ಏಪ್ರಿಲ್ 17 ರಂದು ವರುಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿತ್ತೇನೆ

ಮೈಸೂರಿನ ವರುಣಾ  ಕ್ಷೇತ್ರಕ್ಕೆ ನಾನು ನೆಪ ಮಾತ್ರ, ನನ್ನ ಕಾರ್ಯಕರ್ತರು, ಮುಖಂಡರು, ಪಕ್ಷದ ಶಕ್ತಿ ದೊಡ್ಡದು , ಇಲ್ಲಿ ಯಾವ ಮುಖಂಡರು ಚಿಕ್ಕವರಲ್ಲ,ಯಾರು ದೊಡ್ಡವರೂ ಅಲ್ಲ, ಎಲ್ಲಕ್ಕಿಂತಾ ಪಕ್ಷ, ಕಾರ್ಯಕರ್ತರು ದೊಡ್ಡವರು.

ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರಲ್ಲ ಎಂಬ ಚರ್ಚೆ ನನಗೆ ಇಲ್ಲ,  ಎಲ್ಲರೂ ಸೇರಿ ನನ್ನನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ, ನಾನೇನೂ ಇಲ್ಲಿ ಶಾಶ್ವತ ಅಲ್ಲ.

ನನಗೆ 75 ವರ್ಷವಾದ ಮೇಲೆ ನಮ್ಮ ಬಿಜೆಪಿ (BJP) ಪಕ್ಷದಲ್ಲಿ ಯಾವ ಸ್ಥಾನ ಸಿಗುತ್ತದೆ  ಎಂದು ನನಗೆ ಗೊತ್ತು.  ಹಾಗಂತ ಇದು ಕೊನೆಯ ಚುನಾವಣೆ ಎನ್ನಲ್ಲಾ, ರಾಜಕೀಯ ನಿವೃತ್ತಿ ಅಂತ ಏನೂ ಇಲ್ಲ, ನಮ್ಮ ಪಕ್ಷದ ವ್ಯವಸ್ಥೆಗಳು ಇರುವ ರೀತಿ ನಾವು ಇರಬೇಕು.

ಸಿದ್ದರಾಮಯ್ಯ ನಾನು ಇಬ್ಬರು ಒಂದೇ ಗರಡಿಯಲ್ಲಿ ಪಳಗಿದವರು,  ಅವರು ಎಂತಹ ನಾಯಕರಾದರು ಅವರು ಕೂಡ ಇಲ್ಲಿ ನನ್ನಂತೆ ಅವರು ಕೂಡು ಒಬ್ಬ ಅಭ್ಯರ್ಥಿ ಅಷ್ಟೆ. ಪಕ್ಷದೊಳಗೆ ಯಾರೋ ಚಿಕ್ಕ ಪುಟ್ಟದಾದ ಇಲ್ಲ ಸಲ್ಲದ್ದು ಮಾತಾನಾಡುತ್ತಾರೆ, ಅದನ್ನು ದೊಡ್ಡದು ಮಾಡಬೇಡಿ,  ಗೋವಿಂದರಾಜ‌ ನಗರದ ಟಿಕೆಟ್ ವಿಚಾರ ಸಂಜೆಯೊಳಗೆ ಬಗೆಹರಿಯುತ್ತದೆ.  ಅಲ್ಲಿಯ ಸಮಸ್ಯೆಯನ್ನು ಬಗೆಹರಿಸುತ್ತೇನೆ. ನಾಳೆಯಿಂದ ವರುಣ ಕ್ಷೇತ್ರದ ಪ್ರಚಾರ ಆರಂಭ. ಪ್ರತಿ ಹಳ್ಳಿ – ಹಳ್ಳಿಯನ್ನು ಸುತ್ತುತ್ತೇನೆ.

ಏಪ್ರೀಲ್‌ 17 ರಂದು ವರುಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿತ್ತೇನೆ ಹಾಗೂ ಏಪ್ರೀಲ್‌ 19 ರಂದು ಚಾಮರಾಜ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿತ್ತೇನೆ ಎಂದ ವಿ.ಸೋಮಣ್ಣ..

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ..!

Thu Apr 13 , 2023
ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ..! ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಅಧಿಕಾರಿಗಳಿಂದ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ. ಉಷಾ ಟಿ.ಬೇಗೂರು ಗ್ರಾಮಪಂಚಾಯಿತಿ ಪಿ.ಡಿ.ಓ(PDO), 11 ಕೋಟಿಯಷ್ಟು ಅಕ್ರಮ ಆಸ್ತಿಗಳಿಕೆ ಆರೋಪ ಕೇಳಿ ಬಂದಿತ್ತು ಇಂದರಿಂದ ಉಷಾರವರಿಗೆ ಸೇರಿದ ಅನೇಕ ಆಸ್ತಿಗಳ ಮೇಲೆ ದಾಳಿ ಮಾಡಿದ್ದಾರೆ. ತನ್ನ ಹೆಸರಲ್ಲಿ ಮಾತ್ರವಲ್ಲದೆ ಪತಿ, ಮಗಳು, ಭಾವ ಸೇರಿದಂತೆ ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮ ಆಸ್ತಿಗಳಿಕೆ ಮಾಡಿದ್ದಾರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ […]

Advertisement

Wordpress Social Share Plugin powered by Ultimatelysocial