15 ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿಯ ಮೇಲೆ ಆತ್ಯಾಚಾರ ಮಾಡಿದ್ದಾನೆ.

ಮುಂಬೈ: 15 ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿಯ ಮೇಲೆ ಆತ್ಯಾಚಾರ ಮಾಡಿದ್ದಾನೆ. ಇದೀಗ ತಪ್ಪೊಪ್ಪಿಕೊಂಡಿರುವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿತ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಅಪ್ರಾಪ್ತ ವಯಸ್ಸಿನ ಬಾಲಕಿ, ಶಾಲೆಯ ವಠಾರದಲ್ಲಿ ಕುಳಿತು ಅಳುತ್ತಿರುವುದನ್ನು ದಾರಿ ಹೋಕರೊಬ್ಬರು ಗಮನಿಸಿದ್ದಾರೆ. ಕೂಡಲೇ ಅವರು ಬಂದು ವಿಚಾರಿಸಿ ಆಕೆಯನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ. ಘಟನೆಯ ಬಗ್ಗೆ ಬಾಲಕಿ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಎಚ್ಚೆತ್ತ ಪೋಷಕರು, ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆಪ್ರಕರಣ ದಾಖಲಿಸಿಕೊಂಡ ನಾಗ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಗಳು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರು ನಲ್ಲಸೊಪಾರ ಎಂಬ ಪ್ರದೇಶದಲ್ಲಿದ್ದ ಆರೋಪಿ ಬಾಲಕನನ್ನು ಬಂಧಿಸಿದ್ದಾರೆ.ಆರೋಪಿ ಬಾಲಕ, ಬಾಲಕಿಯ ಬಾಯಿಯನ್ನು ಬಟ್ಟೆಯಿಂದ ಬಿಗಿದು ಶಾಲಾ ವಠಾರದಲ್ಲಿದ್ದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಇದಕ್ಕೂ ಮೊದಲು ಆತನ ನನಗೆ ಹೊಡೆದಿದ್ದಾನೆ ಎಂದು ಬಾಲಕಿನ ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ.ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಬಾಲಕನ ಮುಖ ಪತ್ತೆಯಾಗಿತ್ತು. ಇದು ಆರೋಪಿ ಬಾಲಕನನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯವಾಗಿತ್ತು. ಬಾಲಕನನ್ನು ಬಂಧಿಸಲು ಮೊದಲು ಆತನ ಮನೆಗೆ ಹೋಗಿದ್ದಾರೆ. ಈ ವೇಳೆ ಬಾಲಕ ಅಲ್ಲಿರಲಿಲ್ಲ. ಹೀಗಾಗಿ ಬಾಂದ್ರಾ, ಖಾರ್, ಜೋಗೇಶ್ವರಿ, ಚೆಂಬೂರ್ ಮತ್ತು ನಲ್ಲಸೊಪಾರ ಮುಂತಾದೆಡೆ ಹುಡುಕಾಡಿದ್ದಾರೆ. ಕೊನೆಗೆ ಕುಟುಂಬಸ್ಥರ ಮನೆಯಲ್ಲಿ ಆರೋಪಿ ಬಾಲಕ ಪತ್ತೆಯಾಗಿದ್ದಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆನ್​ಲೈನ್​ ಆಫರ್​ನಿಂದ ಮೋಸ ಹೋಗ್ಬೇಡಿ

Mon Jan 9 , 2023
ಇತ್ತೀಚೆಗೆ ಟೆಕ್ನಾಲಜಿ ಬಹಳಷ್ಟು ಮುಂದುವರೆದಿದೆ ಅಂತಾನೇ ಹೇಳ್ಬಹುದು. ಯಾವುದೇ ಆಹಾರ, ಪ್ರೊಡಕ್ಟ್​, ಇನ್ನಿತರ ಸಾಮಾಗ್ರಿಗಳು ಬೇಕಾದ್ರೂ ಆನ್​ಲೈನ್​ನಲ್ಲಿ  ಬುಕ್​ ಮಾಡಿದ್ರೆ ಸಾಕು ಕ್ಷಣಮಾತ್ರದಲ್ಲಿ ನಿಮ್ಮ ಕೈಗೆ ಬಂದು ಸೇರುತ್ತೆ. ಆದರೆ ಇತ್ತೀಚೆಗೆ ಆನ್​ಲೈನ್​ನಲ್ಲಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.ಟೆಕ್ನಾಲಜಿ ಎಷ್ಟು ಮುಂದುವರೆಯುತ್ತಿದೆಯೋ ಅಷ್ಟೇ ಅದರ ದುರ್ಬಳಕೆಯೂ ಆಗ್ತಾಇದೆ. ಜನರನ್ನು ಮೋಸ ಮಾಡುವ ಜಾಲಕ್ಕೆ ಕೆಲ ವಂಚಕರು ಪ್ರಯತ್ನ ಪಡ್ತಾ ಇದ್ದಾರೆ. ಇದೀಗ ಆನ್​ಲೈನ್​ ಮೂಲಕ ಆರ್ಡರ್ (Online Order) ಮಾಡಿ […]

Advertisement

Wordpress Social Share Plugin powered by Ultimatelysocial