ಹಣ ಎಣಿಸಲು ಬಾರದ ಅನಕ್ಷರಸ್ಥನ ಜೊತೆ ಮದುವೆ ಮುರಿದುಕೊಂಡ ವಧು.

ಖ್ನೌ ,ಜ.22- ಅನಕ್ಷರಸ್ಥ ವರನಿಗೆ ಹಣ ಎಣಿಸಲು ಬಾರದಿದ್ದಾಗ ಕೋಪಗೊಂಡ ವಧು ವಿವಾಹವನ್ನೇ ರದ್ದು ಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‍ನಲ್ಲಿ ನಡೆದಿದೆ.

ಫರೂಕಾಬಾದ್ ನಗರದ ನಿವಾಸಿಯಾದ ವಧು ಮೈನ್‍ಪುರಿಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು ಮದುವೆಗೆ ಸಕಲ ಸಿದ್ಧತೆಯೂ ಆಗಿತ್ತು.

ಆದರೆ ವರ ಅನಕ್ಷರಸ್ಥ ಎಂದು ವಧುವಿನ ಕುಟುಂಬಕ್ಕೆ ಗೊತ್ತಿರಲಿಲ್ಲ.

ಆದರೆ ನಿನ್ನೆ ವರ ಮೆರವಣಿಗೆ ಬಂದಾಗ ದಾರ್ಮಿಕ ಆಚರಣೆ ಪ್ರಾರಂಭವಾಗಿದ್ದವು. ರಾತ್ರಿ 1 ಗಂಟೆಗೆ ಮದುವೆಗೆ ತಯಾರಿ ಶುರುವಾಯಿತು. ಅಷ್ಟರಲ್ಲಿ ಯಾರೋ ವಧುವಿನ ಅಣ್ಣನ ಬಳಿ ಹೋಗಿ ವರ ಅವಿದ್ಯಾವಂತ, ಅನಕ್ಷರಸ್ಥ ಎಂದು ಹೇಳಿದ್ದಾನೆ. ಈ ವೇಳೆ ವರನಿಗೆ 2,100 ರೂ. ನೀಡಿ ಎಣಿಸುವಂತೆ ವಧುವಿನ ಸಹೋರ ಹೇಳಿದ್ದಾನೆ. ಆದರೆ ಆತನಿಗೆ ಆ ಹಣ ಎಣಿಸಲು ಸಾಧ್ಯವಾಗಿಲ್ಲ.

ತಡ ಮಾಡದೆ ಮುಂಜಾನೆ ಹೆಬ್ಬೆಟ್ ವ್ಯಕ್ತಿಯನ್ನು ಮದುವೆಯಾಗುವುದಿಲ್ಲವೆಂದು ವಧು ಸ್ಪಷ್ಟವಾಗಿ ಹೇಳಿದ್ದಾಳೆ. ವಧುವಿನ ಕಡೆಯವರು ವರನಿಗೆ ಎಣಿಸಲು 2,100 ರೂ. ಕೊಟ್ಟಾಗ ಆತ ತಡಬಡಾಯಿಸಿದಾನೆ.

ಕೋಪಗೊಂಡ ವಧು ಮದುವೆಯನ್ನೇ ರದ್ದು ಮಾಡಿ ಇದಲ್ಲದೆ ವರನ ಸಮೇತ ಮತ್ತೆ ಮದುವೆ ಮೆರವಣಿಗೆಯನ್ನೇ ವಾಪಸ್ ಕಳುಹಿಸಿದ್ದಾಳೆ. ವರನ ಕಡೆಯವರು ಅನಕ್ಷರಸ್ಥ ಎಂಬುದನ್ನು ಮುಚ್ಚಿಟ್ಟಿದರು ಸುಳ್ಳು ಹೇಳಿದ್ದರು ಆದರೆ ಇದೇ ಸುಳ್ಳು ನಂತರ ದುಬಾರಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಪತ್ ನಾಡು ಕಂಡ ಮಹಾನ್ ಹವ್ಯಾಸಿ ರಂಗಭೂಮಿ ಕಲಾವಿದ.

Sun Jan 22 , 2023
ಸಂಪತ್ 1904ರ ವರ್ಷದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಎಂ.ಎಸ್. ಚೆಲುವೈಯ್ಯಂಗಾರ್. ಗೆಳೆಯರ ಗುಂಪಿನಲ್ಲಿ ಸಂಪತ್ ಎಂದೇ ಹೆಸರು ಪಡೆದಿದ್ದರು.ಹವ್ಯಾಸಿ ರಂಗಭೂಮಿಯ ಕೊಡುಗೆ ಎಂದೇ ಕರೆಸಿ ಕೊಂಡಿದ್ದ ಸಂಪತ್ ಇಂಗ್ಲೀಷ್ ನಾಟಕಗಳನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ತಂದ ಹೆಗ್ಗಳಿಕೆಯನ್ನು ಹೊಂದಿದ್ದರು. ಚೆಲುವೈಯ್ಯಂಗಾರ್ ಅವರನ್ನು ಪ್ರಖ್ಯಾತ ಕಲಾವಿದ ಎಚ್. ಜಿ. ಸೋಮಶೇಖರ ರಾವ್ ತಮ್ಮ ಅಭಿನಯ ಕಲೆಯ ಗುರುವೆಂದೇ ನೆನೆಯುತ್ತಿದ್ದರು. “ಸಂಪತ್ ಅವರ ಒಂದೊಂದು ದಿನದ ತಾಲೀಮು ಕೂಡ ಅಭಿನಯದ ಬಗ್ಗೆ […]

Advertisement

Wordpress Social Share Plugin powered by Ultimatelysocial