ಪಾಕ್ ಯುವತಿ, ಯುಪಿ ಯುವಕ: ಬೆಂಗಳೂರಲ್ಲಿ ಅಕ್ರಮ ಸಂಸಾರ!.

ಆಕೆ ಪಾಕಿಸ್ತಾನದ ಯುವತಿ, ಆತ ಭಾರತದ ಯುವಕ. ಇಬ್ಬರ ನಡುವೆ ಆನ್‌ಲೈನ್‌ನಲ್ಲಿ ಪ್ರೇಮಾಂಕುರವಾಗಿತ್ತು. ಈ ಜೋಡಿ ಒಂದಾಗಿ ಬಾಳೋಕೆ ನೆಲೆ ಕೊಟ್ಟಿದ್ದು ಬೆಂಗಳೂರು.. ಆದ್ರೆ, ಈ ಗಡಿಯಾಚೆಗಿನ ಪ್ರೇಮ ಕಾನೂನಿನ ಪ್ರಕಾರ ಅಕ್ರಮ..! ಹೀಗಾಗಿ, ಇವರ ಪ್ರೀತಿಗೆ ಕಾನೂನೇ ವಿಲನ್ 19 ವರ್ಷ ವಯಸ್ಸಿನ ಪಾಕಿಸ್ತಾನದ ಯುವತಿ ಇಕ್ರಾ ಜೀವಾನಿ ಅವರು ಭಾರತದ ಯುವಕ ಮುಲಾಯಂ ಸಿಂಗ್ ಎಂಬಾತನ ಜೊತೆ ಆನ್‌ಲೈನ್‌ನಲ್ಲಿ ಸಂಪರ್ಕಕ್ಕೆ ಬಂದರು. ಆನ್‌ಲೈನ್‌ನಲ್ಲಿ ಲೂಡೋ ಆಟ ಆಡುತ್ತಲೇ ಇವರಿಬ್ಬರ ನಡುವೆ ಪ್ರೇಮದಾಟ ಶುರುವಾಗಿತ್ತು. ಇಬ್ಬರೂ ಪರಸ್ಪರ ಭೇಟಿ ಆಗಬೇಕು, ಮದುವೆ ಆಗಬೇಕು, ಒಂದಾಗಿ ಬಾಳಬೇಕೆಂದು ನಿರ್ಧರಿಸಿದರು.ಪಾಕಿಸ್ತಾನದ ಇಕ್ರಾ ಹಾಗೂ ಭಾರತದ ಮುಲಾಯಂ ಒಂದಾಗಿ ಬಾಳಲು ದೇಶದ ನಡುವಿನ ಗಡಿಯೇ ಅಡ್ಡಿಯಾಗಿತ್ತು. ಏಕೆಂದರೆ ಇಕ್ರಾಗೆ ಭಾರತದ ವೀಸಾ ಸಿಗಲೇ ಇಲ್ಲ. ಹೀಗಾಗಿ, ಪರಸ್ಪರ ಒಂದಾಗಲೇ ಬೇಕು ಎಂದು ತಂತ್ರಗಾರಿಕೆ ಮಾಡಿದ ಪ್ರೇಮಿಗಳು, ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದರು. ಇವರ ಪ್ಲಾನ್‌ಗೆ ವೇದಿಕೆಯಾಗಿದ್ದು, ನೇಪಾಳ ದೇಶ.ಪಾಕಿಸ್ತಾನದಿಂದ ನೇಪಾಳದ ಕಠ್ಮಂಡುನಲ್ಲಿ ಇರುವ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಕ್ರಾ ಬಂದಿಳಿದಳು. ಇನ್ನು ಮುಲಾಯಂ ಸಿಂಗ್ ಕೂಡಾ ಉತ್ತರ ಪ್ರದೇಶದಿಂದ ಕಠ್ಮಂಡುಗೆ ತೆರಳಿದ್ದ. ಏರ್‌ಪೋರ್ಟ್‌ನಲ್ಲಿ ಇಕ್ರಾಳನ್ನು ಬರಮಾಡಿಕೊಂಡ. ಇಬ್ಬರೂ ಕಠ್ಮಂಡುನಲ್ಲೇ ಮದುವೆಯಾದರು. ನಂತರ ಭಾರತದ ಒಳಗೆ ಸೊನಾಲಿ ಎಂಬ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಿದ ಇಬ್ಬರೂ ಪ್ರೇಮಿಗಳು ಬೆಂಗಳೂರಿನಲ್ಲಿ ನೆಲೆ ಕಂಡರು. ಸುಮಾರು ವರ್ಷಗಳ ಕಾಲ ಇಬ್ಬರೂ ಬೆಂಗಳೂರಿನಲ್ಲಿ ಜೋಡಿ ಹಕ್ಕಿಗಳಂತೆ ಒಂದಾಗಿ ಬಾಳಿದರು. ಬೆಂಗಳೂರಿನಲ್ಲಿ ಹಿಂದೂ ಹೆಸರಿಟ್ಟುಕೊಂಡು ಇಕ್ರಾ ಜೀವನ ಮಾಡುತ್ತಿದ್ದಳು.
ಬೆಂಗಳೂರಿನಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದರೂ ಕೂಡಾ ಇಕ್ರಾ ತನ್ನ ಧಾರ್ಮಿಕ ನಂಬಿಕೆ ಬಿಟ್ಟಿರಲಿಲ್ಲ. ಆಕೆ ಮನೆಯಲ್ಲೇ ನಮಾಜ್ ಮಾಡುತ್ತಿದ್ದಳು. ಇದನ್ನು ಗಮನಿಸಿದ ಈಕೆಯ ಅಕ್ಕ ಪಕ್ಕದ ಮನೆಯ ನಿವಾಸಿಗಳಿಗೆ ಸಂಶಯ ಬಂತು. ಕೂಡಲೇ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಈಕೆಯ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಪೊಲಿಸರಿಗೆ ಇಕ್ರಾ ಪಾಸ್‌ಪೋರ್ಟ್‌ ಸಿಕ್ಕಿತು. ಈಕೆ ಪಾಕಿಸ್ತಾನ ಪ್ರಜೆ ಅನ್ನೋದು ದೃಢಪಟ್ಟಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಮಗನ ಸಾವಿಗೆ ಸಿಂಧೂರಿ ಹೊಣೆಯಲ್ಲ,

Mon Feb 20 , 2023
ರಾಮನಗರ, ಫೆಬ್ರವರಿ, 20: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ‌ಇಬ್ಬರು ಮಹಿಳಾ ಅಧಿಕಾರಿಗಳ ಕಿತ್ತಾಟದಲ್ಲಿ ನನ್ನ ಮಗನ ಹೆಸರು ತರಬೇಡಿ. ನನ್ನ ಮಗ ಮೃತಪಟ್ಟು 8 ವರ್ಷಗಳು ಕಳೆದಿವೆ. ನಿಮ್ಮ ಜಗಳದಿಂದ ನನ್ನ ಮಗನ ಹರಸರಿಗೆ ಮಸಿ ಹಚ್ಚಬೇಡಿ ಎಂದು ಐಎಎಸ್‌ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿಕಾರಿದರು.ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಲ ಗ್ರಾಮದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ […]

Advertisement

Wordpress Social Share Plugin powered by Ultimatelysocial