‌ಹಳೆ ಮೈಸೂರಿನಲ್ಲಿ ಶೇ.50 ಸೀಟು ಗೆಲ್ಲುತ್ತದೆ ಬಿಜೆಪಿ

ರಾಜ್ಯದಲ್ಲಿ ಸುಶಾಸನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೀಡುವ ಬಿಜೆಪಿ ಸರ್ಕಾರ ಮುಂದುವರಿಯಬೇಕು ಎಂಬ ದೃಷ್ಟಿಯಿಂದ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಅವರ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿ ರಿಪೋರ್ಟ್ ಕಾರ್ಡ್ ಮುಂದಿಟ್ಟು ಮತ ಕೇಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದಗೌಡ ಅವರು ತಿಳಿಸಿದರು.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಳಿಕ ಭವಿಷ್ಯದ ಯೋಜನೆಗೆ ಜನಮತ ಲಭಿಸಿದೆ. ಮಂಡ್ಯದಲ್ಲಿ ಅಮಿತ್ ಶಾ ಅವರು ಈ ಕೆಲಸವನ್ನು ಮಾಡಲಿದ್ದಾರೆ. 1 ಲಕ್ಷ ಜನರು ಸೇರುವ ಸಮಾವೇಶ ಇದಾಗಲಿದೆ ಎಂದು ತಿಳಿಸಿದರು.ನಮ್ಮ ಪಕ್ಷಕ್ಕೆ ಇವೆರಡು ದಿನಗಳು ಮಹತ್ವದ್ದು. ಪಕ್ಷವು ಚುನಾವಣೆ ಕೆಲಸಕ್ಕೆ ವೇಗ ನೀಡಲು ಈಗಾಗಲೇ ಜನಸಂಕಲ್ಪ ಸಭೆಗಳನ್ನು ನಡೆಸಿದೆ. ಜನವರಿ 2ರಿಂದ 15ರವರೆಗೆ ಬಿಜೆಪಿ ‘ಬೂತ್ ವಿಜಯ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಅದನ್ನು ಡಿಸೆಂಬರ್‌ 31ರಂದು ಬೆಂಗಳೂರಿನಲ್ಲಿ ಅಮಿತ್ ಶಾ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ವಿವರಿಸಿದರು.ಡಿಸೆಂಬರ್‌ 30ರಂದು ಮತ್ತು 31ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ. ದೇಶದ ಎಲ್ಲ ಕೆಲಸ ಕಾರ್ಯಗಳು, ಪಕ್ಷದ ಕಾರ್ಯ ಇದರಿಂದ ಆಗಲಿದೆ. ಪಕ್ಷದ ನೂತನ ಕ್ರಿಯಾಯೋಜನೆಗಳ ಕುರಿತು ಅಮಿತ್ ಶಾ ಅವರು ಮಾರ್ಗದರ್ಶನ ನೀಡುವರು. ಬೆಂಗಳೂರಿನ ಮೂರು ಸಂಘಟನಾ ಜಿಲ್ಲೆಗಳಲ್ಲಿ 8,200 ಬೂತ್‍ಗಳಿವೆ. ನಗರ ಜಿಲ್ಲೆಗಳ ಅಧ್ಯಕ್ಷರಾದ ಬಿ. ನಾರಾಯಣಗೌಡ, ಎನ್.ಆರ್. ರಮೇಶ್, ಜಿ. ಮಂಜುನಾಥ್ ಅವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಅಶ್ವತ್ಥನಾರಾಯಣ ಮಂದಿರವನ್ನು ಕಟ್ಟಲಿ ಎಂದ ಡಿಕೆಶಿ

Fri Dec 30 , 2022
ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯಲ್ಲಿ ಮಂದಿರ ನಿರ್ಮಾಣ ಮಾಡಲಾಗುವುದು ಎಂಬ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರ ಯೋಜನೆ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಅಯೋಧ್ಯಾ ರಾಮಮಂದಿರವನ್ನಾದರೂ ಕಟ್ಟಲಿ, ಸೀತಾ ಮಂದಿರವನ್ನಾದರೂ ಕಟ್ಟಲಿ, ಬೇಕಿದ್ದರೆ ಅಶ್ವತ್ಥ ನಾರಾಯಣ ಮಂದಿರವನ್ನಾದರೂ ಕಟ್ಟಲಿ. ಮೂರು […]

Advertisement

Wordpress Social Share Plugin powered by Ultimatelysocial