4 ಪ್ರಶಸ್ತಿಗಳನ್ನು ಬಾಚಿಕೊಂಡ ರಾಜಮೌಳಿಯ ‘ಆರ್‌ಆರ್‌ಆರ್’ ಚಿತ್ರ.

 

ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಭಾರತವನ್ನ ಹೆಮ್ಮೆ ಪಡುವಂತೆ ಮಾಡುತ್ತಿದೆ ‘ಆರ್‌ಆರ್‌ಆರ್‌’ ಚಿತ್ರತಂಡ. ಇತ್ತೀಚೆಗಷ್ಟೇ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿತು. ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೆ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡು ನಾಮಿನೇಟ್ ಆಗಿದೆ. ಹೀಗಿರುವಾಗಲೇ, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಆರ್‌ಆರ್‌ಆರ್’ ಚಿತ್ರ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬೆಸ್ಟ್ ಇಂಟರ್‌ನ್ಯಾಷನಲ್ ಫಿಲ್ಮ್’, ‘ಬೆಸ್ಟ್ ಆಕ್ಷನ್ ಫಿಲ್ಮ್’, ‘ಬೆಸ್ಟ್ ಸ್ಟಂಟ್ಸ್’, ‘ಬೆಸ್ಟ್ ಸಾಂಗ್’ ವಿಭಾಗಗಳಲ್ಲಿ ‘ಆರ್‌ಆರ್‌ಆರ್‌’ ಚಿತ್ರ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.ಇನ್ನೂ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ 2023ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ರಾಮ್ ಚರಣ್ ಪ್ರೆಸೆಂಟರ್ ಕೂಡ ಆಗಿದ್ದರು.’ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್‌ನಲ್ಲಿ ಭಾರತೀಯ ಚಿತ್ರರಂಗವನ್ನು ರಾಜಮೌಳಿ, ಎಂ.ಎಂ.ಕೀರವಾಣಿ ಜೊತೆಗೆ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ‘ಆರ್‌ಆರ್‌ಆರ್‌’ ಚಿತ್ರವನ್ನ ಗುರುತಿಸಿರುವುದಕ್ಕೆ ಖುಷಿಯಾಗುತ್ತಿದೆ’’ ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆಯ ದಿನ ಮೊಬೈಲ್​ ಸ್ವಿಚ್​ ಆಫ್ ಮಾಡಿ ಬಚ್ಚಿಟ್ಟುಕೊಂಡ ವರ​:

Sun Feb 26 , 2023
ತಿರುವನಂತಪುರ: ಮದುವೆಯ ದಿನವೇ ವರನೊಬ್ಬ ಫೋನ್​ ಸ್ವಿಚ್​​ ಮಾಡಿಕೊಂಡು ಬಚ್ಚಿಟ್ಟುಕೊಂಡಿದ್ದಕ್ಕೆ ಮನನೊಂದು 23 ವರ್ಷದ ಯುವತಿ ಸಾವಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೇರಳದಲ್ಲಿ ನಡೆದಿದೆ.ಮೃತ ಯುವತಿಯನ್ನು ಧನ್ಯಾ ಎಂದು ಗುರುತಿಸಲಾಗಿದೆ.ಈಕೆ ಕೊಲ್ಲಂನ ವಟ್ಟಪಾಡ್​ನಲ್ಲಿರುವ ಮಧು ಭವನ್​ ನಿವಾಸಿ. ಶನಿವಾರ ಬೆಳಗ್ಗೆ 8 ಗಂಟೆಗೆ ತನ್ನ ಬೆಡ್​ರೂಮ್​ನ ಬಾತ್​ರೂಮ್​ನಲ್ಲಿ ಶಾಲೂವಿನಿಂದ ನೇಣು ಬಿಗಿದುಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಧನ್ಯಾಳ ಮೃತದೇಹ ಪತ್ತೆಯಾಗಿದೆ.ಮೃತ ಧನ್ಯಾ, ಕೊಲ್ಲಂನ ಅಂಚಲದ ಅತಿಶಯಮಂಗಲಂ ನಿವಾಸಿ ಅಖಿಲ್​ ಎಂಬಾತನನ್ನು […]

Advertisement

Wordpress Social Share Plugin powered by Ultimatelysocial