ರಾಜ್ಯಾದ್ಯಾಂತ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು. ಇದೀಗ ರಾಜಸ್ಥಾನದಿಂದ ಕೆಲಸ ಮುಗಿಸಿ ಸ್ಕಾರ್ಪಿಯೋ ಕಾರಿನಲ್ಲಿ ಬಿಹಾರದಲ್ಲಿರುವ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 9 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಪುರುಷರು, ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ,ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗೂ ವಾಬ್‌ಗಂಜ್‌ನ ವಾಜಿದ್‌ಪುರ ಪೊಲೀಸ್​ ಠಾಣಾ […]

ನವದೆಹಲಿ : ಲಾಕ್ ಡೌನ್ ನಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಕಾರಣದಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಆತ್ಮ ನಿರ್ಭರ್ ಭಾರತ ಅಡಿ ಯೋಜನೆಗಳನ್ನು ಮಾತ್ರವೇ ಆರಂಭಿಸಬೇಕು. ಇತರೆ ಬೇರಾವುದೇ ಯೋಜನೆಗಳನ್ನು ಆರಂಭಿಸದಂತೆ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಹೊಸ ಯೋಜನೆಗಳಿಗೆ ಬ್ರೇಕ್ ಹಾಕಿದೆ. ದೇಶದಲ್ಲಿ ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಯಾವುದೇ ಹೊಸ ಯೋಜನೆ ಜಾರಿ […]

ಭಾರತದಲ್ಲಿ ಮನೆಮಾತಾಗಿದ್ದ ಖ್ಯಾತ ‘ಅಟ್ಲಾಸ್’ ಸೈಕಲ್ ತಯಾರಕಾ ಕಂಪನಿ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ಬಾಗಿಲು ಮುಚ್ಚಿದೆ. ಉತ್ತರ ಪ್ರದೇಶದ ಘಾಝಿಯಾಬಾದ್‍ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಭಾರೀ ನಷ್ಟದ ಹಿನ್ನೆಲೆಯಲ್ಲಿ ಯಾವುದೇ ಸೂಚನೆ ನೀಡದೇ ಬಾಗಿಲು ಮುಚ್ಚಿದ್ದರಿಂದ ಸಾವಿರಕ್ಕೂ ಹೆಚ್ಚು ಮಂದಿ ನೌಕರರು ಬೀದಿಗೆ ಬಂದಿದ್ದಾರೆ. ಭಾರತದ ಅತೀ ದೊಡ್ಡ ಸೈಕಲ್ ತಯಾರಿಕಾ ಕಂಪೆನಿ ಎಂದು ಹೆಸರು ಮಾಡಿದ್ದಅಟ್ಲಾಸ್ ದೇಶದ ಬಹುತೇಕ ಮನೆಗಳಲ್ಲಿ ಇತ್ತು. ಕೋವಿಡ್ 19 ಲಾಕ್‍ಡೌನ್ ಘೋಷಣೆ […]

ನ್ಯೂಯಾರ್ಕ್: 46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಅಮೆರಿಕಾದಲ್ಲಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಕಾರಣವಾಗಿದೆ. ಈ ನಡುವೆ ಮೃತ ಫ್ಲಾಯ್ಡ್ ರ ಪುಟ್ಟ ಮಗಳ ವಿಡಿಯೋವೊಂದು ವೈರಲ್ ಆಗಿದ್ದು, ಅದನ್ನು ನೋಡಿ ಹಲವು ಕಣ್ಣೀರು ಹಾಕಿದ್ದಾರೆ. ಫ್ಲಾಯ್ಡ್ ರ ಆತ್ಮೀಯ ಗೆಳೆಯ, ರಾಷ್ಡ್ರೀಯ ಬಾಸ್ಕೆಟ್ ಬಾಲ್ ಆಟಗಾರ ಸ್ಟೀಪನ್ ಜಾಕ್ ಸನ್ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋವನ್ನು 1.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಬಾಲಕಿ ಜಾಕ್ […]

ಡರ್ ಕೆ ಆಗೆ ಜೀತ್ ಹೆ ಎಂಬುದು ಜಾಹೀರಾತೊಂದರ‌ ಅತಿ ಪ್ರಸಿದ್ಧ ಸಾಲು. ಸಾಮಾನ್ಯರು ಮಾಡಲು ಅಸಾಧ್ಯ ಎನಿಸುವ ಕಾರ್ಯಗಳನ್ನು ಕೆಲವರು ಮಾಡಿ ಸಾಹಸಿಗರು ಎನಿಸುತ್ತಾರೆ.‌ ತೆಲಂಗಾಣದಿಂದ ಟ್ವಿಟರ್ ನಲ್ಲಿ ಅಪ್ ಲೋಡ್ ಆದ ಅಪರೂಪ, ಅಪಾಯಕಾರಿ ಸಾಹಸದ‌ ವಿಡಿಯೋ ಒಂದು ನೆಟ್ಟಿಗರನ್ನು ತಲ್ಲಣಗೊಳಿಸಿದೆ. ತೆಲಂಗಾಣದ ನಿಜಾಂಪುರದಲ್ಲಿ ಘಟನೆ ನಡೆದಿದ್ದು, ನೂರ್ ಸಾವನ್ನೇ ಹೆದರಿಸಿ ಸಾಹಸ ಮಾಡಿದ ಭೂಪ.‌ ಅರ್ಷದ್ ಎಂಬವರು ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.ವಿದ್ಯುತ್ […]

ರಾಣಿಖೇತ್​: ಸಾಮಾನ್ಯವಾಗಿ ಕೊತ್ತಂಬರಿ ಗಿಡ ಒಂದರಿಂದ ಮೂರು ಅಡಿ ಎತ್ತರ ಬೆಳೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ಬರೋಬ್ಬರಿ 7 ಅಡಿ ಉದ್ದ ( 2.16 ಮೀಟರ್​) ಕೊತ್ತಂಬರಿ ಗಿಡ ಬೆಳೆದು ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾನೆ. ಉತ್ತರಾಖಂಡದ ರಾಣಿಖೇತ್​ನ ರೈತ ಗೋಪಾಲ್​ ದತ್​​ ಈ ಸಾಧನೆ ಮಾಡಿರುವ ಪ್ರಗತಿಪರ ರೈತ. ಸಾವಯವ ಕೃಷಿ ಪದ್ಧತಿ ಮೂಲಕ 2.16 ಮೀಟರ್​ ಉದ್ಧವಾದ ಕೊತ್ತಂಬರಿ ಗಿಡ ಬೆಳೆಸಿದ್ದು, ಗಿನ್ನಿಸ್​ ಬುಕ್​ ಆಫ್​ ವರ್ಲ್ಡ್​ […]

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾವಳಕಟ್ಟೆ ಎಂಬಲ್ಲಿ ಬಿಳಿ ಬಣ್ಣದ ಅಪರೂಪದ ಆಲ್ಟಿನೊ ಹೆಬ್ಬಾವು ಕಾಣಿಸಿಕೊಂಡಿದೆ. ಬಂಟ್ವಾಳದ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಬಿಳಿ ಹೆಬ್ಬಾವು ಕಾಣಸಿಕೊಂಡಿದ್ದು, ನಂತರ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಲಾಯಿತು. ಅವರು ಕೂಡಲೇ ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆ ಅದೇಶದಂತೆ ಪಿಲಿಕುಳಕ್ಕೆ ನಿಸರ್ಗ ಧಾಮಕ್ಕೆ ನೀಡಿದ್ದಾರೆ. ಇಂತಹ ಬಿಳಿ ಬಣ್ಣದ ಉರಗಗಳು […]

  ಬೆಂಗಳೂರು: ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿಯನ್ನು ಹೈಕೋರ್ಟ್ ಇಂದು ಎತ್ತಿ ಹಿಡಿದಿದೆ. ಕರ್ನಾಟಕ ಕಿರು ಗಣಿಗಾರಿಕೆ ರಿಯಾಯಿತಿ ಕಾಯ್ದೆಗೆ ನಿಯಮ 32ರ ಅಡಿ ತಿದ್ದುಪಡಿ ತಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ ಖಾಲಿದ್ ಪಾಷಾ ಸೇರಿ 250ಕ್ಕೂ ಜನರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಲಾಗಿತ್ತು. ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಮತ್ತು ನ್ಯಾಯಮೂರ್ತಿ […]

ಉಡುಪಿ: ಒಂದು ಕಡೆ ಉಡುಪಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕೇಸ್ ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ ವೇಳೆ ಇನ್ನೊಂದೆಡೆ ಕ್ವಾರಂಟೈನ್ ಕೇಂದ್ರದಲ್ಲೇ ಸ್ಥಳೀಯ ಜನಪ್ರತಿನಿಧಿಗಳು ಬರ್ತ್ ಡೇ ಪಾರ್ಟಿ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಬಂದ ಅನೇಕರಿಗೆ ಸೋಂಕು ತಗಲುತ್ತಿರುವ ಈ ಹೊತ್ತಿನಲ್ಲಿ, ಅವರು ಕ್ವಾರಂಟೈನ್ ಆಗಿರುವ ಕೇಂದ್ರದಲ್ಲಿ ಹುಟ್ಟು ಹಬ್ಬ ಆಚರಣೆ ನಡೆದಿದ್ದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಪ್ರಕೃತಿ ಆಂಗ್ಲಮಾದ್ಯಮ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ […]

ಮಂಗಳೂರು: ನಿಲ್ಲಿಸಿದ್ದ ಲಾರಿಯೊಂದಕ್ಕೆ   ಚಾಲಕನ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಯುವತಿ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕೋಟೆಕಾರ್ ಬೀರಿಯಲ್ಲಿ ನಡೆದಿದೆ. ನಗರದ ರಸ್ತೆಯ ಅಂಚಿನಲ್ಲಿ ಲಾರಿ ನಿಂತಿತ್ತು.ಆಗ ಲಾರಿಯನ್ನು ಗಮನಿಸದ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಬೈಕ್ ಮುಂಭಾಗ ನಜ್ಜುಗುಜ್ಜಾಗಿದ್ದು ಇಬ್ಬರೂ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣವೇ ಸ್ಥಳೀಯರು ಇಬ್ಬರನ್ನೂ […]

Advertisement

Wordpress Social Share Plugin powered by Ultimatelysocial