ಎರಡು ದಿನದ ಪ್ರವಾಸಕ್ಕಾಗಿ ಇಂದು ಪ್ರಧಾನಿ ಮೈಸೂರಿಗೆ ಆಗಮನ!

ಹೈದರಾಬಾದ್​ನಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ ಇಂದು ಚೆನ್ನೈಗೆ ತೆರಳಿ, ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ಫ್ಲ್ಯಾಗ್ ತೋರಿಸಲಿದ್ದಾರೆ.

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನದ ಮೈಸೂರು, ಬಂಡೀಪುರ ಪ್ರವಾಸಕ್ಕಾಗಿ ಇಂದು ರಾತ್ರಿ ಮೈಸೂರಿಗೆ ಆಗಮಿಸಿ, ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇದಕ್ಕಾಗಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದ್ದು, ಕಳೆದ ಎರಡು ದಿನಗಳಿಂದ ಎಸ್​ಪಿಜಿ ಅಧಿಕಾರಿಗಳು ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಭದ್ರತಾ ತಾಲೀಮು ನಡೆಸುತ್ತಿದ್ದಾರೆ. ಇಂದು ಮತ್ತು ನಾಳೆ ಪ್ರಧಾನಿ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಗಳ ವಿವರ ಇಲ್ಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ರಾತ್ರಿ ನಗರದ ರ‍್ಯಾಡಿನ್ ಸನ್ ಬ್ಲೂ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 9 ರ ಭಾನುವಾರ ಬೆಳಗ್ಗೆ ನಗರದ ಒವಲ್ ಗ್ರೌಂಡ್ ಹೆಲಿಪ್ಯಾಡ್​ನಿಂದ ಬಂಡೀಪುರಕ್ಕೆ ಹೋಗಿ, ಅಲ್ಲಿಂದ ಸಫಾರಿ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 10 ಗಂಟೆಗೆ ವಾಪಸ್ ಮೈಸೂರಿಗೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ಕೆಎಸ್​ಓಯೂ ಘಟಿಕೋತ್ಸವ ಭವನಕ್ಕೆ ಆಗಮಿಸಲಿದ್ದು, ಅಲ್ಲಿ 2022 ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.

ಈ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರಧಾನ ಮಂತ್ರಿ ಮೋದಿ ಸಂಚರಿಸುವ ಮಾರ್ಗಗಳನ್ನು ಎಸ್​ಪಿಜಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಬಿಗಿ ಭದ್ರತಾ ವ್ಯವಸ್ಥೆಯನ್ನು ಅಣಿಗೊಳಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಮೋದಿ ಸಂಚರಿಸುವ ಮಾರ್ಗಗಳಲ್ಲಿ ಭದ್ರತಾ ತಾಲೀಮನ್ನು ಕಳೆದ ಎರಡು ದಿನಗಳಿಂದ ನಡೆಸಿದ್ದು, ಇಂದು ಸಹ ಭದ್ರತಾ ತಾಲೀಮು ನಡೆಸಲಿದ್ದಾರೆ.

ಕೋವಿಡ್ ಪರೀಕ್ಷೆ:ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆ ಕೋವಿಡ್ ಪರೀಕ್ಷೆಯ ವರದಿ ಕಡ್ಡಾಯವಾಗಿದ್ದು, ಇದರ ಜೊತೆಗೆ ಪ್ರಧಾನಿ ಮೋದಿ ಅವರನ್ನ ಸ್ವಾಗತ ಮಾಡುವ ಅಧಿಕಾರಿಗಳು, ಪಕ್ಷದ ಮುಖಂಡರುಗಳಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಬಂಡೀಪುರದ ಸಫಾರಿಯ ಸಂದರ್ಭದಲ್ಲಿ ಪ್ರಧಾನಿ ಮಾತುಕತೆ ನಡೆಸಲಿರುವ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೂ ಸಹ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.

ನಾಲ್ಕನೇ ಬಾರಿಗೆ ಪ್ರಧಾನ ಮಂತ್ರಿ ಮೋದಿ ಮೈಸೂರು ಭೇಟಿ: ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ನಾಲ್ಕು ಬಾರಿ ಮೈಸೂರು ಭೇಟಿ ನೀಡಿದ್ದು, ಒಟ್ಟು ನಾಲ್ಕು ಬಾರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಬಾರಿ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನಂತರ ಈ ಬಾರಿ ಬಂಡೀಪುರ ಹಾಗೂ ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಇಂದು ಹೈದರಾಬಾದ್​ಗೆ ಆಗಮಿಸಿರುವ ಪ್ರಧಾನಿ ಮೋದಿ ಸಿಕಂದರಾಬಾದ್​ ರೈಲು ನಿಲ್ದಾಣದಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆಯನ್ನು ನೀಡಿ, ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ ಚೆನ್ನೈಗೆ ತೆರಳುವ ಪ್ರಧಾನಿ ಮೋದಿ ಹೊಸದಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಟರ್ಮಿನಲ್​ ಉದ್ಘಾಟನೆ ಮಾಡಲಿದ್ದಾರೆ. ನಂತರ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ಫ್ಲ್ಯಾಗ್ ತೋರಿಸಲಿದ್ದಾರೆ. ಚೆನ್ನೈನಿಂದ ನೇರವಾಗಿ ಮೈಸೂರಿಗೆ ಆಗಮಿಸಿ ಇಂದು ಮೈಸೂರಿನಲ್ಲಿ ಪ್ರಧಾನಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಹಾಗೂ ನಾಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಜ್ಞಾ ತವಾಗಿದ್ದ ಎ ನ್​ಸಿಪಿ ನಾಯಕ ಅಜಿತ್​ ಪವಾರ್​ ದಿಢೀರ್​​ ಮಾಧ್ಯಮಗಳ ಮುಂದೆ ಪ್ರ ತ್ಯಕ್ಷ!

Sat Apr 8 , 2023
ನಿನ್ನೆಯಿಂದ ನಾಪತ್ತೆಯಾಗಿದ್ದ ಮಾಜಿ ಡಿಸಿಎಂ, ಎನ್​ಸಿಪಿ ನಾಯಕ ಅಜಿತ್​ ಪವಾರ್​ ಅವರು ದಿಢೀರ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಮುಂಬೈ:2019 ರಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್​ ಸರ್ಕಾರಕ್ಕೆ ಬೆಂಬಲ ಘೋಷಿಸಿ, ಬಳಿಕ ಉಲ್ಟಾ ಹೊಡೆದು ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್​ ಪಕ್ಷ(ಎನ್​ಸಿಪಿ) ನಾಯಕ ಅಜಿತ್​ ಪವಾರ್ ನಿನ್ನೆಯಿಂದ ಕಣ್ಮರೆಯಾಗಿ, ಈಗ ದಿಢೀರ್​ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಏಪ್ರಿಲ್​ 7, 8, 9 ರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು. ಇದು […]

Advertisement

Wordpress Social Share Plugin powered by Ultimatelysocial