ರಮ್ಯಾ ಜೊತೆ ಫೋಟೋ ಶೇರ್ ಮಾಡಿದ ಸಾನ್ಯಾ ಐಯ್ಯರ್,

ಕನ್ನಡ ಕಿರುತೆರೆ ನಟಿ, ಬಿಗ್​ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್ ಅವರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಯಕ್ಟಿವ್ ಆಗಿರುವ ಕಲಾವಿದೆ.ತಮ್ಮ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.ಸಾನ್ಯಾ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಮೇಲಂತೂ ಸಾನ್ಯಾ ಅವರ ಖ್ಯಾತಿ ಹೆಚ್ಚಾಗಿದೆ.ಸಾನ್ಯಾ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ನಟಿ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ನಟಿಯ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಬ್ಯೂಟಿಫುಲ್ ಆಗಿರುವ ಇಬ್ಬರ ಫೋಟೋಗೆ ನೆಟ್ಟಿಗರು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕಾಲೆಳೆಯುತ್ತಿದ್ದಾರೆ.ಸಾನ್ಯಾ ಅವರು ಜೀನ್ಸ್ ಹಾಗೂ ಟಾಪ್ ಧರಿಸಿದ್ದರೆ ರಮ್ಯಾ ಅವರು ಬ್ಲಾಕ್ ಡ್ರೆಸ್ ಮೇಲೆ ವೈಟ್ ಬ್ಲೇಝರ್ ಧರಿಸಿ ಕ್ಯೂಟ್ ಆಗಿ ಕಾಣಿಸಿದ್ದಾರೆ.ನಿಮ್ಮ ವಯಸ್ಸು 21, ರಮ್ಯಾ ವಯಸ್ಸು 40. ಆದರೂ ನೀವೇ ಅವರಿಗಿಂತ ಹೆಚ್ಚು ವಯಸಾದವರಂತೆ ಕಾಣುತ್ತಿದ್ದೀರಿ ಎಂದು ನೆಟ್ಟಿಗರು ಸಾನ್ಯಾರನ್ನು ಟ್ರೋಲ್ ಮಾಡಿದ್ದಾರೆ

.ಸಾನ್ಯಾ ಹಾಗೂ ರಮ್ಯಾ ಅವರು ಜೊತೆಯಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಇಬ್ಬರು ನಟಿಯರೂ ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿದ್ದಾರೆ.ಸಾನ್ಯಾ ಐಯ್ಯರ್ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಅವರ ಬ್ರೈಡಲ್ ಫೋಟೋಸ್ ವೈರಲ್ ಆಗಿದ್ದವು.ಸಾನ್ಯಾ ಐಯ್ಯರ್ ರೂಪೇಶ್ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಬಿಗ್​ಬಾಸ್ ವಿನ್ನರ್ ರೂಪೇಶ್ ಹಾಗೂ ಸಾನ್ಯಾ ಕ್ಲೋಸ್ ಆಗಿದ್ದಾರೆನಟಿ ರಮ್ಯಾ ಅವರು ಉತ್ತರಾಕಾಂಡ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸಿನಿಮಾದ ಮುಹೂರ್ತ ಪೂಜೆ ಈಗಾಗಲೇ ನೆರವೇರಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಜಯ್​ ಭೂಪತಿ ನಿರ್ದೇಶನದ 'ಮಂಗಳಾವರಂ' ಚಿತ್ರದ ಪೋಸ್ಟರ್​ ಬಿಡುಗಡೆ,

Wed Mar 1 , 2023
ಬೆಂಗಳೂರು: ‘ಆರ್​.ಎಕ್ಸ್​.100’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದವರು ನಿರ್ದೇಶಕ ಅಜಯ್​ ಭೂಪತಿ. ಆ ಚಿತ್ರದ ನಂತರ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಉತ್ತರವಾಗಿ, ‘ಮಂಗಳಾವರಂ’ ಎಂಬ ಹೊಸ ಚಿತ್ರವನ್ನು ಅವರು ಘೋಷಿಸಿದ್ದು, ಆ ಚಿತ್ರದ ಕಾನ್ಸಪ್ಟ್​ ಪೋಸ್ಟರ್​ ಇತ್ತೀಚೆಗೆ ಬಿಡುಗಡೆಯಾಗಿದೆ. ‘ ಚಿತ್ರವನ್ನು ಸ್ವಾತಿ ಗುಣಪತಿ ಮತ್ತು ಸುರೇಶ್​ ವರ್ಮಾ ಒಡೆತನದ ಮುದ್ರಾ ಮೀಡಿಯಾ ವರ್ಕ್ಸ್​ ಹಾಗೂ ಅಜಯ್​ […]

Advertisement

Wordpress Social Share Plugin powered by Ultimatelysocial