ಅಜ್ಞಾ ತವಾಗಿದ್ದ ಎ ನ್​ಸಿಪಿ ನಾಯಕ ಅಜಿತ್​ ಪವಾರ್​ ದಿಢೀರ್​​ ಮಾಧ್ಯಮಗಳ ಮುಂದೆ ಪ್ರ ತ್ಯಕ್ಷ!

ನಿನ್ನೆಯಿಂದ ನಾಪತ್ತೆಯಾಗಿದ್ದ ಮಾಜಿ ಡಿಸಿಎಂ, ಎನ್​ಸಿಪಿ ನಾಯಕ ಅಜಿತ್​ ಪವಾರ್​ ಅವರು ದಿಢೀರ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ.

ಮುಂಬೈ:2019 ರಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್​ ಸರ್ಕಾರಕ್ಕೆ ಬೆಂಬಲ ಘೋಷಿಸಿ, ಬಳಿಕ ಉಲ್ಟಾ ಹೊಡೆದು ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ಕಾಂಗ್ರೆಸ್​ ಪಕ್ಷ(ಎನ್​ಸಿಪಿ) ನಾಯಕ ಅಜಿತ್​ ಪವಾರ್ ನಿನ್ನೆಯಿಂದ ಕಣ್ಮರೆಯಾಗಿ, ಈಗ ದಿಢೀರ್​ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ.

ಏಪ್ರಿಲ್​ 7, 8, 9 ರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು. ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿತ್ತು.

ಕಳೆದ ಬಾರಿಯಂತೆ ದಿಢೀರ್​ ನಾಪತ್ತೆಯಾಗಿದ್ದು ಮಹಾ ರಾಜಕೀಯ ಪಡಸಾಲೆಯಲ್ಲಿ ಗುಲ್ಲೆಬ್ಬಿಸಿತ್ತು. ಇದರ ಬೆನ್ನಲ್ಲೇ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಅವರು ಜೆಪಿಸಿ ತನಿಖೆಯ ಅಗತ್ಯವಿಲ್ಲ ಎಂಬ ಹೇಳಿಕೆಗೆ ಪುಣೆಯಲ್ಲಿ ಉತ್ತರಿಸಿರುವ ಅಜಿತ್​ ಪವಾರ್​, “ನಾನು ಮಾಧ್ಯಮಗಳಲ್ಲಿ ಶರದ್ ಪವಾರ್ ಅವರ ಸಂದರ್ಶನವನ್ನು ನೋಡಿದ್ದೇನೆ. ಅವರು ನಮ್ಮ ಉನ್ನತ ನಾಯಕರು. ಅವರು ತಳೆಯುವ ನಿಲುವಿನ ಬಗ್ಗೆ ಮತ್ತೆ ಚರ್ಚಿಸುವುದಿಲ್ಲ. ಅವರ ನಿಲುವು ಏನಾಗಿರುತ್ತದೋ ಅದೇ ನಮ್ಮದು ಕೂಡ” ಎಂದು ಹೇಳಿದರು.

ದಿಢೀರ್​ ನಾಪತ್ತೆಯಾಗಿದ್ದ ಅಜಿತ್:ಶುಕ್ರವಾರದಿಂದ ಅವರು ದಿಢೀರಬೇ ಕಣ್ಮರೆಯಾಗಿದ್ದರು. ನಿನ್ನೆಯಿಂದ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಇದಕ್ಕೆ ಕಾರಣ ಸಹಿತ ಗೊತ್ತಾಗಿರಲಿಲ್ಲ. ಅಜಿತ್​​ ಪವಾರ್ ಅಜ್ಞಾತವಾಗಿದ್ದಲ್ಲದೇ, ಇವರ ಜೊತೆಗೆ 7 ಶಾಸಕರೂ ಇದ್ದಾರೆ ಎಂದು ಹೇಳಲಾಗಿತ್ತು. ಈ ಹಿಂದೆ ಫಡ್ನವೀಸ್​ ಸರ್ಕಾರವನ್ನು ಪತನಗೊಳಿಸಿ ಮಾದರಿಯಲ್ಲಿಯೇ ಅವರು ನಾಪತ್ತೆಯಾಗಿದ್ದು ಹಲವು ಅನುಮಾನ ಮೂಡುವಂತೆ ಮಾಡಿದ್ದರು.

ಶುಕ್ರವಾರದ ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ ಅಜಿತ್ ಪವಾರ್ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂದು ಕೂಡ ತಿಳಿದಿಲ್ಲ. ಅವರ ಜೊತೆಗೆ ಏಳು ಶಾಸಕರಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ. ಈ ಶಾಸಕರ ಹೆಸರು ಇನ್ನೂ ಬಹಿರಂಗವಾಗಿಲ್ಲವಾದರೂ, ಹೊಸ ರಾಜಕೀಯ ನಾಟಕ ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಶರದ್​ ಪವಾರ್​ ಖಡಕ್​ ಎಚ್ಚರಿಕೆ:ರಾತ್ರೋರಾತ್ರಿ ಬಿಜೆಪಿ ಬೆಂಬಲಿಸಿ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್​ ಪವಾರ್​ ಪಕ್ಷದ ವಿರುದ್ಧ ಪಕ್ಷದ ಮುಖ್ಯಸ್ಥ ಶರದ್​ ಪವಾರ್​ ಕೆಂಡಾಮಂಡಲವಾಗಿದ್ದರು. ಅಶಿಸ್ತಿನಿಂದ ನಡೆದುಕೊಂಡ ಎಲ್ಲರನ್ನೂ ಪಕ್ಷದಿಂದ ಉಚ್ಚಾಟಿಸುವುದಾಗಿ ಖಡಕ್​ ಎಚ್ಚರಿಕೆ ನೀಡಿದ್ದರು.

ಅಜಿತ್ ಪವಾರ್ ಅವರ ನಿರ್ಧಾರ ಪಕ್ಷದ ರೇಖೆಗೆ ವಿರುದ್ಧವಾಗಿದೆ. ಅವರ ನಡೆಯಿಂದ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ನೋವಾಗಿದೆ. ಎನ್‌ಸಿಪಿ ಕಾರ್ಯಕರ್ತ, ಮುಖಂಡರಾಗಲೀ ಎನ್‌ಸಿಪಿ- ಬಿಜೆಪಿ ಸರ್ಕಾರದ ಪರವಾಗಿಲ್ಲ. ಒಂದು ವೇಳೆ ಎನ್​ಸಿಪಿ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದರೆ, ಅವರೆಲ್ಲರೂ ಪಕ್ಷಾಂತರ ಕಾಯ್ದೆಯಡಿ ತಮ್ಮ ಸದಸ್ಯತ್ವ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

ಮಹಾಅಘಾಡಿ ಸರ್ಕಾರ ರಚನೆ:ಬಿಜೆಪಿ ಸರ್ಕಾರ ಪತನವಾದ ಬಳಿಕ ಮೊದಲೇ ನಿರ್ಧರಿಸಿದಂತೆ ಮೂರು ಪಕ್ಷಗಳಾದ ಕಾಂಗ್ರೆಸ್​, ಎನ್​ಸಿಪಿ, ಶಿವಸೇನೆ ಸೇರಿ ಮಹಾಅಘಾಡಿ ನೂತನ ಸರ್ಕಾರವನ್ನು ರಚನೆ ಮಾಡಿದ್ದವು. ಕಾಂಗ್ರೆಸ್ (44), ಶಿವಸೇನೆ (56) ಮತ್ತು ಎನ್‌ಸಿಪಿ (55) ಸ್ಥಾನಗಳನ್ನು ಹೊಂದಿದ್ದವು.

ಶಿಂಧೆ ಸರ್ಕಾರಕ್ಕೆ ಬೆಂಬಲ?: 7 ಶಾಸಕರೊಂದಿಗೆ ಅಜ್ಞಾತವಾಗಿರುವ ಅಜಿತ್​ ಪವಾರ್​ ನಡೆ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲವಾದರೂ, ರಾಜ್ಯದಲ್ಲಿ ಬಿಜೆಪಿಯ ಬೆಂಬಲದೊಂದಿಗೆ ಸುಭದ್ರ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಏಕನಾಥ್​ ಶಿಂಧೆಗೆ ಬೆಂಬಲ ನೀಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಮಾಜಿ ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ಏಕನಾಥ್​ ಶಿಂಧೆ ಸಿಡಿದೆದ್ದು ಬಿಜೆಪಿ ಜೊತೆಗೂಡಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾರೆ.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಾಟ್​ಜಿಟಿಪಿ ಮಾಹಿತಿ ನಿಜ ಎನ್ನುವಂತೆ ಬಿಂಬಿಸುವ ತಂತ್ರವಷ್ಟೇ ಅಧ್ಯಯನ....!

Sat Apr 8 , 2023
ಚಾಟ್​ಜಿಪಿಟಿ ಯಶಸ್ಸು ನಿಖರವಲ್ಲ, ಆದರೆ ಮನವರಿಕೆ ಮಾಡುವ ಅಂಶ ಹೊಂದಿದೆ ಎಂದು ಟೊರೊಂಟೊ ಮೆಟ್ರೊಪಾಲಿಟನ್​ ಯುನಿವರ್ಸಿಟಿಯ ರಿಚರ್ಡ್​ ಲಚ್​ಮನ್​ ತಿಳಿಸಿದ್ದಾರೆ. ಚಾಟ್​ಜಿಪಿಟಿ ಅಥವಾ ಇನ್ನಿತರ ಎಐ ಚಾಟ್​ಬಾಟ್​ಗಳು ಸಂಖ್ಯಾಶಾಸ್ತ್ರೀಯವಾಗಿ ಇಂಟರ್​​ನೆಟ್​ನಲ್ಲಿ ಉತ್ಪಾದಿಸುವ ವ್ಯಾಪಕವಾಗಿ ಬಳಕೆಯದಾದ ಡೇಟಾಸೆಟ್​ಗಳ ಮಾಹಿತಿಗಳಿಂದ ಇದೆ. ಇದು ನೀಡುವ ಉತ್ತರಗಳು ತಮಾಷೆ, ಅರ್ಥಪೂರ್ಣ ಅಥವಾ ನಿಖರವಾದ ಯಾವುದೇ ಮಾಹಿತಿಯನ್ನು ಹೊಂದಿರುವುದಿಲ್ಲ. ಬದಲಾಗಿ ಇದು ಕೇವಲ ಪದಗುಚ್ಛ, ಕಾಗುಣಿತ, ವ್ಯಾಕರಣ ಶೈಲಿಯ ವೆಬ್​ಪೇಜ್​ ಇದಾಗಿದೆ. ಇದು ಸಂವಾದಾತ್ಮಕ ಇಂಟರ್​ಫೇಸ್​ […]

Advertisement

Wordpress Social Share Plugin powered by Ultimatelysocial