ಓಮೈಕ್ರಾನ್‌ ವಿರುದ್ಧ ಬೂಸ್ಟರ್‌ ಸಮರ್ಥವೇ? ಹೆಚ್ಚುವರಿ ಲಸಿಕೆ ಬೇಕೆ?

Explainer| ಓಮೈಕ್ರಾನ್‌ ವಿರುದ್ಧ ಬೂಸ್ಟರ್‌ ಸಮರ್ಥವೇ? ಹೆಚ್ಚುವರಿ ಲಸಿಕೆ ಬೇಕೆ?

ಕೊರೊನಾ ವೈರಸ್‌ನ ರೂಪಾಂತರ ತಳಿಯಾದ ಓಮೈಕ್ರಾನ್‌ಗೆ ಸಂಬಂಧಿಸಿದ ಸೋಂಕು ಪ್ರಕರಣಗಳು ಜಗತ್ತಿನಾದ್ಯಂತ ದಿನೇ ದಿನೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಮಧ್ಯೆಯೇ ಕೋವಿಡ್‌ ಲಸಿಕೆಗಳ ಬೂಸ್ಟರ್‌ ಡೋಸ್‌ಗಳ ಅಗತ್ಯತೆ ಚರ್ಚೆಯು ಮುನ್ನೆಲೆಗೆ ಬಂದಿದೆ.

ಅಮೆರಿಕ, ಜರ್ಮನಿ, ಫ್ರಾನ್ಸ್‌, ಇಸ್ರೇಲ್‌, ಥೈಲೆಂಡ್‌ ಸೇರಿದಂತೆ 36 ದೇಶಗಳು ಬೂಸ್ಟರ್‌ ಲಸಿಕೆಗಳನ್ನು ಅಧಿಕೃತವಾಗಿ ನೀಡುತ್ತಿವೆ.

ಎರಡೂ ಡೋಸ್‌ ಪಡೆದವರಿಗೂ ಓಮೈಕ್ರಾನ್‌ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಬೂಸ್ಟರ್‌ನ ಚರ್ಚೆ ಆರಂಭವಾಗಿದೆ. ಆದರೆ, ಸರ್ಕಾರ ಅದಕ್ಕೆ ಇನ್ನೂ ಸಮ್ಮತಿ ನೀಡಿಲ್ಲ.

ಹಾಗಾದರೆ, ಬೂಸ್ಟರ್‌ ಡೋಸ್‌ ಎಂದರೇನು? ಯಾವಾಗ ನೀಡಲಾಗುತ್ತದೆ? ಅದು ಅಗತ್ಯವೇ? ಬೂಸ್ಟರ್‌ ಲಸಿಕೆಗಳು ಓಮೈಕ್ರಾನ್‌ ಹರಡುವಿಕೆಯನ್ನು ತಡೆಯಬಲ್ಲವೇ? ಈ ಬಗ್ಗೆ ವಿವರಣೆ ಇಲ್ಲಿದೆ.

ಬೂಸ್ಟರ್‌ ಡೋಸ್‌ ಅಂದರೆ ಏನು?

ಸದ್ಯ ಬಳಕೆಯಲ್ಲಿರುವ ಹೆಚ್ಚಿನ ಕೋವಿಡ್ ಲಸಿಕೆಗಳನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತಿದೆ. ಕೆಲವನ್ನು ಒಂದೇ ಡೋಸ್‌ನಂತೆ ನೀಡಲಾಗುತ್ತದೆ. ಮೂಲ ಡೋಸ್‌ಗಳು (ಎರಡು ಡೋಸ್‌ಗಳು) ಒದಗಿಸಿದ ರಕ್ಷಣೆಯು ಕಾಲಾನಂತರದಲ್ಲಿ ಕಡಿಮೆಯಾಗಲು ಪ್ರಾರಂಭಿಸಿದ ನಂತರ ನೀಡಲಾಗುವ ಹೆಚ್ಚುವರಿ ಲಸಿಕೆಯನ್ನೇ ಬೂಸ್ಟರ್‌ ಡೋಸ್‌ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಜನರು ತಮ್ಮ ಪ್ರತಿರಕ್ಷೆಯ ಮಟ್ಟವನ್ನು ಹೆಚ್ಚು ಕಾಲ ಕಾಪಾಡಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಾ ಎಳನೀರು...?

Tue Dec 21 , 2021
ಎಳನೀರು ಕುಡಿಯುವುದು ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ಮಳೆಗಾಲ, ಚಳಿಗಾಲದಲ್ಲಿ ಕುಡಿಯದಿರಿ. ಇದರಿಂದ ನೆಗಡಿ, ಜ್ವರ ಬರುವ ಸಾಧ್ಯತೆಗಳೇ ಹೆಚ್ಚು. ಗರ್ಭಾವಸ್ಥೆಯಲ್ಲಿ ಎಳೆನೀರನ್ನು ಕುಡಿಯುವುದರಿಂದ ಪೋಷಕಾಂಶಗಳು, ಮೆಗ್ನಿಶಿಯಮ್, ಕ್ಯಾಲ್ಸಿಯಂ, ರಿಪೋಬ್ಲ್ಯಾವಿನ್ ಮತ್ತು ವಿಟಮಿನ್ ಸಿ ಹೇರಳವಾಗಿ ಸಿಗುತ್ತದೆ. ಎಳನೀರಲ್ಲಿ ಪ್ರೊಟೀನ್ ಮತ್ತು ಸೋಡಿಯಮ್ ಅಂಶ ಹೆಚ್ಚಾಗಿ ಇರುವುದರಿಂದ ಇದನ್ನು ಗರ್ಭಿಣಿಯರು ಕುಡಿಯುವುದರಿಂದ ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಇದರಲ್ಲಿ ಹೆಚ್ಚಿನ ಒಮೆಗಾ3, ಕೊಬ್ಬಿನ ಆಮ್ಲಗಳು ಕಂಡು […]

Advertisement

Wordpress Social Share Plugin powered by Ultimatelysocial