ಬ್ರೆಜಿಲ್​ನಲ್ಲಿ ಭುಗಿಲೆದ್ದ ಪ್ರತಿಭಟನೆ.

 

ವ ದೆಹಲಿ:ಬ್ರೆಜಿಲ್​​ನಲ್ಲಿ ಮಾಜಿ ಅಧ್ಯಕ್ಷ ಜೈರ್​ ಬೋಲ್ಸನಾರೋ ಬೆಂಬಲಿಗರು ಪ್ರಾರಂಭಿಸಿರುವ ಗಂಭೀರ ಸ್ವರೂಪದ ಪ್ರತಿಭಟನೆಯ ಬಗ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಜೈರ್​ ಬೋಲ್ಸನಾರೋ ಸೋತಿದ್ದನ್ನು ಒಪ್ಪಿಕೊಳ್ಳಲಾಗದ ಅವರ ಬೆಂಬಲಿಗರು, ಎಡಪಂಥೀಯ ನಾಯಕ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅಧ್ಯಕ್ಷೀಯ ಅಧಿಕಾರಕ್ಕೆ ಏರಿದ್ದರ ವಿರುದ್ಧ ದಂಗೆ ಶುರುವಿಟ್ಟುಕೊಂಡಿದ್ದಾರೆ.ಭಾನುವಾರ ಪ್ರತಿಭಟನಾಕಾರರು ಬ್ರೆಜಿಲ್​​ ಸರ್ಕಾರದ ಸೂಕ್ಷ್ಮ ವಲಯಕ್ಕೇ ದಾಂಗುಡಿ ಇಟ್ಟಿದ್ದರು. ಅಧ್ಯಕ್ಷರ ಭವನ, ಸಂಸತ್ ಭವನ, ಸುಪ್ರೀಂಕೋರ್ಟ್​ಗಳಿಗೆ ನುಗ್ಗಿ, ಹಾವಳಿ ಸೃಷ್ಟಿಸಿದ್ದಾರೆ.ಬ್ರೆಜಿಲ್​​ನ ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ‘ಬ್ರೆಜಿಲ್​​ನ ಬ್ರೆಸಿಲಿಯಾದಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದು ಕಳವಳ ಮೂಡಿಸಿತು. ನಿಜಕ್ಕೂ ಇದು ಅಪಾಯಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಎಲ್ಲರೂ ಗೌರವಿಸಬೇಕು. ಈ ವಿಚಾರದಲ್ಲಿ ಬ್ರೆಜಿಲ್​ ಸರ್ಕಾರಕ್ಕೆ ನಮ್ಮ ಬೆಂಬಲ ಸೂಚಿಸುತ್ತೇವೆ’ ಎಂದು ಹೇಳಿದ್ದಾರೆ. ಹಾಗೇ, ಬ್ರೆಜಿಲ್​ ಈಗಿನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾರನ್ನು ಟ್ಯಾಗ್​ ಮಾಡಿದ್ದಾರೆ.ಬ್ರೆಜಿಲ್​ ದಂಗೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ​ ಖಂಡಿಸಿದ್ದಾರೆ. ಬ್ರೆಜಿಲ್​ನಲ್ಲಿ ಕಾನೂನುಬದ್ಧವಾಗಿಯೇ ಚುನಾವಣೆ ನಡೆದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಆಗಿದೆ. ಇಷ್ಟಾದ ಮೇಲೆ ಹೀಗೆ ದಂಗೆ-ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಮಾಡಿದಂತೆ ಎಂದು ಹೇಳಿದ್ದಾರೆ.ನವ ದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆ ಹಾಗೂ ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನವರಿ 15-25 ರ ನಡುವೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗುವ (Union cabinet reshuffle ) ನಿರೀಕ್ಷೆ ಇದೆ.ಗುಜರಾತ್‌, ಹಿಮಾಚಲಪ್ರದೇಶ, ದಿಲ್ಲಿ ಪಾಲಿಕೆ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಕೆಲವು ಹಿರಿಯ ಸಚಿವರನ್ನು ಬದಲಿಸುವ ಸಾಧ್ಯತೆ ಇದೆ. ದಿಲ್ಲಿ ಪಾಲಿಕೆ ಚುನಾವಣೆಯ ಫಲಿತಾಂಶ ಹೈಕಮಾಂಡ್‌ಗೆ ತೃಪ್ತಿ ತಂದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ವರ್ಷ 9 ರಾಜ್ಯಗಳು ಚುನಾವಣೆ ಎದುರಿಸುತ್ತಿವೆ. ಅವುಗಳೆಂದರೆ ಕರ್ನಾಟಕ, ಛತ್ತೀಸ್‌ಗಢ, ತ್ರಿಪುರಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ.ರಾಜಕೀಯ ಲೆಕ್ಕಾಚಾರದಂತೆ, ಚುನಾವಣೆಯ ಹೊಸ್ತಿಲಿನಲ್ಲಿರುವ ರಾಜ್ಯಗಳಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಕೆಲ ಸಚಿವರಿಗೆ ರೋಟೇಶನ್ ಆಧಾರದಲ್ಲಿ ಬೇರೆ ಖಾತೆಗಳ ಹಂಚಿಕೆ ಆಗುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಸಚಿವರ ಮೌಲ್ಯಮಾಪನ ಮಾಡಲಾಗಿದ್ದು, ಒಂದಿಷ್ಟು ಬದಲಾವಣೆ ಸಾಧ್ಯ. ಕರ್ನಾಟಕದ ಕೆಲ ಹೊಸ ಮುಖಗಳಿಗೆ ಅವಕಾಶ ನೀಡಬಹುದು ಎನ್ನಲಾಗಿದೆಸದ್ಯ ರಾಜ್ಯದಿಂದ ಆಯ್ಕೆಯಾಗಿರುವ ಭಗವಂತ ಖುಬಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸೇರಿ 6 ಮಂದಿ ಕೇಂದ್ರ ಸಚಿವರಾಗಿದ್ದಾರೆ. ಚುನಾವಣೆಯ ಸ್ಟಾರ್‌ ಪ್ರಚಾರಕರು, ಉತ್ತಮ ಸಾಧನೆ ದಾಖಲಿಸಿರುವ ಸಂಸದರು ಮೋದಿ ಕ್ಯಾಬಿನೆಟ್‌ಗೆ ಸೇರುವ ಸಾಧ್ಯತೆ ಇದೆ. ಮಹಿಳೆಯರಿಗೂ ಹೆಚ್ಚಿನ ಪ್ರಾತಿನಿಧ್ಯ ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ.ಚಂಡೀಗಢ: ಹರಿಯಾಣದ ತೊಹಾನದಲ್ಲಿರುವ ಬಾಬಾ ಬಾಲಕನಾಥ್‌ ದೇವಾಲಯದ ಅರ್ಚಕ, ಜಿಲೇಬಿ ಬಾಬಾ (Jalebi Baba) ಎಂದೇ ಖ್ಯಾತಿಯಾದ ಅಮರ್‌ಪುರಿಯು 120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸೋಮವಾರ ಈತನಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಿದೆ.ಹೆಣ್ಣುಮಕ್ಕಳಿಗೆ ಮತ್ತು ಬರುವ ಔಷಧ ನೀಡಿ, ಬ್ಲ್ಯಾಕ್‌ ಮ್ಯಾಜಿಕ್‌ ಹೆಸರಿನಲ್ಲಿ ಅವರ ಮೇಲೆ ಅತ್ಯಾಚಾರ ಎಸಗುವ ಜತೆಗೆ ಅತ್ಯಾಚಾರದ ವಿಡಿಯೊ ರೆಕಾರ್ಡ್‌ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸಂತ್ರಸ್ತ ಮಹಿಳೆಯರು ದೂರು ನೀಡಿದ ಕಾರಣ ಬಂಧಿಸಲಾಗಿತ್ತು. ಈಗ ಇವನನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.ಜಿಲೇಬಿ ಅಂಗಡಿ ಇಟ್ಟಿದ್ದವ ಬಾಬಾ ಆಗಿ ಪರಿವರ್ತನೆಪಂಜಾಬ್‌ನ ಮಾನ್ಸಾದಿಂದ ಹರಿಯಾಣದ ಫತೇಹಾಬಾದ್‌ಗೆ ಆಗಮಿಸಿದ್ದ ಅಮರ್‌ಪುರಿ, ಆರಂಭದಲ್ಲಿ ತೊಹಾನ ರೈಲ್ವೆ ರೋಡ್‌ನಲ್ಲಿ ಜಿಲೇಬಿ ಅಂಗಡಿ ಇಟ್ಟಿದ್ದ. ತನ್ನ ಹೆಂಡತಿ ತೀರಿಕೊಂಡ ಬಳಿಕ ತಾಂತ್ರಿಕನಾಗಿ ಬದಲಾಗಿದ್ದ. ಬ್ಲ್ಯಾಕ್‌ ಮ್ಯಾಜಿಕ್‌ ಹೆಸರಿನಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಈತನನ್ನು 2018ರಲ್ಲಿ ಫತೇಹಾಬಾದ್‌ ಡಿಎಸ್‌ಪಿ ಆಗಿದ್ದ ಕ್ರಿಕೆಟರ್‌ ಜೋಗಿಂದರ್‌ ಶರ್ಮಾ ಅವರು ಬಂಧಿಸಿದ್ದರು.ಲಖನೌ: ಉತ್ತರ ಪ್ರದೇಶದಲ್ಲಿ ಗ್ಯಾಸ್‌ ಹೀಟರ್‌ ಆನ್‌ ಇಟ್ಟು ಮಲಗಿದ ಒಂದೇ ಕುಟುಂಬದ ನಾಲ್ವರು ಚಿರನಿದ್ರೆಗೆ ಜಾರಿದ್ದಾರೆ. ಗ್ಯಾಸ್‌ ಹೀಟರ್ ಆನ್‌ (Gas Heater Tragedy) ಇರುವುದನ್ನು ಗಮನಿಸದೆಯೇ ಮಲಗಿದ್ದು, ಗ್ಯಾಸ್‌ ಸೋರಿಕೆಯಾದ ಕಾರಣ ಉಸಿರುಗಟ್ಟಿ ನಾಲ್ವರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಝಜ್ಜರ್‌ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಮದರಸಾವೊಂದರಲ್ಲಿ ಕ್ಲರ್ಕ್‌ ಆಗಿದ್ದ ಆಸಿಫ್‌ (35), ಪತ್ನಿ ಶಗುಫ್ತಾ (32), ಜೈದ್‌ (3) ಹಾಗೂ ಮಾಯ್ರಾ (2) ಮೃತರು. ಬೆಳಗ್ಗೆ ಹಾಲು ಹಾಕುವ ವ್ಯಕ್ತಿ ಬಂದು ಬಾಗಿಲು ಬಡಿದಿದ್ದು, ತುಂಬ ಹೊತ್ತಾದರೂ ಪ್ರತಿಕ್ರಿಯೆ ಬಾರದ ಕಾರಣ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದೆ.ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಬಳಿಕ ಬಾಗಿಲು ಮುರಿದು ನೋಡಿದ್ದಾಗ ನಾಲ್ವರೂ ಮಲಗಿದ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಎಲ್ಲರೂ ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಘೋಷಿಸಿದರು.ಉತ್ತರಾಖಂಡದ ಪ್ರವಾಸಿ ತಾಣವಾದ ಜೋಶಿಮಠ ಪಟ್ಟಣವನ್ನು ಅಧಿಕೃತವಾಗಿಯೇ ‘ಮುಳುಗುತ್ತಿರುವ ಪಟ್ಟಣ’ ಎಂದು ಘೋಷಿಸಲಾಗಿದೆ. ಈಗಾಗಲೇ ಹಲವು ದೇವಸ್ಥಾನಗಳು, ಮನೆಗಳು ನೆಲಕಚ್ಚಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಭೆ ನಡೆಸಿದೆ. ಪಟ್ಟಣದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದೆ. ಇಷ್ಟಾಗಿಯೂ ಇನ್ನೂ ಹಲವರು ಅಲ್ಲಿಯೇ ಇದ್ದು, ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಬಹುಶಃ ಈ ಪರಿಸ್ಥಿತಿಯು ಮುಂದುವರಿದರೆ, ಭೂಮಿ ಬಾಯ್ದೆರೆದು ಇಡೀ ಪಟ್ಟಣವನ್ನು ಆಪೋಷನ ತೆಗೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ದುರ್ಘಟನೆ ಸಂಭವಿಸುವ ಮುಂಚೆಯೇ ಅಲ್ಲಿನವರಿಗೆ ಸುರಕ್ಷಿತ ಸೂರು ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ.ನೈಸರ್ಗಿಕವಾಗಿ ಏನೇ ಕಾರಣಗಳಿದ್ದರೂ ಜೋಶಿಮಠದ ಇಂದಿನ ಸ್ಥಿತಿಗೆ ಮಾನವನ ದುರಾಸೆಯೇ ಕಾರಣ. ನಿಸರ್ಗದ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೀಗೆಯೇ ಮುಂದುವರಿದರೆ, ದೇಶಾದ್ಯಂತ ಇನ್ನಷ್ಟು ‘ಜೋಶಿಮಠ’ಗಳು ಗೋಚರವಾಗಬಹುದು! ಅತಿ ಆಸೆ, ಅತಿಕ್ರಮಣ, ಅರಣ್ಯ ನಾಶ, ಎಲ್ಲೆಂದರಲ್ಲಿ ದೊಡ್ಡ ಕಟ್ಟಡಗಳನ್ನು ಕಟ್ಟುತ್ತಿರುವುದು, ಬೃಹತ್ ಅಣೆಕಟ್ಟುಗಳ ನಿರ್ಮಾಣ ಸೇರಿದಂತೆ ಪರಿಸರ ಸಮತೋಲನವನ್ನು ನಾವು ತಪ್ಪಿಸುತ್ತಿದ್ದೇವೆ. ಕಾರಣ, ಪ್ರಕೃತಿ ವಿಕೋಪ, ಭೂಕಂಪ, ತಾಪಮಾನ ಏರಿಕೆ ಸೇರಿ ಹಲವು ವೈಪರೀತ್ಯಗಳನ್ನು ಕಾಣುತ್ತಿದ್ದೇವೆ. ಈ ವೈಪರೀತ್ಯದ ಹೊಸ ಸಾಕ್ಷಿಯಾಗಿ ಜೋಶಿಮಠ ಪಟ್ಟಣವು ನಮ್ಮ ಕಣ್ಣ ಮುಂದಿದೆ. ಈಗಲೂ ಎಚ್ಚೆತ್ತುಕೊಳ್ಳದೇ ಹೋದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಖಂಡಿತವಾಗಿಯೂ ಕ್ಷಮಿಸಲಾರದು. ಮುಳುಗುತ್ತಿರುವ ಜೋಶಿಮಠ ಪಟ್ಟಣವು ನಮಗೆ ಎಚ್ಚರಿಕೆ ಗಂಟೆಯಾಗಲಿ.ಜೋಶಿಮಠ ಪಟ್ಟಣವು ಗಿರಿ ಪ್ರದೇಶವಾದ ಕಾರಣ ಇಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂಬ ಎಚ್ಚರಿಕೆ ಇದ್ದರೂ ಕೆಲವು ದಶಕಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಮಾಡಲಾಗುತ್ತಿದೆ. ಜಲವಿದ್ಯುತ್‌ ಘಟಕಗಳ ನಿರ್ಮಾಣ ಕಾಮಗಾರಿ, ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬೃಹತ್ ಕಟ್ಟಡಗಳ ನಿರ್ಮಾಣ ಹೆಚ್ಚಿದೆ. ಪ್ರವಾಸಿಧಾಮ ಎಂಬ ಕಾರಣಕ್ಕೆ ಕಂಡಕಂಡಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಪ್ರವಾಸಿಗರ ಸಂಖ್ಯೆಯೂ ಮಿತಿ ಮೀರುತ್ತಲೇ ಇರುತ್ತದೆ. ಇದರಿಂದಾಗಿ ನೀರಿನ ಪಥವೇ ಬದಲಾಗಿ ಹೋಗಿದ್ದರಿಂದ, ಭೂಮಿಯ ತಾಳಿಕೊಳ್ಳುವ ಸಾಮರ್ಥ್ಯ ಕುಸಿಯಿತು. ಅಂತಿಮವಾಗಿ ಪಟ್ಟಣದಲ್ಲಿ ಕಟ್ಟಡಗಳ ಕುಸಿತ, ಮನೆಗಳ ಬಿರುಕು ಸಾಮಾನ್ಯವಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಎದುರಾಗಬಹುದು ಪರಿಸರ ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಹಾಗಿದ್ದೂ, ಈ ಯಾವುದೇ ಚಟುವಟಿಕೆಗಳಿಗೆ ತಡೆ ಬಿದ್ದಿರಲಿಲ್ಲ.ದೇವಭೂಮಿಯಾಗಿರುವ ಉತ್ತರಾಖಂಡದಲ್ಲಿ ಅಭಿವೃದ್ಧಿಯ ನೆಪದಲ್ಲಿ ಅಣೆಕಟ್ಟುಗಳ , ಹೆದ್ದಾರಿಗಳ ನಿರ್ಮಾಣ, ಗಣಿಗಾರಿಕೆಗಳು ಎಗ್ಗಿಲ್ಲದೇ ಸಾಗುತ್ತಿವೆ. ಇದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎಂಬುದು 2013ರಲ್ಲೇ ನಮಗೆಲ್ಲ ಗೊತ್ತಾಗಿದೆ. ಅಂದು ಮೇಘಸ್ಫೋಟ ಸಂಭವಿಸಿ ನದಿಗಳು ಉಕ್ಕಿ ಹರಿದು ಸಾವಿರಾರು ಜನರು ಮೃತಪಟ್ಟಿದ್ದರು. ಬಹುಶಃ ಜೋಶಿಮಠ ಪಟ್ಟಣ ಮುಳುಗತ್ತಿರುವುದು ಅದರ ಮುಂದುವರಿದ ಭಾಗವೇ ಆಗಿರಬಹುದು ಮತ್ತು ನಿಸರ್ಗವು ಸೂಚ್ಯವಾಗಿ ನಮಗೆ ಎಚ್ಚರಿಕೆಯನ್ನು ನೀಡುತ್ತಿರಬಹುದು. ಈ ಪ್ರಾಕೃತಿಕ ಸಂಕೇತಗಳನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ.’ಭೂಮಿಯು ಮಾನವನ ಆಸೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಗಳನ್ನಲ್ಲ’ ಎಂಬ ಮಹಾತ್ಮ ಗಾಂಧಿ ಅವರ ನುಡಿ ಅಕ್ಷರಶಃ ಸತ್ಯ. ನಮ್ಮ ಅಗತ್ಯಗಳನ್ನು ಪೂರೈಸುವ ಶಕ್ತಿ ನಿಸರ್ಗಕ್ಕೆ ಇದೆ. ಆದರೆ, ನಮ್ಮ ದುರಾಸೆಯ ಕಾರಣಕ್ಕೆ ನಿಸರ್ಗದ ನಿಯಮಗಳನ್ನು ಬದಲಿಸುತ್ತಿದ್ದೇವೆ. ಇದರ ಪರಿಣಾಮವು ನಮ್ಮ ಕರ್ನಾಟಕದಲ್ಲೂ ಆಗಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಕಾಶ್ಮೀರ ಎನಿಸಿರುವ ಕೊಡಗಿನಲ್ಲಿ ಭಾರಿ ಭೂಕುಸಿತ ಸಂಭವಿಸಿ ಹಲವರು ಮೃತಪಟ್ಟಿದ್ದರು. ಎಲ್ಲೆಂದರಲ್ಲಿ ಅಲ್ಲಿ ಕುಸಿಯುತ್ತಿದ್ದ ಬೆಟ್ಟಗುಡ್ಡಗಳಿಂದಾಗಿ ಊರಿಗೇ ಊರೇ ನಾಮಾವಶೇಷವಾದ ಉದಾಹರಣಗಳೇ ಇವೆ. ಅರಣ್ಯ ಪ್ರದೇಶದಲ್ಲಿ ಮಾನವನ ಅತಿಯಾದ ಹಸ್ತಕ್ಷೇಪವು ಇದಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಕೊಡಗಿನಲ್ಲಿ ಮಾತ್ರವಲ್ಲ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳೂ ಅನಾರೋಗ್ಯಕರ ಪ್ರವಾಸೋದ್ಯಮ ಹಾವಳಿಗೆ ತತ್ತರಿಸುತ್ತಿವೆ. ಪ್ರವಾಸೋದ್ಯಮ ಬೆಳೆಯಬೇಕು; ಪ್ರವಾಸಿಧಾಮಗಳು ಅಭಿವೃದ್ಧಿಗೊಳ್ಳಬೇಕು. ಆದರೆ ಇದಕ್ಕೊಂದು ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು. ಪ್ರವಾಸೋದ್ಯಮ ಬೆಳವಣಿಗೆ ಪರಿಸರಕ್ಕೆ ಮಾರಕವಾಗದೆ ಪೂರಕವಾಗಿರಬೇಕು. ಇಲ್ಲದೇ ಹೋದರೆ ಜೋಶಿಮಠದಲ್ಲಿ ಈಗ ಆಗುತ್ತಿರುವುದು ಉಳಿದ ಪ್ರವಾಸಿಧಾಮಗಳಲ್ಲೂ ಆಗಬಹುದು. ಹಾಗಾಗಿ, ಸರ್ಕಾರಗಳು ಈ ನಿಟ್ಟಿನಲ್ಲಿ ಯೋಚಿಸಿ, ಸ್ಪಷ್ಟವಾದ ನೀತಿಯನ್ನು ರೂಪಿಸಬೇಕು. ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಷಭ ರಾಶಿ ಭವಿಷ್ಯ (Monday, January 9, 2023)

Mon Jan 9 , 2023
  ನಿಮ್ಮ ತೂಕದ ಮೇಲೆ ಒಂದು ಕಣ್ಣಿಟ್ಟಿರಿ ಮತ್ತು ಅತಿಯಾಗಿ ತಿನ್ನಬೇಡಿ. ಯಾರಿಂದಲೂ ಸಲಹೆಯನ್ನು ತೆಗದುಕೊಳ್ಳದೆ ನೀವು ಹಣವನ್ನು ಎಲ್ಲಿಯೂ ಹೂಡಿಕೆ ಮಾಡಬಾರದು. ಸಮುದ್ರದಾಚೆಯ ಸಂಬಂಧಿಯಿಂದ ಒಂದು ಉಡುಗೊರೆ ನಿಮ್ಮನ್ನು ಸಂತೋಷಪಡಿಸುತ್ತದೆ. ಏಕಪಕ್ಷೀಯ ವ್ಯಾಮೋಹ ನಿಮಗೆ ಕೇವಲ ಎದೆಗುದಿ ತರುತ್ತದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರಕಲಿದೆ. ಇಂದು ನೀವು ಉಚಿತ ಸಮಯವನ್ನು ಬಳಸುತ್ತೀರಿ ಮಾತು ಕಳೆದ ಸಮಯದಲ್ಲಿ ಪೂರ್ಣಗೊಳ್ಳದ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ ಇಂದು ನಿಮ್ಮ ಸಂಗಾತಿ ನಿಮಗೆ ತನ್ನ […]

Advertisement

Wordpress Social Share Plugin powered by Ultimatelysocial