ ಕಿಲೊಮೀಟರ್‌ ಅಂದರೆ, ಭೂಮಿಯಿಂದ ಸೂರ್ಯನಿಗಿರುವ ದೂರದಲ್ಲಿ ಶೇ.1ರಷ್ಟು ಮಾತ್ರ ಕ್ರಮಿಸಿದಂತೆ.

The post Aditya L1 Mission: 3ನೇ ಬಾರಿ ಕಕ್ಷೆ ಬದಲಿಸಿದ ಆದಿತ್ಯ ಎಲ್‌1 ಮಿಷನ್;‌ ಎಲ್‌ ಪಾಯಿಂಟ್‌ಗೆ ತೆರಳಲು ಎರಡೇ ಹೆಜ್ಜೆ ಬಾಕಿ..

Please follow and like us:

tmadmin

Leave a Reply

Your email address will not be published. Required fields are marked *

Next Post

ಪೆಸಿಫಿಕ್ ಮಹಾಸಾಗರದ ಸಮುದ್ರದಾಳದಲ್ಲಿ ನಿಗೂಢ 'ಚಿನ್ನದ ಮೊಟ್ಟೆ' ಪತ್ತೆ

Sun Sep 10 , 2023
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಅಲಾಸ್ಕಾ ಕರಾವಳಿಯ ಪೆಸಿಫಿಕ್ ಮಹಾಸಾಗರದ ತಳದಲ್ಲಿ ಮೊಟ್ಟೆಯನ್ನು ಹೋಲುವ ನಿಗೂಢ ‘ಚಿನ್ನದ ಮೊಟ್ಟೆ’ ಕಂಡುಬಂದಿದೆ. ಇದು ವಿಜ್ಞಾನಿಗಳನ್ನು ಆಶ್ಚರ್ಯಗೊಳಿಸಿದೆ. ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತದ ಸಂಶೋಧನಾ ತಂಡವು ಆಗಸ್ಟ್ 30 ರಂದು ಮೊದಲ ಬಾರಿಗೆ ಈ ವಿಚಿತ್ರವಾದ ಚಿನ್ನದ ವಸ್ತುವನ್ನು ಕಂಡುಹಿಡಿದಿದೆ.   ಸೀಸ್ಕೇಪ್ ಅಲಾಸ್ಕಾ 5 ದಂಡಯಾತ್ರೆಯ ಸಮಯದಲ್ಲಿ ಅಳಿವಿನಂಚಿನಲ್ಲಿರುವ ಜ್ವಾಲಾಮುಖಿಯನ್ನು ಎರಡು ಮೈಲುಗಳಷ್ಟು ಆಳದಲ್ಲಿ ಅನ್ವೇಷಿಸುವಾಗ ಪರಿಶೋಧಕರ ತಂಡವು ಹೊಳೆಯುವ […]

Advertisement

Wordpress Social Share Plugin powered by Ultimatelysocial