900 ಕೋಟಿ ರೂ. ತಲುಪಿದ ‘ಪಠಾಣ್​’ ಕಲೆಕ್ಷನ್​

‘ಪಠಾಣ್​’ ಚಿತ್ರ ತೆರೆಗೆ ಬಂದಿದ್ದು ಜನವರಿ 25ರಂದು. ಈ ಸಿನಿಮಾ ಇಲ್ಲಿವರೆಗೆ ಭಾರತದ ಬಾಕ್ಸ್ ಆಫೀಸ್​ನಲ್ಲಿ 464 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಬಾಚಿಕೊಂಡಿದೆ.’ಪಠಾಣ್​’ ಸಿನಿಮಾ ತೆರೆಗೆ ಬಂದು ಹಲವು ವಾರಗಳು ಪೂರ್ಣಗೊಳ್ಳುತ್ತಾ ಬಂದಿದೆ.

ಆದಾಗ್ಯೂ ಸಿನಿಮಾದ ಗಳಿಕೆ ನಿಂತಿಲ್ಲ. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಶುಕ್ರವಾರದ (ಫೆಬ್ರವರಿ 10) ಗಳಿಕೆಯೂ ಸೇರಿದರೆ ಈ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ 900 ಕೋಟಿ ರೂಪಾಯಿ ಆಗಿದೆ.  ‘ಕೆಜಿಎಫ್ 2’ ಚಿತ್ರದ ಒಟ್ಟಾರೆ ಗಳಿಕೆಯನ್ನು ಹಿಂದಿಕ್ಕಲು  ‘ಪಠಾಣ್​’ಗೆ ಸಾಧ್ಯವಿಲ್ಲ ಎಂದು ಬಾಕ್ಸ್ ಆಫೀಸ್​ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

‘ಪಠಾಣ್​’ ಚಿತ್ರ ತೆರೆಗೆ ಬಂದಿದ್ದು ಜನವರಿ 25ರಂದು. ಈ ಸಿನಿಮಾ ಇಲ್ಲಿವರೆಗೆ ಭಾರತದ ಬಾಕ್ಸ್ ಆಫೀಸ್​ನಲ್ಲಿ 464 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಬಾಚಿಕೊಂಡಿದೆ. ಶುಕ್ರವಾರ ಈ ಸಿನಿಮಾ ಭಾರತದಲ್ಲಿ 5 ಕೋಟಿ ರೂಪಾಯಿ ಅಷ್ಟೇ ಗಳಿಕೆ ಮಾಡಿದೆ. ಇಂದು (ಫೆಬ್ರವರಿ 11) ಹಾಗೂ ನಾಳೆ (ಫೆ.12) ಈ ಸಿನಿಮಾ ಒಳ್ಳೆಯ ಗಳಿಕೆ ಮಾಡಬಹುದು. ಸಿನಿಮಾ ರಿಲೀಸ್ ಆಗಿ ಬಹಳ ಸಮಯ ಕಳೆದಿರುವುದರಿಂದ ಮುಂದಿನ ವಾರದಿಂದ ಚಿತ್ರದ ಕಲೆಕ್ಷನ್ ತಗ್ಗಲಿದೆ.

ಸಿನಿಮಾ ಸದ್ಯ 900 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1300 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದನ್ನು ಹಿಂದಿಕ್ಕಲು ‘ಪಠಾಣ್​’ ಚಿತ್ರಕ್ಕೆ 400 ಕೋಟಿ ರೂಪಾಯಿ ಅವಶ್ಯಕತೆ ಇದೆ. ಇಷ್ಟೊಂದು ಗಳಿಕೆ ಮಾಡಲು ‘ಪಠಾಣ್​’ ಬಳಿ ಅಸಾಧ್ಯ ಎನ್ನುತ್ತಾರೆ ಬಾಕ್ಸ್ ಆಫೀಸ್ ಪಂಡಿತರು.

ಭಾರತೀಯ ಬಾಕ್ಸ್ ಆಫೀಸ್​ನ ಹಿಂದಿ ವರ್ಷನ್​ನಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ‘ಪಠಾಣ್​’ ಮುರಿದಿದೆ. ‘ಕೆಜಿಎಫ್ 2’ ಹಿಂದಿ ಚಿತ್ರರಂಗದಿಂದ 433 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಚಿತ್ರವನ್ನು ಹಿಂದಿಕ್ಕಿ ‘ಪಠಾಣ್​’ ಎರಡನೇ ಸ್ಥಾನಕ್ಕೆ ಏರಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಸಿನಿಮಾ ಇದೆ. ಈ ಚಿತ್ರ 510 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಚಿತ್ರದ ದಾಖಲೆ ಮುರಿಯೋಕೆ ‘ಪಠಾಣ್​’ಗೆ ಅಸಾಧ್ಯ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಾಪ್ ಲೆಸ್‌ ನಲ್ಲಿ ಬಾಯ್‌ ಫ್ರೆಂಡ್‌ನನ್ನು ಅಪ್ಪಿಕೊಂಡು ಬರ್ತ್‌ ಡೇ ವಿಶ್‌ ಮಾಡಿದ ನಟಿ ಪಾಯಲ್

Sat Feb 11 , 2023
ಹೈದರಾಬಾದ್:ಸೆಲೆಬ್ರಿಟಿಗಳು ಬೋಲ್ಡ್‌ ಲುಕ್‌ ವುಳ್ಳ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ನಟಿಯೊಬ್ಬರು ಹಾಟ್‌ ಲುಕ್‌ ನ ಪೋಟೋ ಹಂಚಿಕೊಂಡು ಬಾಯ್‌ ಫ್ರೆಂಡ್‌ ಗೆ ಬರ್ತ್‌ ಡೇ ವಿಶ್‌ ಮಾಡಿಕೊಂಡಿದ್ದು ವೈರಲ್‌ ಆಗಿದೆ. ʼಆರ್‌ ಎಕ್ಸ್‌ 100ʼ ಬೆಡಗಿ ಪಾಯಲ್ ರಜಪೂತ್ ತಮ್ಮ ಬಾಯ್‌ ಫ್ರೆಂಡ್‌ ಸೌರಭ್ ಧಿಂಗ್ರಾ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಬರೀ ಶುಭಕೋರಿದ್ದರೆ ವೈರಲ್‌ ಆಗುತ್ತಿರಲಿಲ್ಲ. ಶರ್ಟ್‌ ಬಿಚ್ಚಿ ಅಪ್ಪಿಕೊಂಡು ಬಾಯ್‌ ಫ್ರೆಂಡ್‌ ಬರ್ತ್‌ ಡೇಗೆ […]

Advertisement

Wordpress Social Share Plugin powered by Ultimatelysocial