ಟಿಎಂಸಿ ಬಲ ಹೆಚ್ಚಿಸಿದ ಮುಕುಲ್ ಸಂಗ್ಮಾ,

ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಟಿಎಂಸಿ ಮುನ್ನಡೆ ಪಡೆಯುತ್ತಿದೆ. 60 ಸದಸ್ಯ ಬಲದ ವಿಧಾನಸಭೆಯ ಪೈಕಿ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿದೆ.ಬುಡಕಟ್ಟು ಮತ್ತು ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಚಿಕ್ಕ ರಾಜ್ಯವಾದ ಮೇಘಾಲಯದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಟಿಎಂಸಿಗೆ ಪೈಪೋಟಿ ನೀಡುತ್ತಿದೆ.ಗುರುವಾರ ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಟಿಎಂಸಿ 12, ಎನ್‌ಪಿಪಿ 19 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಕಳೆದ ಚುನಾವಣೆ ಬಳಿಕ ರಚನೆಯಾಗಿದ್ದ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್‌ (ಎಂಡಿಎ) ಮೈತ್ರಿಕೂಟ ಈ ಬಾರಿ ಒಂದಾಗಿ ಚುನಾವಣೆಗೆ ಹೋಗಿಲ್ಲ. ಎನ್‌ಪಿಪಿ, ಟಿಎಂಸಿ, ಬಿಜೆಪಿ, ಕಾಂಗ್ರೆಸ್, ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಮತ ಎಣಿಕೆಯಲ್ಲಿ ಎನ್‌ಪಿಪಿ ಮತ್ತು ಟಿಎಂಸಿ ಸದ್ಯ ಮುನ್ನಡೆ ಕಾಯ್ದುಕೊಂಡಿವೆ. 2021ರಲ್ಲಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಕಾಂಗ್ರೆಸ್ ಶಾಸಕರು ಟಿಎಂಸಿಗೆ ವಲಸೆ ಹೋದರು. ಇದು ಟಿಎಂಸಿ ಬಲವನ್ನು ಹೆಚ್ಚಿಸಿದೆ. ಆದ್ದರಿಂದ ಕಾಂಗ್ರೆಸ್ ಪ್ರಾಬಲ್ಯವೂ ಕುಸಿದಿದ್ದು, ಪಕ್ಷ ಎರಡಂಕಿಯ ಸ್ಥಾನದಲ್ಲಿ ಜಯಗಳಿಸಲಿದೆಯೇ? ಎಂಬುದು ಪ್ರಶ್ನೆಯಾಗಿದೆ.

2012ರಲ್ಲಿ ಮೇಘಾಲಯ ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ)ವನ್ನು ಸ್ಥಾಪನೆ ಮಾಡಲಾಗಿದೆ. ಮೊದಲ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ, 35ರಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದರು. 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ತಂಡದ ಸಹಾಯ ಪಡೆಯಲಾಗಿದೆ.

ಈ ಬಾರಿಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೇಘಾಲಯ ರಾಜ್ಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ನೇತೃತ್ವದಲ್ಲಿ 11 ಕಾಂಗ್ರೆಸ್ ಶಾಸಕರು ಟಿಎಂಸಿ ಸೇರಿದರು. ಈ ಮೂಲಕ ವಿಧಾನಸಭೆಯಲ್ಲಿ ಟಿಎಂಸಿ ಬಲ ಹೆಚ್ಚಾಯಿತು. ಆದ್ದರಿಂದ ಟಿಎಂಸಿಯೇ ವಿಧಾನಸಭೆಯಲ್ಲಿ ಅಧಿಕೃತ ವಿರೋಧದ ಪಕ್ಷವಾಯಿತು.

ಕಾಂಗ್ರೆಸ್ ರಾಷ್ಟ್ರೀಯ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಹಾಲಿ ಶಾಸಕ ಮುಕುಲ್ ಸಂಗ್ಮಾ 11 ಶಾಸಕರ ಜೊತೆ ಟಿಎಂಸಿಗೆ ಬಂದರು. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಭಾರೀ ಪೈಪೋಟಿ ನೀಡುತ್ತೇವೆ ಎಂಬ ಸಂದೇಶವನ್ನು ಎರಡು ವರ್ಷಗಳ ಹಿಂದೆಯೇ ಕೊಟ್ಟಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬ್ಯಾಂಕ್‌ ಉದ್ಯೋಗಗಳಿಗೆ ಸಿಹಿ ಸುದ್ದಿ. ಗ್ರಾಹಕರಿಗೆ ಕಹಿ ಸುದ್ದಿ.!

Thu Mar 2 , 2023
ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳು ನಡೆಯಲಿವೆ. ಆ ಬದಲಾವಣೆಗಳು ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂತಸದ ಸುದ್ದಿಯಾದರೆ, ದೇಶದ ಜನರಿಗೆ ಇದು ಕಹಿ ಸುದ್ದಿಯಾಗಿದೆ. ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಸಾಧ್ಯತೆ ಇದೆ. ಬ್ಯಾಂಕ್ ನೌಕರರು ಅನಾದಿ ಕಾಲದಿಂದಲೂ ಆಗ್ರಹಿಸುತ್ತಿರುವ ವಾರಕ್ಕೆ 5 ಕೆಲಸದ ದಿನ ವಿಚಾರಕ್ಕೆ ಭಾರತೀಯ ಬ್ಯಾಂಕ್ ಗಳ ಸಂಘ  ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ವರದಿಯಾಗಿದೆ. ಈ ನಿರ್ಧಾರ ಜಾರಿಯಾದರೆ ಆರ್ಥಿಕ […]

Advertisement

Wordpress Social Share Plugin powered by Ultimatelysocial