ನನ್ನ ಹೈಟ್‌ ನನಗೆ ಮೈನಸ್‌ ಅನ್ನುತ್ತಿದ್ದರು, ಅದೇ ಪ್ಲಸ್‌ ಆಯಿತು

ಕಾಲಿವುಡ್‌ ನಟಿ ಶ್ರುತಿ ಹಾಸನ್‌  ಆಗಾಗ ತಮ್ಮ ಹೇಳಿಕೆ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟನಾ ಜೀವನದಲ್ಲಿ ತಾವು ಎದುರಿಸಿರುವ ಕಮೆಂಟ್‌ಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ನಟ ಕಮಲ್‌ ಹಾಸನ್‌ ಅವರ ಪುತ್ರಿ ಶ್ರುತಿ ಹಾಸನ್‌ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಸದ್ಯ ಪ್ರಶಾಂತ್‌ ನೀಲ್‌ ನಿರ್ದೇಶನದ ʻಸಲಾರ್‌ʼ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರುತಿ ಹಾಸನ್‌ ʻʻಸಿನಿರಂಗಕ್ಕೆ ನಾನು ಪದಾರ್ಪಣೆ ಮಾಡುವ ಸಮಯದಲ್ಲಿ ನನ್ನ ಹೈಟ್‌ ನನಗೆ ಮೈನಸ್‌ ಆಗಿತ್ತು. ಕೆಲವರು ಇಷ್ಟೇ ಹೈಟ್‌ ಇದ್ದೀಯ, ಇದೇ ನಿನಗೆ ಮೈನಸ್‌ ಎಂದು ಹೇಳುತ್ತಿದ್ದರು. ಅದು ತುಂಬ ನೋವು ತರುತ್ತಿತ್ತು. ಆಮೇಲೆ ನನಗೆ ಗೊತ್ತಾಯಿತು, ಇದೇ ನನಗೆ ಪ್ಲಸ್‌ ಎಂದು. ಕಡಿಮೆ ಹೈಟ್‌ ಇದ್ದುದಕ್ಕಾಗಿಯೇ ನನಗೆ ಮಹೇಶ್‌ ಬಾಬು, ಪ್ರಭಾಸ್‌ ಅವರಂತಹ ಸ್ಟಾರ್‌ ನಟರುಗಳ ಜತೆ ಸ್ಕ್ರೀನ್‌ ಶೇರ್‌ ಮಾಡುವ ಅವಕಾಶ ಸಿಕ್ಕಿತುʼʼ ಎಂದು ಹೇಳಿಕೊಂಡಿದ್ದಾರೆ.ಹಲವು ಸಂದರ್ಶನಗಳಲ್ಲಿ ಶ್ರುತಿ ಹಾಸನ್‌ ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಂಡಿದ್ದಾರೆ. ಈ ಹಿಂದೆ ʻʻನಾನು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುವಾಗ ಒಬ್ಬರನ್ನೂ ನೋಡಿ ಕಲಿತಿಲ್ಲ. ಇವರಂತೆ ನಟಿಸಬೇಕು ಎಂದು ಆಸೆ ಪಟ್ಟವಳು ನಾನಲ್ಲ. ನನ್ನ ತಂದೆ-ತಾಯಿಯ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ. ಎಲ್ಲವೂ ನಾನೇ ಕಲಿತದ್ದುʼʼ ಎಂದು ಹೇಳಿಕೊಂಡಿದ್ದರು.ಸಿನಿಮಾಗಳಲ್ಲಿ ಬ್ಯುಸಿಯಾದ ಶ್ರುತಿಮೆಗಾಸ್ಟಾರ್‌ ಚಿರಂಜೀವಿ ಜೋಡಿಯಾಗಿ ʻವಾಲ್ತೇರು ವೀರಯ್ಯʼʼ ಸಿನಿಮಾದಲ್ಲಿ ಮಿಂಚಲಿದ್ದಾರೆ. ‘ವೀರಸಿಂಹ ರೆಡ್ಡಿ’ ಚಿತ್ರದಲ್ಲಿ ಬಾಲಕೃಷ್ಣಗೆ ಜೋಡಿಯಾಗಿದ್ದಾರೆ. ಎರಡೂ ಚಿತ್ರಗಳು ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ. ʻದಿ ಐʼಎನ್ನುವ ಇಂಗ್ಲೀಷ್‌ ಪ್ರಾಜೆಕ್ಟ್‌ನಲ್ಲಿಯೂ ಕೆಲಸ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಶೂಟಿಂಗ್‌ ವೇಳೆ ಮೂಗಿನಲ್ಲಿ ರಕ್ತಸ್ರಾವ

Mon Dec 26 , 2022
ಪಂಜಾಬಿ ಬಿಗ್ ಬಾಸ್ 13 ಸ್ಪರ್ಧಿ, ನಟಿ ಹಾಗೂ ಗಾಯಕಿ ಹಿಮಾಂಶಿ ಖುರಾನಾ ಮೂಗಿನ ರಕ್ತಸ್ರಾವ ಮತ್ತು ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಮೇನಿಯಾದಲ್ಲಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ಅದು ನಿಲ್ಲದೇ ಇರುವ ಕಾರಣಕ್ಕಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ತಮ್ಮ ಮುಂಬರುವ ಪಂಜಾಬಿ ಚಿತ್ರ ‘ಫಟ್ಟೊ ದೇ ಯಾರ್ ಬಡೇ ನೆ’ […]

Advertisement

Wordpress Social Share Plugin powered by Ultimatelysocial