MP Election 2023: ಮಧ್ಯಪ್ರದೇಶದಲ್ಲಿ ಸಿಲಿಂಡರ್ ಬೆಲೆ 450 ರೂ.! ಎಲೆಕ್ಷನ್ ಗೆಲ್ಲಲು ಉಚಿತ ಕೊಡುಗೆ

ನವದೆಹಲಿ: ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಮಧ್ಯ ಪ್ರದೇಶದಲ್ಲಿ (MP Election 2023) ಮತದಾರರನ್ನು ಓಲೈಸುವ ಕಸರತ್ತು ಜೋರಾಗಿ ನಡೆಯುತ್ತಿದೆ. ಆಡಳಿತ ಪಕ್ಷವಾಗಿರುವ ಬಿಜೆಪಿ (BJP) ಮತ್ತೆ ಅಧಿಕಾರಕ್ಕೇರುವ ತಂತ್ರ ಹೆಣೆಯುತ್ತಿದ್ದು, ಅಡುಗೆ ಅನಿಲ ಸಿಲಿಂಡರ್ (Gas Cylinder) ಬೆಲೆಯನ್ನು ಕನಿಷ್ಠ ಮಟ್ಟಕ್ಕೆ (Price Cut) ಇಳಿಕೆ ಮಾಡಿದೆ.

ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (CM Shivraj Singh Chouhan) ಅವರು, ಮಧ್ಯ ಪ್ರದೇಶದಲ್ಲಿ 450 ರೂ.ಗೆ ಸಿಲಿಂಡರ್ ನೀಡುವುದಾಗಿ ಹೇಳಿದ್ದಾರೆ. ಬಹುಶಃ ಇಡೀ ದೇಶದಲ್ಲಿ ಇಷ್ಟು ಕನಿಷ್ಠ ಬೆಲೆಗೆ ಮಧ್ಯ ಪ್ರದೇಶದಲ್ಲಿ ಮಾತ್ರ ಕಡಿಮೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆಯಲ್ಲಿ 200 ರೂ. ಕಡಿತ ಮಾಡಿತ್ತು. ರಾಜಸ್ಥಾನದಂತಹ ಕೆಲವು ಕಾಂಗ್ರೆಸ್ (Congress Party) ಆಡಳಿತದ ರಾಜ್ಯಗಳು ಈ ಸಿಲಿಂಡರ್‌ಗಳನ್ನು 500 ರೂ.ಗೆ ನೀಡುತ್ತಿದ್ದು, ಉಳಿದ ವೆಚ್ಚವನ್ನು ಭರಿಸುತ್ತಿವೆ.

ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಭರವಸೆ ನೀಡಿದೆ. ಆದಾಗ್ಯೂ, ಶಿವರಾಜ್ ಸರ್ಕಾರವು ಈಗ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 450 ರೂ.ಗೆ ಇಳಿಸುವುದಾಗಿ ಘೋಷಿಸುವ ಮೂಲಕ ಪ್ರತಿಪಕ್ಷಗಳನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಮಾಡಿದೆ. ಸೆಪ್ಟೆಂಬರ್‌ನಿಂದ ಭಾರತೀಯ ಜನತಾ ಪಕ್ಷವು ರಾಜ್ಯದ 1.3 ಕೋಟಿ ಮಹಿಳೆಯರಿಗೆ 1250 ರೂ. ಮಾಸಿಕ ಪಾವತಿಸುತ್ತಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ, ಗ್ವಾಲಿಯರ್-ಚಂಬಲ್ ಪ್ರದೇಶದ ಎಂಟು ಜಿಲ್ಲೆಗಳಲ್ಲಿ ಬಿಜೆಪಿ ದೊಡ್ಡ ಸೋಲನ್ನು ಅನುಭವಿಸಿತು. ಇಲ್ಲಿರುವ 34 ಸ್ಥಾನಗಳ ಪೈಕಿ ಪಕ್ಷ ಏಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಆದರೆ ಈ ಬಾರಿ ಹೊಸ ರಾಜಕೀಯ ಸಮೀಕರಣಗಳಿಂದ ಪರಿಸ್ಥಿತಿ ಬದಲಾಗಿದೆ. 2018ರಲ್ಲಿ, ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನಲ್ಲಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಆಗ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಿಎಂ ಆಗಲಿದ್ದಾರೆಂದು ಅವರ ಬೆಂಬಲಿಗರು ಭಾವಿಸಿದ್ದರು. ದಿಗ್ವಿಜಯ ಸಿಂಗ್ ಕೂಡ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಂಭಾವ್ಯ ಸಿಎಂ ಅಭ್ಯರ್ಥಿಯಾಗಿದ್ದರು. ಈ ಪ್ರದೇಶದಲ್ಲಿ ಕಾಂಗ್ರೆಸ್ ಒಟ್ಟು 17 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಈಗ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ, ಬಾರಿ ಗ್ವಾಲಿಯರ್-ಚಂಬಲ್ ಕಣಿವೆಯಲ್ಲಿ ಬಿಜೆಪಿ ಕಳೆದ ಚುನಾವಣೆಗಿಂತಲೂ ಉತ್ತಮ ಪ್ರದರ್ಶನವನ್ನು ನೀಡುವ ಪಣ ತೊಟ್ಟಿದೆ. ಸತತವಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಸಹಜವಾಗಿಯೇ ಆಡಳಿ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮತ್ತೆ ಅಧಿಕಾರಕ್ಕೇರುವ ಪ್ರಯತ್ನವನ್ನು ಶಿವರಾಜ್ ಸಿಂಗ್ ಚೌಹಾಣ್ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಅನೇಕ ಉಚಿತ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗೆ .

The post MP Election 2023: ಮಧ್ಯಪ್ರದೇಶದಲ್ಲಿ ಸಿಲಿಂಡರ್ ಬೆಲೆ 450 ರೂ.! ಎಲೆಕ್ಷನ್ ಗೆಲ್ಲಲು ಉಚಿತ ಕೊಡುಗೆ

Please follow and like us:

tmadmin

Leave a Reply

Your email address will not be published. Required fields are marked *

Next Post

ಮುಂಬೈ ಜೆಟ್ ಸ್ಕಿಡ್: ಬೆನ್ನುಮೂಳೆ ಗಾಯ, ಸಹ-ಪೈಲಟ್ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರ!

Fri Sep 15 , 2023
  ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಖಾಸಗಿ ವಿಮಾನವೊಂದು ಲ್ಯಾಂಡ್ ಆಗುವ ಹಂತದಲ್ಲಿ ರನ್ವೇಯಿಂದ ಸ್ಕೀಡ್ ಆದ ಪರಿಣಾಮ ಬೆನ್ನು ಮೂಳೆ ಗಾಯಗೊಂಡಿರುವ ಸಹ ಪೈಲಟ್ ನನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಯ ನಿರ್ದೇಶಕ ಡಾ.ದೀಪಕ್ ನಾಮಜೋಶಿ ಶುಕ್ರವಾರ ತಿಳಿಸಿದ್ದಾರೆ. ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಖಾಸಗಿ ವಿಮಾನವೊಂದು ಲ್ಯಾಂಡ್ ಆಗುವ ಹಂತದಲ್ಲಿ ರನ್ವೇಯಿಂದ ಸ್ಕೀಡ್ ಆದ ಪರಿಣಾಮ ಬೆನ್ನು ಮೂಳೆ ಗಾಯಗೊಂಡಿರುವ ಸಹ […]

Advertisement

Wordpress Social Share Plugin powered by Ultimatelysocial