Namma Metro; ವೈಟ್‌ಫೀಲ್ಡ್‌-ಬೆನ್ನಿಗಾನಹಳ್ಳಿ

 

ಬೆಂಗಳೂರು, ಫೆಬ್ರವರಿ 15; ಉದ್ಯಾನ ನಗರಿ ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಗೆ ನಮ್ಮ ಮೆಟ್ರೋ ಪರ್ಯಾಯ ಎಂದೇ ಅಂದಾಜಿಸಲಾಗುತ್ತಿದೆ. 2023ರಲ್ಲಿ ನಗರದಲ್ಲಿ ಮೂರು ಮಾರ್ಗಗಳು ವಾಣಿಜ್ಯ ಸೇವೆಗೆ ಮುಕ್ತವಾಗಲಿವೆ. ಆದ್ದರಿಂದ ನಮ್ಮ ಮೆಟ್ರೋ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ.

 

2022ರಲ್ಲಿ ನಗರದಲ್ಲಿ 56 ಕಿ. ಮೀ. ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ಸಂಚಾರ ನಡೆಸುತ್ತಿತ್ತು. ಈ ವರ್ಷ 38.09 ಕಿ. ಮೀ. ಮಾರ್ಗ ಹೊಸದಾಗಿ ಸೇರ್ಪಡೆಯಾಗಲಿದೆ. ಈ ಮೂಲಕ ಮೆಟ್ರೋ ಸಂಪರ್ಕ ಜಾಲ 94.09 ಕಿ. ಮೀ.ಗೆ ವಿಸ್ತರಣೆಯಾಗಲಿದೆ.

2023ರಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ಮಾರ್ಗವು ಎರಡು ಟೆಕ್ ಹಬ್‌ಗಳಾದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುತ್ತದೆ. ಈ ಮಾರ್ಗ ಉದ್ಘಾಟನೆಗೊಂಡರೆ ಸಾವಿರಾರು ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ.

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಯೋಜನೆ ಮೊದಲ ಹಂತದ ವಿಸ್ತರಿತ ಮಾರ್ಗದಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರವನ್ನು ಆರಂಭಿಸಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಪ್ರಾಯೋಗಿಕ ಸಂಚಾರ ನಡೆಸಿ ಅನುಮತಿ ನೀಡಿದ ಬಳಿಕ ಮೆಟ್ರೋ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ.

15.05 ಕಿ. ಮೀ. ಮೇಟ್ರೋ ಮಾರ್ಗ

ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ನೇರಳೆ ಮಾರ್ಗದಲ್ಲಿ ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಇದೇ ಯೋಜನೆಯ ವಿಸ್ತರಿತ ಮಾರ್ಗ 15.05 ಕಿ. ಮೀ. ಈ ಮಾರ್ಚ್‌ ಅಂತ್ಯದಲ್ಲಿ ಉದ್ಘಾಟನೆಗೊಳ್ಳಲಿದೆ.

ವೈಟ್‌ಫೀಲ್ಡ್‌-ಬೆನ್ನಿಗಾನಹಳ್ಳಿ ನಡುವೆ ಈ ವಿಸ್ತರಿತ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಇದೇ ಬೆಂಗಳೂರು ನಗರದ ಜನರ ಬಹು ನಿರೀಕ್ಷಿತ ಮಾರ್ಗವಾಗಿದೆ. ಬೆನ್ನಿಗಾನಹಳ್ಳಿ ಬಳಿ ಮೆಟ್ರೋ ರೈಲು ನಿಲ್ದಾಣ ಕಾಮಗಾರಿ ಕೊಂಚ ವಿಳಂಬವಾಗಿದೆ.

ಎರಡು ಹಂತಗಳಲ್ಲಿ ಕಾರ್ಯಾಚರಣೆ

ವೈಟ್‌ಫೀಲ್ಡ್‌-ಬೆನ್ನಿಗಾನಹಳ್ಳಿ ಮಾರ್ಗದಲ್ಲಿ ಎರಡು ಹಂತದಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ವೈಟ್‌ಫೀಲ್ಡ್-ಕೆ. ಆರ್. ಪುರ ನಡುವೆ ರೈಲು ಸಂಚಾರ ನಡೆಸಲಿದೆ. ಬಳಿಕ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಓಡಲಿದೆ ಎಂಬುದು ಲೆಕ್ಕಾಚಾರವಾಗಿದೆ.

ನಮ್ಮ ಮೆಟ್ರೋ ಆರಂಭವಾಗುವ ತನಕ ಕೆ. ಆರ್. ಪುರ-ಬೈಯಪ್ಪನಹಳ್ಳಿ ನಡುವೆ ಫೀಡರ್‌ ಬಸ್ ಸೇವೆಗೆ ಬಿಎಂಟಿಸಿ ಬಸ್‌ಗಳನ್ನು ಬಳಕೆ ಮಾಡಿಕೊಳ್ಳುವ ಉದ್ದೇಶವೂ ಇದೆ.

ಒಟ್ಟು 13 ನಿಲ್ದಾಣಗಳು

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ನೇರಳೆ ಮಾರ್ಗದ ಉದ್ದ 15.50 ಕಿ. ಮೀ.ಗಳು ಈ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಈಗಾಗಲೇ ರೈಲು ಸಂಚಾರಕ್ಕೆ ಬೇಕಾದ ಅಂತಿಮ ಹಂತದ ಕಾಮಗಾರಿಗಳನ್ನು ಬಿರುಸಿನಿಂದ ಮಾಡಲಾಗುತ್ತಿದೆ.

ಈ ಮಾರ್ಗದಲ್ಲಿ ವೈಟ್‌ಫೀಲ್ಡ್‌, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗುರಡಾಚಾರ್ ಪಾಳ್ಯ, ಮಹದೇವಪುರ, ಕೆ. ಆರ್. ಪುರ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಿವೆ.

ಯಾವ-ಯಾವ ಮಾರ್ಗಗಳು ಮುಕ್ತ

2023ರಲ್ಲಿ ಬೆಂಗಳೂರು ನಗರದಲ್ಲಿ ಮೂರು ನಮ್ಮ ಮೆಟ್ರೋ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.

* ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ (15.50 ಕಿ. ಮೀ.) ನೇರಳೆ ಮಾರ್ಗ
* ಆರ್‌. ವಿ. ರಸ್ತೆ-ಬೊಮ್ಮಸಂದ್ರ ಕಾರಿಡಾರ್ (18.82 ಕಿ. ಮೀ) ಹಳದಿ ಮಾರ್ಗ
* ನಾಗಸಂದ್ರ-ಬಿಐಇಸಿ (3.77 ಕಿ. ಮೀ.) ಹಸಿರು ಮಾರ್ಗ

ಕೇವಲ ಮೂರು ನಿಲ್ದಾಣಗಳನ್ನು ಹೊಂದಿರುವ ನಾಗಸಂದ್ರ-ಬಿಐಇಸಿ ಮಾರ್ಗದ ಕಾಮಗಾರಿಯೂ ಚುರುಕಿನಿಂದ ಸಾಗಿದೆ. ಈ ವರ್ಷದ ಜೂನ್‌ನಲ್ಲಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ತೆರವಾಗುವ ನಿರೀಕ್ಷೆ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಬೆಳೆ ಬೆಳೆದ್ರೆ, ಲಕ್ಷ ಲಕ್ಷ ಆದಾಯ ಗಳಿಸ್ಬೋದು

Wed Feb 15 , 2023
     ನಮ್ಮ ಭಾರತ ಕೃಷಿ ಪ್ರಧಾನ ದೇಶ. ಅನೇಕರು ಕೃಷಿ ಮೂಲಕ ದೊಡ್ಡ ಹಣವನ್ನು ಗಳಿಸುತ್ತಿದ್ದಾರೆ. ನಿಮಗೂ ಕೃಷಿಯಲ್ಲಿ ಆಸಕ್ತಿ ಇದ್ದರೆ ಈಗ ನೀವೂ ಲಕ್ಷ ಲಕ್ಷ ಗಳಿಸಬಹುದು. ಕೃಷಿಯ ಮೂಲಕವೂ ಉತ್ತಮ ಲಾಭ ಗಳಿಸಬಹುದು. ಕೃಷಿಯಲ್ಲಿ ಹಲವು ಬೆಳಗಳನ್ನು ಬೆಳೆಯಬಹುದು. ಅಂತಹದ್ದೆ ಒಂದು ಕೃಷಿಯ ಬಗ್ಗೆ ನಾವಿಂದೂ ಅಂತಹದ್ದೆ ಬೆಳೆಯ ಬಗ್ಗೆ ಹೇಳಲಿದ್ದೇವೆ. ಇದರಿಂದ ಅಧಿಕ ಲಾಭ ಪಡೆಯಬಹುದು. ಅಜ್ವೈನ ಕೃಷಿ (ಸೆಲರಿ) ಇದನ್ನು ಪ್ರಪಂಚದಾದ್ಯಂತದ ದೇಶಗಳಲ್ಲಿ […]

Advertisement

Wordpress Social Share Plugin powered by Ultimatelysocial