ಬಾಲಿವುಡ್ ಲವರ್ ಬಾಯ್ ರಿಷಿ ಕಪೂರ್ ಬೆಳೆದು ಬಂದ ಹಾದಿ..!

ಬಾಲಿವುಡ್ ನ ಲವರ್ ಬಾಯ್ ರಿಷಿ ಕಪೂರ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದ ನಟ ರಿಷಿ ಕಪೂರ್ ಮುಂಬೈನಲ್ಲಿ ವಿಧಿವಶವಾಗಿದ್ದಾರೆ. ಹಿಂದಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದ ರಿಷಿ ಕುಮಾರ್ ಬಹು ದೊಡ್ಡ ನಟನಾಗಿ ಬೆಳೆದವರು..

ಅವರಿಗೆ ಕನ್ನಡ ನಂಟು ಇತ್ತು ಅನ್ನೋದು ವಿಶೇಷ. ಬಹಳ ವರ್ಷಗಳ ಹಿಂದೆ ಕನ್ನಡದಲ್ಲಿ ಹಿಟ್ ಆಗಿದ್ದ ನಾಗರಹಾವು ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಾಯಿತು. ಹಿಂದಿಯಲ್ಲಿ ಜಹ್ರೀಲಾ ಇನ್ಸಾನ್ ಅಂತ ಟೈಟಲ್ ಫಿಕ್ಸ್ ಮಾಡಲಾಗಿತ್ತು. ಇದೇ ಚಿತ್ರದ ಶೂಟಿಂಗ್‌ಗೆಂದು ಚಿತ್ರದುರ್ಗಕ್ಕೆ ಬಂದಿದ್ದರು.

ಕನ್ನಡದಲ್ಲಿ ನಾಗರಹಾವು ಚಿತ್ರ ನಿರ್ದೇಶನ ಮಾಡಿದ್ದ ಪುಟ್ಟಣ್ಣ ಕಣಗಾಲ್ ಅವರೇ ಹಿಂದಿಯಲ್ಲೂ ಆಕ್ಷನ್ ಕಟ್ ಹೇಳಿದ್ರು. ಅಲ್ಲದೇ ಜಲೀಲ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಹಿಂದಿಯಲ್ಲೂ ಅದೇ ಪಾತ್ರ ನಿರ್ವಹಿಸಿದ್ರು. ರಿಷಿ ಕಪೂರ್ ಅಭಿನಯದ ಬಾಬಿ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.  ತದನಂತರ ಒಳ್ಳೆಯ ಕಥೆ ಹುಡುಕಾಟದಲ್ಲಿದ್ದ ಕಪೂರ್ ಗೆ ಕಾಣಿಸಿದ್ದು ಕನ್ನಡದ ನಾಗರ ಹಾವು ಚಿತ್ರ. ಆಗಷ್ಟೇ ನಾಗರಹಾವು ಸಿನಿಮಾ ಕನ್ನಡದಲ್ಲಿ ಭರ್ಜರಿ ಹಿಟ್ ಆಗಿತ್ತು.

ಈ ಚಿತ್ರದಲ್ಲಿ ರಾಮಾಚಾರಿ ಪಾತ್ರ ನಿರ್ವಹಿಸಿದ್ದ ವಿಷ್ಣುವರ್ಧನ್ ಅವರ ಪಾತ್ರವನ್ನೇ ಹಿಂದಿಯಲ್ಲಿ ರಿಷಿ ಕಪೂರ್ ಅಭಿನಯ ಮಾಡಿದ್ರು. ಹಲವಾರು ಮೇರು ನಟರು ಅಭಿನಯಿಸಿದ್ದ ಈ ಚಿತ್ರ ಹೇಳಿಕೊಳ್ಳುವಷ್ಟು ಹಿಟ್ ನೀಡಲಿಲ್ಲ.

ಖ್ಯಾತ ನಟ, ನಿರ್ದೇಶಕ ರಾಜ್ ಕಪೂರ್ ಪುತ್ರ ರಿಷಿ ಕಪೂರ್  

ಮುಂಬೈನ ಚೆಂಬುರ್ ಎಂಬಲ್ಲಿ 1952 ಸೆಪ್ಟೆಂಬರ್ 04 ರಂದು ಜನಿಸಿದರು. ಪೂರ್ತಿ ಹೆಸರು ರಿಷಿ ರಾಜ್ ಕಪೂರ್. ಖ್ಯಾತ ನಟ ಮತ್ತು ನಿರ್ದೇಶಕ ರಾಜ್ ಕಪೂರ್ ಅವರ ಎರಡನೇ ಪುತ್ರ ರಿಷಿ ಕಪೂರ್. ಮೂಲತ ಸಿನಿಮಾ ರಂಗದ ಹಿನ್ನೆಲೆಯಿಂದ ಬೆಳೆದ ರಿಷಿ ಕಪೂರ್ ಬಾಲ್ಯದಲ್ಲೇ ಸಿನಿಮಾ ರಂಗಕ್ಕೆ ಎಂಟ್ರೀ ಕೊಟ್ಟಿದ್ರು. ಇವರ ಸಹೋದರಾದ ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್ ಕೂಡ ಮೇರು ನಟರು. ರಿಷಿ ಕಪೂರ್ ಮುಂಬೈನ ಕ್ಯಾಂಪಿಯನ್ ಸ್ಕೂಲ್ ಮತ್ತು ಅಜ್ಮೀರನ ಮೆಯೋ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ರು. 1980ರಲ್ಲಿ ನೀತು ಸಿಂಗ್ರೋ ಅವರೊಂದಿಗೆ ವಿವಾಹವಾಗಿ, ರಣಬೀರ್ ಕಪೂರ್ ಮತ್ತು ರಿಧಿಮಾ ಕಪೂರ್ ಎಂಬ ಇಬ್ಬರು ಮಕ್ಕಳಿಗೆ ದಂಪತಿ ಜನನ ನೀಡಿದ್ರು.

ಬಾಲ್ಯದಲ್ಲೇ ಸಿನಿ ರಂಗಕ್ಕೆ ಎಂಟ್ರೀ ಕೊಟ್ಟಿದ್ದ ರಿಷಿ ಕಪೂರ್..!

ತಂದೆ ರಾಜ್ ಕಪೂರ್ ನಿರ್ದೇಶನದ ಮೇರಾನಾಮ್ ಜೋಕರ್ ಚಿತ್ರದಲ್ಲಿ ಬಾಲ ನಟನಾಗಿ ಸಿನಿ ಪಯಣದತ್ತ ಹೆಜ್ಜೆ ಹಾಕಿದ್ರು ರಿಷಿ ಕಪೂರ್. ತದನಂತರ ಮೊಟ್ಟ ಮೊದಲ ಬಾರಿಗೆ 1973ರಲ್ಲಿ ನಾಯಕ ನಟನಾಗಿ ಬಾಬಿ ಚಿತ್ರದಲ್ಲಿ ನಟಿಸಿ ಭಾರಿ ಯಶಸ್ಸು ಪಡೆದ್ರು. ಅತಿ ಕಡಿಮೆ ಸಮಯದಲ್ಲಿ ಹೆಸರು ಮಾಡಿದ ಬಾಬಿ ಸಿನಿಮಾ ಬಳಿಕ ರಿಷಿ ಕಪೂರ್ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ರು. ಬಾಲಿವುಡ್ ನಲ್ಲಿ ಹಲವಾರು ರೋಮ್ಯಾಂಟಿಕ್ ಸಿನಿಮಾಗಳ ಮೂಲಕ ಅಭಿಮಾನಿಗಳಲ್ಲಿ ಲವರ್ ಬಾಯ್ ಅಂತಾನೇ ಗುರ್ತಿಸಿಕೊಂಡಿದ್ರು. ರಿಷಿ ಕಪೂರ್ ಖ್ಯಾತ ನಟರಷ್ಟೇ ಅಲ್ಲ. ಒಳ್ಳೆಯ ನಿರ್ದೇಶಕ ಕೂಡ ಆಗಿದ್ದರು. 1999 ರಲ್ಲಿ ಆ ಅಬ್ ಲೌಟ್ ಚಲೇ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ರು. ಅಷ್ಟೇ ಅಲ್ಲದೇ ಇಂಗ್ಲೀಷ್ ಚಿತ್ರಗಳಾದ ಡೋಂಟ ಸ್ಟಾಪ್ ಡ್ರೀಮಿಂಗ್ ಮತ್ತು ಸಾಂಬಾರ್ ಸಾಲ್ಸಾದಲ್ಲಿ ನಟನೆ ಮಾಡಿದ್ರು. 2007ರಲ್ಲಿ ರಿಷಿ ಕಪೂರ್ ಅವರ ಅಟೋ ಬಯಾಗ್ರಫಿ ಖುಲ್ಲಂ ಖುಲ್ಲಾ, ರಿಷಿ ಕಪೂರ್ ಉನ್ಸೆನ್ಸಾರ್ಡ್ ಸಿನಿಮಾ ಬಿಡುಗಡೆಯಾಗಿತ್ತು.

 

 

 

 

ಮೊದಲ ಸಿನಿಮಾದಲ್ಲೇ ಉತ್ತಮ ಬಾಲನಟ ಪ್ರಶಸ್ತಿ ಪಡೆದ ಲೆಜೆಂಡ್

ಮೊದಲ ಬಾರಿಗೆ ಬಾಲ ನಟನಾಗಿ ಅಭಿನಯಿಸಿದ್ದ ರಿಷಿ ಕಪೂರಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಮೇರಾನಾಮ್ ಜೋಕರ್ ಸಿನಿಮಾದಲ್ಲಿ ನಟನೆಗೆ ಉತ್ತಮ ಬಾಲನಟ ನ್ಯಾಷನಲ್ ಫಿಲಮ್ ಫೇರ್ ಪ್ರಶಸ್ತಿ ಪಡೆದುಕೊಂಡ್ರು. ನಾಯಕ ನಟನಾಗಿ ಅಭಿನಯಿಸಿದ್ದ ಬಾಬಿ ಸಿನಿಮಾಗೆ ಫಿಲ್ಮಫೇರ್ ಪ್ರಶಸ್ತಿ ಬಾಚಿಕೊಂಡರು. ಜೀವಮಾನ ಸಾಧನೆಗಾಗಿ ಝೀ ಸಿನಿಮಾ ಪ್ರಶಸ್ತಿ, ಫಿಲ್ಮಫೇರ್ ಲೈಫ್ ಟೈಮ್ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ರಷ್ಯಾ ಸರ್ಕಾರದಿಂದ ಪುರಸ್ಕಾರ, ಉತ್ತಮ ನಟ ಪ್ರಶಸ್ತಿ ಸೇರಿದಂತೆ ಇನ್ನು ಹಲವಾರು ಗೌರವಗಳನ್ನು ತಮ್ಮದಾಗಿಸಿಕೊಂಡಿದ್ರು. ಅಲ್ಲದೇ ಇವರ ನಟನೆಯ ಸಾಗರ್ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವಾಗಿತ್ತು. ಹಿಂದಿ ಚಿತ್ರರಂಗದಲ್ಲಿ ಮೇರು ನಟ, ನಿರ್ದೇಶಕನಾಗಿ ಹೆಸರು ಮಾಡಿದ್ದ ರಿಷಿ ಕಪೂರ್ ಇಂದು ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ನಿನ್ನೆಯಷ್ಟೇ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದರು. ಈ ಬೆನ್ನಲ್ಲೇ ಮತ್ತೊಬ್ಬ ಮೇರು ನಟನನ್ನು ಕಳೆದುಕೊಂಡ ಬಾಲಿವುಡ್ ನಲ್ಲಿ ಎಲ್ಲೆಡೆ ನೀರವ ಮೌನ ಆವರಿಸಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಪ್ರಾಣಿಗಳಿಂದ ಸಾಮಾಜಿಕ ಅಂತರದ ಪಾಠ

Thu Apr 30 , 2020
ಅರುಣಾಚಲ ಪ್ರದೇಶ: ಜಾಗತಿಕ ಪಿಡುಗು ಕೋವಿಡ್-೧೯ ಸೋಂಕು ಭೀತಿಯಿಂದಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಆದರೂ ಅದನ್ನು ನಾವು ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಿದ್ದೇವೆ. ಆದರೆ, ಕ್ರೀಡಾ ಸಚಿವ ಕಿರಣ್ ರಿಜುಜು ಹಂಚಿಕೊAಡಿರುವ ಮಂಗಗಳ ಚಿತ್ರವೊಂದು ನಮ್ಮ ತಪ್ಪಿನ ಅರಿವಾಗುವಂತೆ ಮಾಡುತ್ತಿದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಗಡಿ ಭಾಗದಲ್ಲಿರುವ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಮಂಗಗಳಿಗೆ ಕಲ್ಲಂಗಡಿ ಮತ್ತು ಬಾಳೆ ಹಣ್ಣು ನೀಡುತ್ತಿದ್ದಾರೆ. ಈ ವೇಳೆ ಹಣ್ಣು ತಿನ್ನಲು […]

Advertisement

Wordpress Social Share Plugin powered by Ultimatelysocial