ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ.

ಧಾರವಾಡ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಲಾಗಿದೆ.

ಧಾರವಾಡದ ಯು.ಬಿ. ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್ ಪೋಸ್ಟ್ ಕಛೇರಿಯಲ್ಲಿ 15 ವರ್ಷಗಳ ಅವಧಿಯ ಹೆಚ್.ಯು.ಎಫ್/ಪಿ.ಪಿ.ಎಫ್ ಅಕೌಂಟ್ ತೆರೆದು ಸದರಿ ಯೋಜನೆಯಡಿ ಹಣವನ್ನು ತೊಡಗಿಸಿದ್ದರು.

ಯೋಜನೆಯು ದಿ:31/03/2015 ರಂದು ಮುಕ್ತಾಯವಾಗಿತ್ತು. ತದನಂತರ ದೂರುದಾರ ಸದರಿ ಯೋಜನೆಯನ್ನು ಮತ್ತೆ 5 ವರ್ಷಗಳ ಅವಧಿಗೆ ಅಂದರೆ 01/04/2015 ರಿಂದ 31/03/2020 ರವರೆಗೆ ಮುಂದುವರೆಸಿದ್ದರು. ಆ ಯೋಜನೆ ದಿ:31/03/2020 ರಂದು ಮುಕ್ತಾಯವಾಗಿದ್ದರೂ ಅಲ್ಲಿಯವರೆಗಿನ ಅವರ ವಂತಿಗೆ ಹಣ ಮತ್ತು ಅದರ ಮೇಲಿನ ಬಡ್ಡಿ ಲೆಕ್ಕ ಹಾಕಿ ಅಂಚೆ ಇಲಾಖೆಯವರು ತನಗೆ ಹಣವನ್ನು ಹಿಂದಿರುಗಿಸದೇ ಸತಾಯಿಸಿ ತೊಂದರೆ ನೀಡಿ, ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಅಂಚೆ ಇಲಾಖೆಯವರು ಸದರಿ ದೂರಿಗೆ ಆಕ್ಷೇಪಣೆ ಎತ್ತಿ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಹೆಚ್.ಯು.ಎಫ್/ಪಿ.ಪಿ.ಎಫ್ ಯೋಜನೆ ಮುಂದುವರೆಸಲು ಅವಕಾಶ ಇರುವುದಿಲ್ಲ. ಕಾರಣ 2015ರ ನಂತರ ಅವಧಿ ಮುಕ್ತಾಯವಾಗಿರುವುದರಿಂದ ಆ ನಂತರದ ಅವಧಿಗೆ ಬಡ್ಡಿಕೊಡಲು ಬರುವುದಿಲ್ಲ ಎಂದಿದ್ದರು. ದೂರುದಾರನಿಗೆ 2015 ರವರೆಗಿನ ಹಣ ಮತ್ತು ನಂತರದ ಅವಧಿಯ ಅವರ ವಂತಿಗೆ ಹಣವನ್ನು ಮಾತ್ರ ಅವರಿಗೆ ವಾಪಸ್ಸು ಕೊಡಬಹುದು ಎಂದು ಅಂಚೆ ಇಲಾಖೆಯವರು ಗ್ರಾಹಕನ ದೂರಿಗೆ ಆಕ್ಷೇಪಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ಅಂಚೆ ಇಲಾಖೆಯ ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿ, 2015ರ ನಂತರ ದೂರುದಾರರ ಹಣವನ್ನು ಜನರಲ್ ಪಿಪಿಎಫ್ ಯೋಜನೆಯಡಿ ಅಂಚೆ ಇಲಾಖೆಯವರು ಮುಂದುವರೆಸಿ ಆ ಹಣವನ್ನು ಬೇರೆಕಡೆ ವಿನಿಯೋಗಿಸಿ ಲಾಭ ಪಡೆದು ಈಗ ದೂರುದಾರನಿಗೆ ಬಡ್ಡಿಕೊಡಲು ನಿರಾಕರಿಸುತ್ತಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.

ದಿ:28/03/2000 ರಿಂದ ಇಲ್ಲಿಯವರೆಗೆ ದೂರುದಾರನ ವಂತಿಗೆ ಮೇಲೆ ಬಡ್ಡಿ ಲೆಕ್ಕ ಹಾಕಿ ಅಂಚೆ ಇಲಾಖೆಯವರು ಅವರಿಗೆ ಒಟ್ಟು 28,34,686 ರೂ.ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ. ಸೇವಾ ನ್ಯೂನ್ಯತೆಯಿಂದ ದೂರುದಾರನಿಗೆ ಆಗಿರುವ ತೊಂದರೆ ಮತ್ತು ಹಿಂಸೆಗಾಗಿ 50,000 ರೂ. ಪರಿಹಾರ ಹಾಗೂ 10,000 ರೂ. ಪ್ರಕರಣದ ಖರ್ಚು ವೆಚ್ಚ ಕೊಡಲು ಅಂಚೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್ ವುಡ್‌ಗೆ ಗಾಯಕಿ ಮಂಗ್ಲಿ ಎಂಟ್ರಿ

Sat Jan 14 , 2023
ಬಹುಭಾಷೆ ಸಿನಿಮಾಗಳಲ್ಲಿ ಇಷ್ಟು ದಿನ ತಮ್ಮ ಧ್ವನಿಯಿಂದ ಚಿರಪರಿಚಿತರಾಗಿದ್ದ ಗಾಯಕಿ ಮಂಗ್ಲಿ ಇದೀಗ ನಾಯಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಹೌದು ಗಾಯಕಿ ಮಂಗ್ಲಿ ಚಂದನವನದಲ್ಲಿ ನಾಯಕಿಯಾಗಿ ಪಾದರ್ಪಣೆ ಮಾಡುತ್ತಿರುವುದು ವಿಶೇಷ.ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹೇಳಿರುವ ಮಂಗ್ಲಿ,ನಾಯಕಿಯಾಗಿ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ. ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈ ಗಾಯಕಿ, ಮೊದಲ ಬಾರಿಗೆ ನಾಯಕಿಯಾಗಿ ಪ್ರವೇಶ ಮಾಡುತ್ತಿದ್ದಾರೆ. ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ […]

Advertisement

Wordpress Social Share Plugin powered by Ultimatelysocial